Advertisement

ಶ್ವಾನ ಪ್ರಿಯರನ್ನು ಆಕರ್ಷಿಸಿದ ರಾಷ್ಟ್ರಮಟ್ಟದ ಪ್ರದರ್ಶನ

12:03 AM Dec 12, 2022 | Team Udayavani |

ಮಹಾನಗರ : ಕರಾವಳಿ ಕೆನೈನ್‌ ಕ್ಲಬ್‌ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ, ಶ್ವಾನ ಪ್ರಿಯರ ಆಕರ್ಷಣೆಯ ಕೇಂದ್ರವಾಗಿತ್ತು.

Advertisement

ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ದೇಶದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಶ್ವಾನ ಪ್ರೇಮಿಗಳು ಭಾಗವಹಿಸಿದ್ದರು. ನಾಯಿಗಳನ್ನು ಸಿಂಗರಿಸುವ, ಎಸಿ-ಕೂಲರ್‌ಗಳ ಬಳಿ ಮಲಗಿಸಿ ಸ್ಪರ್ಧೆಗೆ ಸಿದ್ಧಪಡಿಸುವ ದೃಶ್ಯಗಳು ಸಾಮಾನ್ಯವಾಗಿತ್ತು. ಶ್ವಾನಗಳನ್ನು ಆರೈಕೆ ಮಾಡುವ ವಿಧಾನ ಸಾಮಾನ್ಯ ನೋಡುಗರಿಗೆ ಅಚ್ಚರಿಯ ಸಂಗತಿಯಾಗಿತ್ತು. ಬೆಂಗಳೂರು, ಮೈಸೂರು, ಚೆನ್ನೈ, ಮುಂಬಯಿ, ಹೈದರಾಬಾದ್‌ ಮೊದಲಾದ ಕಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

ವಿವಿಧ ಜಾತಿಯ ಸುಮಾರು 250ರಷ್ಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಒಟ್ಟು 11 ಗುಂಪುಗಳಲ್ಲಿ ಸ್ಪರ್ಧೆ ನಡೆಯಿತು. ಬೆಸ್ಟ್‌ ಪಪ್ಪಿ, ಬೆಸ್ಟ್‌ ಫೀಮೇಲ್‌, ಬೆಸ್ಟ್‌ ಮೇಲ್‌, ಬೆಸ್ಟ್‌ ಆಫ್‌ ಬ್ರಿàಡ್‌, ರಿಸರ್ವ್‌ ಬೆಸ್ಟ್‌ ಆಫ್‌ ಬೆಸ್ಟ್‌, ಟಾಪ್‌ ವಿನ್ನರ್‌ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆಗಳು ಮೂರು ವೇದಿಕೆಗಳಲ್ಲಿ ನಡೆಯಿತು. ಶ್ವಾನಗಳ ಆಹಾರ ಮಾರಾಟ ಮಳಿಗೆಗಳೂ ಇತ್ತು.
ಮೂರು ವರ್ಷದ ಅನಂತರ ಶ್ವಾನ ಪ್ರದರ್ಶನ ನಡೆಯುತ್ತಿದ್ದು, ನಾಯಿಗಳಿಗೂ ಇದೊಂದು ವಿಶೇಷ ಅನುಭವವಾಗಿದೆ. ನಮ್ಮಲ್ಲಿ ಮಹಾರಾಷ್ಟ್ರ ತಳಿಯಾದ ಕಾರವಾನ್‌ ನಾಯಿಗಳಿದ್ದು, ಕಾವಲು ನಾಯಿಯಾಗಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ ಎನ್ನುತ್ತಾರೆ ಉಡುಪಿಯ ರಾಜೇಶ್‌ ಪೂಜಾರಿ.

ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರಾದ ಕೊರಿಯಾದ ಚೂಂಗ್‌-ಗೀ-ಎಎಚ್‌ಎನ್‌ ಮತ್ತು ವೂಂಗ್‌ ಜಾಂಗ್‌ ಲೀ, ರಾಷ್ಟ್ರೀಯ ತೀರ್ಪುಗಾರರಾದ ಸಂಜೀತ್‌ ಮೊಹಂತಿ ಸೇರಿದಂತೆ ಮುಖ್ಯತೀರ್ಪುಗಾರರು ಭಾಗವಹಿಸಿದ್ದರು.

ಕರಾವಳಿ ಕೆನೈನ್‌ ಕ್ಲಬ್‌ ಅಧ್ಯಕ್ಷ ನಾಗರಾಜ್‌ ಶೆಟ್ಟಿ, ಉಪಾಧ್ಯಕ್ಷ ಟಿ.ಪ್ರೀತಮ್‌, ಕಾರ್ಯ ದರ್ಶಿ ಪ್ರಸಾದ್‌ ಐತಾಳ್‌, ವಿಶ್ವನಾಥ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next