ಡಬ್ಲಿನ್ : ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ವೇಳೆ ಅಭಿಮಾನಿಗಳು ನಾನಾ ರೀತಿಯ ಅವತಾರಗಳಿಂದ ಮೈದಾನಕ್ಕಿಳಿಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ, ಆದರೆ ಐರ್ಲೆಂಡಿನಲ್ಲಿ ನಡೆಯುತ್ತಿರುವ ಟಿ 20 ಮಹಿಳಾ ಸೆಮಿಫೈನಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ನಾಯಿಯೊಂದು ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿ ಪ್ರೇಕ್ಷಕರನ್ನು ನಗಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ಉತ್ತರ ಐರ್ಲೆಂಡಿನ ಮಗೇರಮೆಸಾನ್ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್ಎನ್ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ಸೈಡ್ ಗೆ ಹೊಡೆಡಿದ್ದಾರೆ ತಕ್ಷಣ ಫೀಲ್ಡರ್ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಕೀಪರ್ ಕೈಗೆ ಬಿಸಾಡಿದ್ದಾರೆ ಈ ವೇಳೆ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಗೆ ಎಸೆದ ಚೆಂಡು ಮಿಸ್ ಆಗಿ ಬೇರೆ ಕಡೆಗೆ ಹೋಗಿದೆ ಅಷ್ಟು ಹೊತ್ತಿಗೆ ಮೈದಾನಕ್ಕೆ ಎಂಟ್ರಿ ಕೊಟ್ಟ ಸಣ್ಣ ಶ್ವಾನ ಓಡಿ ಬಂದು ಚೆಂಡನ್ನು ತನ್ನ ಬಾಯಿಯಿಂದ ಹಿಡಿದು ಮೈದಾನಕ್ಕೆ ಸುತ್ತು ಬಂದಿದೆ.
ಗಂಭೀರವಾಗಿ ಆಡುತ್ತಿದ್ದ ಆಟಗಾರರು ಒಮ್ಮೆ ದಂಗಾಗಿದ್ದಾರೆ ಆದರೆ ಚೆಂಡನ್ನು ಪಡೆಯಲು ಫೀಲ್ಡರ್ ಗಳು ಶ್ವಾನದ ಹಿಂದೆ ಓಡಬೇಕಾಯಿತು, ಫೀಲ್ಡರ್ ಜೊತೆಗೆ ಶ್ವಾನದ ಮಾಲೀಕನೂ ಅದನ್ನು ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಕೊನೆಗೆ ಶ್ವಾನ ನಾನ್ ಸ್ಟ್ರೈಕರ್ ಅಯೋಫೆ ಫಿಶರ್ ಅವರ ಬಳಿ ಬಂದು ಚೆಂಡನ್ನು ಬಿಟ್ಟಿದೆ.
ಶ್ವಾನದ ಅದ್ಬುತ ಫೀಲ್ಡಿಂಗ್ ನೋಡಿದ ಕ್ರಿಕೆಟ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್ ಪಂದ್ಯಾವಳಿಯ ಮಧ್ಯದಲ್ಲಿ ಪ್ರೇಕ್ಷಕರಿಗೆ ಸ್ವಲ್ಪ ಸಮಯ ಮನರಂಜನೆ ಸಿಕ್ಕಿತು.
ಇದನ್ನೂ ಓದಿ :ಅರಣ್ಯ ಭೂಮಿ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಮೃತರಾಗಿದ್ದಾರೆ : ಕಾಗೋಡು