Advertisement

Dollars pete: ಡಾಲರ್ಸ್‌ ಪೇಟೆಯಲ್ಲಿ ಬ್ಯಾಂಕ್‌ ಕಥಾನಕ! ಸೆ.6ಕ್ಕೆ ತೆರೆಗೆ

12:06 PM Aug 28, 2024 | Team Udayavani |

ಗೆಲ್ಲುವ ಭರವಸೆಯ ಮೂಲಕ ಮತ್ತೂಂದು ಹೊಸಬರ ಗುಂಪು ಚಿತ್ರರಂಗಕ್ಕೆ ಕಾಲಿಟ್ಟಿದೆ. ಅದು “ಡಾಲರ್ಸ್‌ ಪೇಟೆ’ ಮೂಲಕ. ಮೋಹನ್‌ ಎನ್‌ ಮುನಿನಾರಾಯಣಪ್ಪ ಈ ಸಿನಮಾದ ನಿರ್ದೇಶಕರು. ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆಪ್ಟಂಬರ್‌ 6ಕ್ಕೆ ಚಿತ್ರ ರಿಲೀಸ್‌ ಆಗುತ್ತಿದೆ.

Advertisement

ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್‌ನಿಂದ 13 ಕೋಟಿ ರೂ. 100 ಜನಕ್ಕೆ ಮಿಸ್‌ ಆಗಿ ಡೆಪಾಸಿಟ್‌ ಆಗುತ್ತದೆ. ಅದು ಹೇಗೆ, ಏನು ಅನ್ನುವದರ ಸುತ್ತ ಈ ಸಿನಿಮಾ ಸಾಗುತ್ತದೆ. ಹೈಪರ್‌ ಲಿಂಕ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್‌ ಪತ್ನಿ ಸೌಮ್ಯ ಜಗನ್‌ ಮೂರ್ತಿ, ಆಕರ್ಷ್‌ ಕಮಲ, ವೆಂಕಟ್‌ ರಾಜ್, ಕುಶಾಲ್ಸ್‌ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಉಳಿದಂತೆ ದತ್ತು ಬಣಕರ್‌, ಕೌಶಿಕ್‌, ರಾಘು ರಾಮಕೊಪ್ಪ, ಹೊನ್ನವಳ್ಳಿ ಕೃಷ್ಣ, ಡ್ರಾಮಾ ಜೂನಿಯರ್ಸ್‌ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.

ಸೂರಜ್‌ ಜೋಯಿಸ್‌ ಸಂಗೀತ ನಿರ್ದೇಶನ, ಆನಂದ್‌ ಸುಂದರೇಶ ಛಾಯಾಗ್ರಹಣ, ಮಹೇಶ್‌ ತೊಗಟ್ಟ ಸಂಕಲನ, ಅರ್ಜುನ್‌ ರಾಜ್‌ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್‌ ಎಸ್‌, ಮನೋಹರ ಸಹಬರವಣಿಗೆ ಸಿನಿಮಾಕ್ಕಿದೆ. ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಂಗಳೂರು ಸುತ್ತಮುತ್ತ ಡಾಲರ್ಸ್‌ ಪೇಟೆ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next