ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಾಂಬ್ ಪತ್ತೆ ಕಾರ್ಯ ದಲ್ಲಿ ನಿಷ್ಣಾತೆ ಎನಿಸಿದ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ (8 ವರ್ಷ 9 ತಿಂಗಳು) ಅನಾರೋಗ್ಯದಿಂದ ರವಿವಾರ ಮೃತ ಪಟ್ಟಿದೆ.
ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಲೀನಾ ಫೆ. 16ರಿಂದ ಆಹಾರ ಸೇವಿಸುತ್ತಿರಲಿಲ್ಲ. ಗ್ಲುಕೋಸ್ ನೀಡಲಾಗುತ್ತಿತ್ತು. ರವಿವಾರ ಮುಂಜಾನೆ ಸಾವನ್ನಪ್ಪಿತು.
ಲೀನಾಳ ಅಂತ್ಯ ಕ್ರಿಯೆಯನ್ನು ರವಿವಾರ ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಸಲಾಯಿತು.
2013 ಮೇ 5ರಂದು ಜನಿಸಿದ ಲೀನಾ ರಾಂಚಿಯಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆಯ ತರ ಬೇತಿ ಪಡೆದು
ಮಂಗಳೂರು ವಿಮಾನ ನಿಲ್ದಾಣ ಶ್ವಾನದಳಕ್ಕೆ ಸೇರ್ಪಡೆ ಯಾಗಿತ್ತು. ಶ್ವಾನದಳ ವಿಭಾಗದ ನಾಲ್ಕು ಶ್ವಾನಗಳಲ್ಲಿ ಲೀನಾ ಅತ್ಯಂತ ಚುರುಕಿನದಾಗಿತ್ತು. ದಾಖಲೆಗಳಲ್ಲಿ ಲೀನಾ ಎಂಬ ಹೆಸರಿದ್ದರೂ ಸಿಐಎಸ್‌ಎಫ್ ಸಿಬಂದಿ ಇದನ್ನು “ಡೋಲಿ’ ಎಂದೇ ಕರೆಯುತ್ತಿದ್ದರು. ಲೀನಾಳ ಅನಾರೋಗ್ಯದ ಹಿನ್ನೆಲೆಯಲ್ಲಿ ಬೇರೊಂದು ಶ್ವಾನವನ್ನು ವಿಮಾನ ನಿಲ್ದಾಣದ ಶ್ವಾನದಳ ವಿಭಾಗಕ್ಕೆ ಸೇರ್ಪಡೆ ಮಾಡಿ ರಾಂಚಿಯಲ್ಲಿ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆಗೆ ಯತ್ನ : ರೌಡಿಶೀಟರ್ ಬಂಧನ
ಆದಿತ್ಯ ರಾವ್ ಇರಿಸಿದ್ದ
ಬಾಂಬ್ ಪತ್ತೆ ಹೆಗ್ಗಳಿಕೆ
2020 ಜನವರಿ 12ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯ ರಾವ್ ಇರಿಸಿದ್ದ ಬಾಂಬ್‌ನ್ನು ಪತ್ತೆಮಾಡಿದ್ದು ಇದೇ ಲೀನಾ. ವಿಮಾನ ನಿಲ್ದಾಣದಲ್ಲಿ ಪ್ರತೀ ಗಂಟೆಗೊಮ್ಮೆ ಶ್ವಾನದಳದಿಂದ ಸ್ಫೋಟಕ ಪತ್ತೆ ತಪಾಸಣೆ ನಡೆಯುತ್ತಿರುತ್ತದೆ.