Advertisement

ಭೂಕುಸಿತದ ಅಪಾಯದಿಂದ ಕುಟುಂಬ ರಕ್ಷಿಸಿದ ನಾಯಿ

10:48 AM Aug 13, 2018 | Harsha Rao |

“ಡಾಗ್‌ ಈಸ್‌ ಮ್ಯಾನ್ಸ್‌ ಬೆಸ್ಟ್‌ ಫ್ರೆಂಡ್‌’ ಎಂಬ ಮಾತಿನಂತೆ, ಭೂಕುಸಿತದಿಂದ ಇಡೀ ಮನೆಯೇ ಕುಸಿದುಬೀಳುವ ಹಂತದಲ್ಲಿ ಒಳಗಿದ್ದ ಕುಟುಂಬ ಸದಸ್ಯರನ್ನು ನಾಯಿಯೊಂದು ರಕ್ಷಿಸಿದೆ. ರಾತ್ರಿ ಎಲ್ಲರೂ ಮಲಗಿದ್ದಾಗ, ನಾಯಿ ಒಂದೇ ಸಮನೆ ಬೊಗಳಲಾರಂಭಿಸಿತು. ಆಗ ನಮಗೆ ಎಚ್ಚರವಾಯಿತಾದರೂ, ಸುಮ್ಮನಿದ್ದೆವು. ಆದರೆ, ನಾಯಿ ವಿಚಿತ್ರವಾದ ಶಬ್ದದಿಂದ ಬೊಗಳಿದಾಗ ನಾವೆಲ್ಲರೂ ಹೊರಗೆ ಬಂದೆವು. ನಾವು ಹೊರಗೆ ಕಾಲಿಡುತ್ತಿದ್ದಂತೆ, ಮನೆ ಕುಸಿದುಬಿತ್ತು. ನಾಯಿ ನಮ್ಮೆಲ್ಲರ ಪ್ರಾಣ ಉಳಿಸಿತು ಎಂದು ಮೋಹನನ್‌ ಎಂಬವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next