Advertisement

ನಾಯಿ ಸಾಕಿದ್ರೆ ನಿಮ್ಮ ಹೃದಯಕ್ಕೆ ಒಳ್ಳೇದು!

09:56 AM Sep 02, 2019 | Sriram |

ಲಂಡನ್‌: ಕೆಲವರು ಮನೆಯಲ್ಲಿ ನಾಯಿ ಸಾಕುತ್ತಾರೆ. ಹಳ್ಳಿಯಲ್ಲಾದರೆ ಯಾರಾದ್ರೂ ಬಂದರೆ ಗೊತ್ತಾಗಲಿ ಎಂದಾದರೆ, ನಗರಗಳಲ್ಲಿ ಶ್ವಾನ ಪ್ರೀತಿಯೇ ಮುಖ್ಯವಾಗಿರುತ್ತದೆ. ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ.

Advertisement

ಸಾಕಿದ ನಾಯಿಯನ್ನು ಹೊರಗಡೆಗೆ ಕರೆದುಕೊಂಡು ಹೋಗುವ ನೆವದಲ್ಲಾದರೂ ಅದರ ಯಜಮಾನ ಅಥವಾ ಮನೆಯವರು ಒಂದಷ್ಟು ವಾಕಿಂಗ್‌ ಮಾಡುತ್ತಾರೆ. ನಾಯಿ ಓಡಿದರೆ ಅವರೂ ಓಡುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಸಿಗುತ್ತದೆ. ಜತೆಗೆ ಒಂದಷ್ಟು ಮನಸ್ಸಿಗೆ ಆನಂದವೂ ಸಿಗುತ್ತದೆ. ಇದರಿಂದ ದೇಹಕ್ಕೆ, ಹೃದಯಕ್ಕೆ ಬಹಳಷ್ಟು ಲಾಭವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ನಾಯಿ ಸಾಕಿದವರಿಗೆ ಬಿ.ಪಿ., ಶುಗರ್‌ ಸಮಸ್ಯೆ ಇದ್ದರಂತೂ ನಾಯಿಯೊಂದಿಗಿನ ಚಟುವಟಿಕೆಯಿಂದ ಹೆಚ್ಚು ಪ್ರಯೋಜನವಾಗುತ್ತದಂತೆ.

ಸೈಂಟ್‌ ಅನ್ನೆ ವಿವಿಯ ಸಂಶೋಧಕರ ತಂಡ 2 ಸಾವಿರ ಮಂದಿಯ ಮೇಲೆ ನಾಯಿ ಹೊಂದಿದವರು ಮತ್ತು ಹೊಂದದವರು ಎಂದು ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ವೈಜ್ಞಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ 24 ರಿಂದ 65 ವರ್ಷ ವಯಸ್ಸಿನವರು. ಇವರಿಗೆ ಹೃದಯದ ಸಮಸ್ಯೆಯಿದ್ದು, ನಾಯಿಯನ್ನು ವಾಕಿಂಗ್‌ ಮಾಡಿಸುವ, ಅದರೊಂದಿಗೆ ಆಡುವ ಇತ್ಯಾದಿ ಕ್ರಿಯೆಗಳಿಂದ ಹೃದಯ ಹೆಚ್ಚು ಗೆಲುವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next