Advertisement

ಡೋಕ್‌ಲಾಂ ಬಿಕ್ಕಟ್ಟು : ಭಾರತ –ಚೀನ ನೇರ ಮಾತುಕತೆಗೆ ಅಮೆರಿಕ ಆಗ್ರಹ

11:01 AM Jul 19, 2017 | Team Udayavani |

ವಾಷಿಂಗ್ಟನ್‌ : ಏಶ್ಯದ ದಿಗ್ಗಜಗಳಾಗಿರುವ ಭಾರತ ಮತ್ತು ಚೀನ ತಮ್ಮೊಳಗಿನ ಗಡಿ ಬಿಕ್ಕಟ್ಟು, ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಪರಿಹರಿಸಿಕೊಂಡು ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಅಮೆರಿಕ ಒತ್ತಾಯಿಸಿದೆ.

Advertisement

ಸಿಕ್ಕಿಂನ ಡೋಕ್‌ಲಾಂ ಗಡಿಯಲ್ಲಿ  ಭಾರತ ಮತ್ತು ಚೀನ ಸೇನೆ ಕಳೆದ ಎರಡು ತಿಂಗಳ ಸುದೀರ್ಘ‌ ಸಮಯದಿಂದ ಮುಖಾಮುಖೀಯಾಗಿ ಸಂಘರ್ಷ ಸನ್ನದ್ಧ ಸ್ಥಿತಿಯಲ್ಲಿ ಬೀಡು ಬಿಟ್ಟಿವೆ. 

ಸಿಕ್ಕಿಂ ಗಡಿಯಲ್ಲಿ ಭಾರತ – ಚೀನ ಉದ್ವಿಗ್ನತೆಯ ತೀವ್ರತೆಯ ಬಗ್ಗೆ ನಮಗೆ ಕಳವಳವಿದೆ; ಉಭಯ ದೇಶಗಳು ಮಾತುಕತೆಯ ಮೂಲಕ ತಮ್ಮೊಳಗಿನ ಭಿನ್ನಮತ, ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆ ಹರಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಸೀದರ್‌ ನ್ಯೂವರ್ಟ್‌ ಹೇಳಿದ್ದಾರೆ. 

ಭಾರತ ಮತ್ತು ಚೀನ ನೇರ ಮಾತುಕತೆಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಪ್ರೋತ್ಸಾಹಿಸುತ್ತೇವೆ; ಆ ಮೂಲಕ ಉಭಯ ದಿಗ್ಗಜ ದೇಶಗಳು ಗಡಿ ಬಿಕ್ಕಟ್ಟು, ಉದ್ವಿಗ್ನತೆಯನ್ನು ಶಮನ ಮಾಡುವುವೆಂದು ನಾವು ಆಶಿಸುತ್ತೇವೆ ಎಂದು ನ್ಯೂವರ್ಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next