Advertisement

“ಮಾನವರೂಪಿ’ನಾಯಿ ಕಂಡು ಬೆರಗಾದ ಜನ

09:47 AM Oct 08, 2019 | Team Udayavani |

ನಾಯಿಯು ಮಾನವಸ್ನೇಹಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, “ಮಾನವರೂಪಿ’ ನಾಯಿಯನ್ನು ಎಲ್ಲದರೂ ನೋಡಿದ್ದೀರಾ? ಮನುಷ್ಯನ ಮುಖವನ್ನೇ ಹೋಲುವಂಥ ನೋರಿ ಹೆಸರಿನ ಈ ನಾಯಿಯ ಮುಖವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

Advertisement

ಮುಖದ ರೂಪ ಮಾತ್ರವಲ್ಲ, ಮನುಷ್ಯನಂತೆ ನಗಲೂ ನೋರಿಗೆ ಗೊತ್ತು. ಇದರ ಮಾಲೀಕರಾದ ಕೆವಿನ್‌ ಹರ್ಲೆಸ್‌ ಮತ್ತು ಟಿಫಾನಿ ದಂಪತಿಯು ಸಾಮಾಜಿಕ ಜಾಲತಾಣದಲ್ಲಿ ನೋರಿಯ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದರು. ಅದಾದ ಬಳಿಕ ನೋರಿ ಫ‌ುಲ್‌ ಫೇಮಸ್ಸು!

ಈಗಂತೂ ನೋರಿಗೆ ತನ್ನದೇ ಆದ ಇನ್‌ಸ್ಟಾ ಗ್ರಾಂ ಅಕೌಂಟ್‌ ಕೂಡ ಇದೆ. ಅಲ್ಲೇ ಬಂದು ಅನೇಕರು ನೋರಿಯ ಮಾನವ ರೂಪಿ ಕಣ್ಣುಗಳನ್ನು, ನಗುವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next