Advertisement
ಡಿ. 8ರಂದು ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗ ಮತ್ತು ಲಲಿತ ಕಲಾ ವಿಭಾಗದ ವತಿಯಿಂದ ಡೊಂಬಿವಲಿ ಪೂರ್ವದ ರೋಟರಿ ಸಭಾಗೃಹದಲ್ಲಿ ನಡೆದ ವಾರ್ಷಿಕ ನಾಡಹಬ್ಬ ಸಂಭ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ಮೂಲ ಬೇರು ಕರ್ನಾಟಕವಾಗಿದ್ದು, ತಾಯ್ನಾಡನ್ನೂ ಮರೆಯದಂತೆ ಸಮಯ ಸಿಕ್ಕಾಗ ಕನ್ನಡವನ್ನು ಉಳಿಸಿ-ಬೆಳೆಸುವ ಕಾರ್ಯ ಮಾಡುತ್ತೇವೆ. ಆದರೆ ನಮ್ಮ ಜನ್ಮಭೂಮಿಯ ಋಣವನ್ನು ತೀರಿಸಲು ಹೇಗೆ ಸಾಧ್ಯವಿಲ್ಲವೂ ಹಾಗೆ ಕರ್ಮಭೂಮಿಯಾದ ಮಹಾರಾಷ್ಟ್ರದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಕರ್ನಾಟಕ ನಮಗೆ ಜನ್ಮ ನೀಡಿದರೆ, ಮಹಾರಾಷ್ಟ್ರ ನಮಗೆ ಅನ್ನ ನೀಡಿದ್ದು, ಜನ್ಮ ಹಾಗೂ ಕರ್ಮಭೂಮಿಯನ್ನು ಗೌರವಿಸೋಣ. ಕರ್ನಾಟಕ ಸಂಘದ ಕನ್ನಡದ ಕೈಂಕರ್ಯ ಅಭಿನಂದನೀಯವಾಗಿದೆ ಎಂದು ನುಡಿದರು.ಅತಿಥಿಯಾಗಿ ಆಗಮಿಸಿದ ರಂಗಭೂಮಿ ಕಲಾವಿದ, ಡೊಂಬಿವಲಿ ಕರ್ನಾಟಕ ಸಂಘದ ಸಂಸ್ಥಾಪಕ ಸದಸ್ಯ ಸುರೇಂದ್ರ ಕುಬೇರ ಅವರು ಮಾತನಾಡಿ, ಐದು ದಶಕಗಳ ಹಿಂದೆ ಪ್ರಾರಂಭ ಗೊಂಡ ಡೊಂಬಿವಲಿ ಕರ್ನಾಟಕ ಸಂಘ ಎಂಬ ಪುಟ್ಟ ಸಸಿ ಇಂದು ವಿಶಾಲ ವೃಕ್ಷವಾಗಿ ಬೆಳೆಯು ವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ. ಹೊಸ ನೀರು ಬಂದಾಗ ಹಳೆ ನೀರು ಹರಿದು ಹೋಗಲೇ ಬೇಕು. ಮನುಷ್ಯನಿಗೆ ಹುಟ್ಟು ಸ್ವಾಭಾವಿಕ. ಆದರೆ ಸಾವು ನಿಶ್ಚಿತ. ಆದರೆ ಪ್ರಬಲವಾದ ಕಾರ್ಯಕರ್ತರ ತಂಡ ಹಾಗೂ ಪ್ರಗತಿಪರ ವಿಚಾರಗಳಿದ್ದರೆ ಸಂಘಟನೆಗಳಿಗೆ ಸಾವಿಲ್ಲ. ಅದಕ್ಕೆ ಡೊಂಬಿವಲಿ ಕರ್ನಾಟಕ ಸಂಘು ಅಮರವಾಗಿದೆ ಎಂದು ನುಡಿದು, ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀ ಯರನ್ನು ಸ್ಮರಿಸಿ ಅಭಿನಂದಿಸಿದರು.
Related Articles
Advertisement
ನಾಡಹಬ್ಬದ ನಿಮಿತ್ತ ಸಂಘದ ವಿವಿಧ ವಿಭಾಗಗಳು ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ದರು. ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ವಿತರಿಸಿದರು.ವಿಮಲಾ ಶೆಟ್ಟಿ, ಯೋಗಿನಿ ಶೆಟ್ಟಿ, ವಿದ್ಯಾ ಆಲಗೂರ ವಿಜೇತ ಸ್ಪರ್ಧಿಗಳ ಯಾದಿಯನ್ನು ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಮಹಿಳಾ ವಿಭಾಗದವರಿಂದ ಹಾಗೂ ನಿಕಿತಾ ಸದಾನಂದ ಅಮೀನ್ ತಂಡದವರಿಂದ ನೃತ್ಯ ವೈವಿಧ್ಯ ನಡೆಯಿತು. ಮಾಧುರಿಕಾ ಬಂಗೇ ರ ಮತ್ತು ಹೇಮಾ ಸದಾನಂದ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ, ಉಪ ಕಾರ್ಯಾಧ್ಯಕ್ಷ ಡಾ| ವಿ.ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಗೌರವ ಕಾರ್ಯದರ್ಶಿ ಮಾಧುರಿಕಾ ಬಂಗೇರ, ಕೋಶಾಧಿಕಾರಿ ಯೋಗಿನಿ ಶೆಟ್ಟಿ, ಸಂಘದ ಕೋಶಾಧಿಕಾರಿ ಲೋಕನಾಥ ಶೆಟ್ಟಿ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು. ಹೇಮಾ ಹೆಗ್ಡೆ, ಭಾವನಾ ಬಂಗೇರ ಬಳಗದವರು ಪ್ರಾರ್ಥನೆಗೈದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿಟuಲ್ ಶೆಟ್ಟಿ, ವಸಂತ ಕಲಕೋಟಿ, ಜಗತ್ಪಾಲ ಶೆಟ್ಟಿ, ರಾಜು ಭಂಡಾರಿ, ಆನಂದ ಶೆಟ್ಟಿ, ಸತೀಶ್ ಆಲಗೂರ, ನ್ಯಾಯವಾದಿ ಆರ್. ಎನ್. ಭಂಡಾರಿ, ರವಿ ಸನಿಲ್, ಮೋಹನ್ ಸಾಲ್ಯಾನ್, ಮುರಳಿ ಶೆಟ್ಟಿ, ಕೃಷಿ¡ ಶೆಟ್ಟಿ, ಗೀತಾ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಸುವರ್ಣ, ಗೀತಾ ಕೋಟೆಕಾರ್, ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ, ಪುಷ್ಪಾ ಸಾಲ್ಯಾನ್, ಪವಿತ್ರಾ ಶೆಟ್ಟಿ, ಕಾಂತಿಲಾಲ ಚೌಧರಿ ಮೊದಲಾದವರು ಸಹಕರಿಸಿದರು. ಕರ್ನಾಟಕದಲ್ಲಿ ಕೇವಲ ನವೆಂಬರ್ ಒಂದರಂದು ಕನ್ನಡ ಮಂತ್ರವನ್ನು ಜಪಿಸಿ ಕನ್ನಡವನ್ನು ಉಳಿಸಿ-ಬೆಳೆಸುವ ಮಾತು ಹೇಳುತ್ತಾರೆ. ಆದರೆ ಮುಂಬಯಿ ಮತ್ತು ಉಪನಗರಗಳಲ್ಲಿ ಕನ್ನಡಮ್ಮನ ನಿತ್ಯೋತ್ಸವ ವರ್ಷದ ದಿನವಿಡೀ ನಡೆಯುತ್ತಿರುತ್ತದೆ. ಸಮಾಜದ ವಿಶೇಷವಾಗಿ ಯಾವುದೇ ಕನ್ನಡಿಗರ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು ಎಂಬ ಉದ್ದೇಶದಿಂದ ಪ್ರಾರಂಭಿಸಿದ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಶಿಕ್ಷಣ ಸಂಸ್ಥೆ ಗಳು ಪ್ರಸ್ತುತ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಮನ ಸೆಳೆದಿದ್ದು, ಇದಕ್ಕೆ ಅಂದು ಸಂಘ ಕಟ್ಟಿದ ಹಿರಿಯರ ಆಶೀರ್ವಾದ, ಇಂದಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮವೇ ಕಾರಣ.
– ಇಂದ್ರಾಳಿ ದಿವಾಕರ ಶೆಟ್ಟಿ, ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ ಚಿತ್ರ-ವರದಿ : ಗುರುರಾಜ ಪೋತನೀಸ್