Advertisement

ಡಾಲರ್‌ ಕಾಲೋನಿ

10:15 PM Sep 08, 2019 | Sriram |

ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಹಾಗೆಂದರೇನು? ಎಲ್ಲೋ ಏರುವ- ಕುಸಿಯುವ ರೂಪಾಯಿ ಮೌಲ್ಯದ ಬಿಸಿ ಜನಸಾಮಾನ್ಯರಿಗೆ ತಟ್ಟುವುದು ಹೇಗೆ ಎಂದರೆ…

Advertisement

ಒಂದು ಕಡೆ ಅಮೇರಿಕಾ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ಮುಂದುವರೆದಿದೆ. ಮತ್ತೂಂದು ಕಡೆ ಇರಾನ್‌ ಮತ್ತು ಅಮೇರಿಕಾ ನಡುವಿನ ವಿವಾದ ಜಟಿಲವಾಗುತ್ತಿದೆ. ಅರ್ಜೆಂಟೀನಾ, ಶೇಕಡಾ 54ರಷ್ಟು ಹಣದುಬ್ಬರದಿಂದ ಕಂಗೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತದ ರೂಪಾಯಿ ಮೌಲ್ಯ ಕುಸಿತವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು ಸಹಜ ಪ್ರಕ್ರಿಯೆ. ಇದನ್ನು ತಡೆಯಲು ಸರ್ಕಾರ ಅಥವಾ ರಿಸರ್ವ್‌ ಬ್ಯಾಂಕಿಗೂ ಸಾಧ್ಯವಿಲ್ಲ. ಹಾಗೆ ನೋಡಿದರೆ, ಭಾರತದ ರೂಪಾಯಿ ಮೌಲ್ಯ ಕುಸಿತವಾದಂತೆ, ಚೀನಾದ ಕರೆನ್ಸಿ ಯುವಾನ್‌ ಮೌಲ್ಯ ಕಳೆದ 12 ವರ್ಷಗಳಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದಿದೆ.

ಅಮೇರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯಲು, ಅಂತಾರಾಷ್ಟ್ರೀಯ ಮತ್ತು ದೇಶೀಯ ಕಾರಣಗಳಿವೆ.

1) ಒಂದು ಕಡೆ ಚೀನಾದ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸಿರುವ ಅಮೇರಿಕಾ, ಮತ್ತೂಂದು ಕಡೆ ಭಾರತದಿಂದ ರಫ್ತಾಗುತ್ತಿದ್ದ ಹಲವು ಉತ್ಪನ್ನಗಳಿಗೆ ಈ ಮೊದಲು ನೀಡಿದ್ದ ಸುಂಕ ರಿಯಾಯಿತಿಯನ್ನು ಹಿಂಪಡೆದಿದೆ. ಅಮೇರಿಕಾದ ಈ ಕ್ರಮಕ್ಕೆ ಪ್ರತಿಕಾರವಾಗಿ ಅಮೇರಿಕಾ ರಫ್ತು ಮಾಡುತ್ತಿದ್ದ ಹಲವು ಉತ್ಪನ್ನಗಳ ಮೇಲೆ ಭಾರತವೂ ಹೆಚ್ಚು ಸುಂಕ ವಿಧಿಸಿದೆ.

Advertisement

2) ಆದರೆ ವರ್ಷ 2018ರಲ್ಲಿ ಭಾರತವು ಅಮೇರಿಕಾಗೆ 58.9 ಬಿಲಿಯನ್‌ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದರೆ, ಅಮೇರಿಕಾವು ಭಾರತಕ್ಕೆ 83.2 ಬಿಲಿಯನ್‌ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ರಫ್ತಿನಿಂದ ಗಳಿಸುವ ಆದಾಯಕ್ಕಿಂತ, ನಾವು ಮಾಡಿಕೊಳ್ಳುವ ಅಮದಿಗೆ ಹೆಚ್ಚು ಹಣ ವೆಚ್ಚ ಮಾಡಬೇಕಾಗುವ ಸ್ಥಿತಿಯನ್ನು ಚಾಲ್ತಿ ಖಾತೆಯ ಕೊರತೆ ಎಂದು ಕರೆಯಲಾಗುತ್ತದೆ. ಚಾಲ್ತಿ ಖಾತೆಯ ಕೊರತೆ ಹೆಚ್ಚಾದಂತೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತದೆ. ರಫ್ತು ಆದಾಯ ಹೆಚ್ಚಾದಾಗ ಚಾಲ್ತಿ ಖಾತೆಯ ಕೊರತೆ ಕೂಡಾ ಕಡಿಮೆಯಾಗುತ್ತದೆ ಮತ್ತು ರೂಪಾಯಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಈ ಕುರಿತು ಪ್ರಯತ್ನಗಳು ನಡೆದಿವೆ.

3) ಭಾರತ ತನ್ನ ಕಚ್ಛಾತೈಲದ ಅಗತ್ಯದಲ್ಲಿ ಶೇಕಡಾ 80ರಷ್ಟನ್ನು ಅಮದು ಮಾಡಿಕೊಳ್ಳುತ್ತಿದೆ. ಇರಾನ್‌ನಿಂದ ಕಡಿಮೆ ಬೆಲೆಯಲ್ಲಿ ನಮಗೆ ಕಚ್ಛಾತೈಲ ಸಿಗುತ್ತಿತ್ತು. ಭಾರತ ಖರೀದಿಸುವ ಕಚ್ಛಾತೈಲಕ್ಕೆ ಡಾಲರ್‌ ಬದಲು ರೂಪಾಯಿ ಲೆಕ್ಕದಲ್ಲಿ ಪಾವತಿ ಪಡೆಯಲು ಇರಾನ್‌ ಸಮ್ಮತಿಸಿತ್ತು. ಆದರೆ ಅಮೇರಿಕಾ ಮತ್ತು ಇರಾನ್‌ ವಿವಾದ ಜಟಿಲವಾದಂತೆ, ಅಮೇರಿಕಾದ ಒತ್ತಡಕ್ಕೆ ಮಣಿದ ಹಲವಾರು ದೇಶಗಳಂತೆ, ಇರಾನ್‌ನಿಂದ ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸಬೇಕಾಯಿತು. ಪರಿಣಾಮ, ವಿಶ್ವಮಟ್ಟದಲ್ಲಿ ಕಚ್ಛಾತೈಲದ ದರದಲ್ಲಿ ಏರಿಕೆಯಾಗಿದೆ. ಈ ಎಲ್ಲಾ ವಿದ್ಯಮಾನಗಳಿಂದ ಭಾರತ ಕಚ್ಛಾತೈಲ ಖರೀದಿಗೆ ಮತ್ತು ಸಾಗಾಣಿಕೆಗೆ ಹೆಚ್ಚು ಡಾಲರ್‌ ಪಾವತಿ ಮಾಡಬೇಕಾಗಿದೆ. ಇದರಿಂದಾಗಿ ಕೂಡಾ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದೆ.

4) ಜುಲೈ 2019ರಲ್ಲಿ ವಿದೇಶಿ ಹೂಡಿಕೆದಾರರು ಭಾರತದಿಂದ 2985.88 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ಹಿಂಪಡೆದಿ¨ªಾರೆ. ಇದೇ ರೀತಿ ಆಗÓr… ತಿಂಗಳಿನಲ್ಲಿ 5920 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದಾರೆ. ಹೂಡಿಕೆಯನ್ನು ಹಿಂಪಡೆಯುವಾಗ, ಡಾಲರ್‌ ಲೆಕ್ಕದಲ್ಲಿ ಮೊತ್ತವನ್ನು ಹಿಂತಿರುಗಿಸಬೇಕಾಗುತ್ತದೆ. ಇದರಿಂದಾಗಿಯೂ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿದೆ.

ಬೆಲೆ ಏರಿಕೆ ಅನಿವಾರ್ಯವಾಗಲಿದೆಯೇ?
ಭಾರತದ ಜಿಡಿಪಿ 5.0ಕ್ಕೆ ಇಳಿದಿರುವುದು ಮೊದಲಾದ ಕಾರಣಗಳಿಂದ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆ ಹಿಂಪಡೆಯುತ್ತಿದ್ದಾರೆ.ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಇತ್ತೀಚಿಗೆ ಭಾರತ ಪ್ರಕಟಿಸಿರುವುದರಿಂದ, ಮುಂಬರುವ ದಿನಗಳಲ್ಲಿ ಹೆಚ್ಚು ವಿದೇಶಿ ಹೂಡಿಕೆ ಭಾರತಕ್ಕೆ ದೊರೆಯುವ ಸಾಧ್ಯತೆಗಳಿವೆ.

ಡಾಲರ್‌ ವಿರುದ್ಧ ರೂಪಾಯಿ ಮೌಲ್ಯವು 73 ರೂಪಾಯಿವರೆಗೆ ಕುಸಿಯಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಇದೇ ರೀತಿ ರೂಪಾಯಿ ಮೌಲ್ಯ ಹಲವಾರು ತಿಂಗಳವರೆಗೆ ಮುಂದುವರಿದರೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟುವುದು ನಿಶ್ಚಿತ. ನಾವು ಶೇಕಡಾ 80ರಷ್ಟು ಇಂಧನ ತೈಲವನ್ನು ಅಮದು ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಇನ್ನೂ ಹೆಚ್ಚು ಇಂಧನ ತೈಲವನ್ನು ಭಾರತ ಅಮದು ಮಾಡಿಕೊಳ್ಳಬೇಕಾಗುತ್ತದೆ. ಡಾಲರ್‌ ಬೆಲೆ ಏರಿದಂತೆ, ನಾವು ಅಮದು ಮಾಡಿಕೊಳ್ಳುವ ಇಂಧನ ತೈಲಕ್ಕೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಭಾರತದಲ್ಲಿ ಮಾರಾಟವಾಗುವ ಪೆಟ್ರೋಲ್‌ ಡೀಸೆಲ್‌ ಬೆಲೆ ನಿಗದಿಯಾಗುತ್ತಿರುವುದರಿಂದ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಂತೆ, ಭಾರತದಲ್ಲಿ ಮಾರಾಟವಾಗುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಾಗುತ್ತದೆ.

ಜನಸಾಮಾನ್ಯರೂ ಜವಾಬ್ದಾರರು
ಇದೇ ರೀತಿ ನಾವು ಗೃಹಬಳಕೆಯ ಮತ್ತು ವಾಹನಗಳಲ್ಲಿ ಬಳಸುವ ಗ್ಯಾಸ್‌ ಕೂಡಾ, ಡಾಲರ್‌ ಕೊಟ್ಟು ವಿದೇಶದಿಂದ ಖರೀದಿಸಲಾಗುತ್ತಿದೆ. ಡಾಲರ್‌ ಬೆಲೆ ಏರಿದಂತೆ, ಎಲ್‌ಪಿಜಿ ದರ ಕೂಡಾ ಹೆಚ್ಚಾಗುತ್ತದೆ. ಪೆಟ್ರೋಲ್‌, ಡೀಸೆಲ್‌ ಗ್ಯಾಸ್‌ ದರ ಹೆಚ್ಚಾದಂತೆ ಬಸ್ಸು, ರೈಲು, ವಿಮಾನದ ಪ್ರಯಾಣದ ದರಗಳೂ ಹೆಚ್ಚಾಗಬಹುದು. ಇದಲ್ಲದೆ ವಿದೇಶದಿಂದ ನಾವು ಅಮದು ಮಾಡಿಕೊಳ್ಳುವ ಉತ್ಪನ್ನಗಳು, ಜೀವರಕ್ಷಕ ಔಷಧಗಳು, ಆಹಾರ ಧಾನ್ಯಗಳು, ಖಾದ್ಯ ತೈಲ, ಇತ್ಯಾದಿಗಳ ಬೆಲೆ ಹೆಚ್ಚಾಗುತ್ತದೆ. ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಪೆಟ್ರೋಲ್‌ನ ಬೆಲೆ ಜಾಸ್ತಿಯಾಗುತ್ತದೆ ಅಂದರೂ ಅದನ್ನು ಖರೀದಿಸಲು ನಮ್ಮ ಜನ ಹಿಂದೇಟು ಹಾಕುವುದಿಲ್ಲ. ಡಾಲರ್‌ ಎದುರು ರೂಪಾಯಿ ದರ ಕುಸಿಯಲು ಇದೂ ಒಂದು ಕಾರಣ. ನಮ್ಮ ಜನ ಹೆಚ್ಚಾಗಿ ಕಾರು, ಬೈಕ್‌ ಬಳಕೆ ಕಡಿಮೆ ಮಾಡಿದರೆ, ಆಗ ಸಹಜವಾಗಿಯೇ ತೈಲ ಉತ್ಪನ್ನಗಳ ಬಳಕೆ ಕೂಡ ಕಡಿಮೆ ಆಗುತ್ತದೆ. ಅಗತ್ಯ ಇರುವಷ್ಟನ್ನು ಮಾತ್ರ ಖರೀದಿಸಿದಾಗ, ಅದರ ಬೆಲೆ ಕೂಡ ಆರಕ್ಕೆ ಏರದೆ, ಮೂರಕ್ಕೆ ಇಳಿಯದೆ ಇರುತ್ತದೆ. ಅದರರ್ಥ ಇಷ್ಟೇ- ರೂಪಾಯಿ ಮೌಲ್ಯ ಕುಸಿಯದಂತೆ ಮಾಡಲು ಜನಸಾಮಾನ್ಯರೂ ಪ್ರಯತ್ನಿಸಬಹುದು.

ಪರ್ಯಾಯಕ್ಕೆ ಎಸ್‌ ಎನ್ನಿ
2015-16ರಲ್ಲಿ 184.7 ಮಿಲಿಯನ್‌ ಟನ್‌ ಇಂಧನ ತೈಲ ಬಳಸಿದ ಭಾರತ, 2018-19ರಲ್ಲಿ 211.6 ಮಿಲಿಯನ್‌ ಟನ್‌ ಇಂಧನ ಬಳಸಿದೆ. ವರ್ಷದಿಂದ ವರ್ಷಕ್ಕೆ ಇಂಧನದ ಬೇಡಿಕೆ ಹಲವು ಮಿಲಿಯನ್‌ ಟನ್‌ಗಳಷ್ಟು ಹೆಚ್ಚಾಗುತ್ತಿದೆ. ಇದನ್ನು ಇಳಿಸುವ ಅಗತ್ಯವಿದೆ. ಅಮದು ಮಾಡಿಕೊಳ್ಳುವ ಇಂಧನದ ಪ್ರಮಾಣ ಹೆಚ್ಚಾಗಲು, ದೇಶದಲ್ಲಿ ಸಿಗುತ್ತಿದ್ದ ಇಂಧನ ಪ್ರಮಾಣ ಕಡಿಮೆಯಾಗುತ್ತಿರುವುದೂ ಒಂದು ಕಾರಣ. ಸರ್ಕಾರವು ಜೈವಿಕ ಇಂಧನ ಮೊದಲಾದ ಪರ್ಯಾಯ ಇಂಧನ, ವಿದ್ಯುತ್‌ಚಾಲಿತ ವಾಹನಗಳು, ಹೀಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜನಸಾಮಾನ್ಯರು ಹೆಚ್ಚು ಆಸಕ್ತಿ ತೋರಿಸಬೇಕಷ್ಟೆ.

– ಉದಯ ಶಂಕರ ಪುರಾಣಿಕ

Advertisement

Udayavani is now on Telegram. Click here to join our channel and stay updated with the latest news.

Next