Advertisement
ಮಾದಪುರದಿಂದ ಹಟ್ಟಿಹೊಳೆ ಮಾರ್ಗದಲ್ಲಿ ಸಿಗುವ ಸೇತುವೆಯ ಬಲಕ್ಕೆ ಸಾಗುವ ದಾರಿಯಲ್ಲಿ ಹತ್ತಾರು ಮನೆಗಳು ಸಿಗುತ್ತದೆ. ಆಗಸ್ಟ್ ಮೊದಲೆರೆಡು ವಾರದಲ್ಲಿ ಸುರಿದ ಭಾರಿ ಮಳೆಗೆ ಹಟ್ಟಿಹೊಳೆ ಉಕ್ಕಿ ಹರಿದು ಬಹುತೇಕ ಎಲ್ಲ ಮನೆಗೂ ನೀರು ನುಗ್ಗಿದೆ. ಕೆಲವು ಮನೆಗಳೇ ಕುಸಿದು ಬಿದ್ದರೆ ಇನ್ನು ಕೆಲವು ಮನೆಯೊಳಗೆ ಎರಡುವರೆ ಮೂರು ಅಡಿ ಎತ್ತರದಷ್ಟು ಹೂಳು ತುಂಬಿಕೊಂಡಿದೆ. ಮನೆಯೊಳಗೆ ಹಾವುಗಳು ಸೇರಿಕೊಂಡಿವೆ.
ಮನೆಯಲ್ಲಿ ಜನರಿಲ್ಲ ಆದರೆ ನಾಯಿ, ಕೋಳಿಗಳು ಮನೆಬಿಟ್ಟು ಹೋಗಿಲ್ಲ. ಮನೆಯ ಅಂಗಳದಲ್ಲೇ ಓಡಾಡಿಕೊಂಡು ಮನೆಯ ಯಜಮಾನನ ಬರುವಿಕೆಗೆ ಕಾಯುತ್ತಿವೆ. ಹಟ್ಟಿಹೊಳೆ ಸುತ್ತಮುತ್ತಲ ಜನರು ನಾಟಿಕೋಳಿ, ಗಿರಿರಾಜ, ಬಾತು ಕೋಳಿ ಹೀಗೆ ವಿವಿಧ ರೀತಿಯ ಕೋಳಿಗಳನ್ನು ಸಾಕಿಕೊಂಡಿದ್ದರು. ಮನೆಯಲ್ಲಿದ್ದವರು ನಿರಾಶ್ರಿತ ಕೇಂದ್ರದಲ್ಲಿರವುದರಿಂದ ಈಗ ಕೋಳಿ ನಾಯಿಗಳು ಮನೆಯ ಎದುರು ಬೆಳಗ್ಗಿನಿಂದ ಸಂಜೆಯ ತನಕ ಕಾದು ಕುಳಿದಿರುವ ದೃಶ್ಯ ಮನಕಲುಕುತ್ತದೆ. ಜತೆಗೆ ಇವುಗಳಿಗೆ ಆಹಾರವೂ ಸಿಗುತ್ತಿಲ್ಲ.
Related Articles
ಹಟ್ಟಿಹೊಳೆ ಮಡಿಕೇರಿ ರಸ್ತೆಯಲ್ಲಿ ಗುಡ್ಡ ಕುಸಿದಾಗ ಅದರೊಳಗೆ ಸಿಕ್ಕಿಹಾಕಿಕೊಂಡಿದ್ದ ಬೆಕ್ಕೊಂದನ್ನು ಬುಧವಾರ ಸಂರಕ್ಷಿಸಲಾಗಿದೆ. ಉಮೇಶ್ ಅವರ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಾಗ ಬೆಕ್ಕು ಅದರೊಳಗೆ ಸಿಕ್ಕಿಹಾಕಿಕೊಂಡಿತ್ತು. ಬೆಕ್ಕು ಕಪಾಟಿನ ಮಧ್ಯಭಾಗದಲ್ಲಿದ್ದರಿಂದ ಏನೂ ತೊಂದರೆ ಆಗಿರಲಿಲ್ಲ. ಬುಧವಾರ ಗುಡ್ಡ ಅಗೆಯುತ್ತಿರುವಾಗ ಬೆಕ್ಕಿನ ಕೂಗು ಕೇಳಿಸಿತು. ನಂತರ ಅದನ್ನು ರಕ್ಷಿಸಿದೆವು ಎಂದು ಮಂಜುನಾಥ್ ಹೇಳಿದರು.
Advertisement