Advertisement

ಅಖಂಡ ಭಜನೆಯಲ್ಲಿ ಸಾಥ್‌ ಕೊಡುತ್ತಿರುವ ಶ್ವಾನ!

09:09 AM Jan 16, 2020 | Sriram |

ಉಡುಪಿ: ಶ್ರೀಕೃಷ್ಣಮಠದ ಕನಕಗೋಪುರದ ಬಳಿ ಎರಡು ವರ್ಷಗಳಿಂದ ನಡೆಯುತ್ತಿರುವ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಸುದೀರ್ಘ‌ ಕಾಲ ಸಾಥ್‌ ಕೊಟ್ಟಿರುವುದು ಒಂದು ಶ್ವಾನ. ಇದೀಗ ಜನರಲ್ಲಿ ಅಚ್ಚರಿಗೂ ಕಾರಣವಾಗಿದೆ.

Advertisement

2018ರ ಫೆಬ್ರವರಿ, ಮಾರ್ಚ್‌ ವೇಳೆ ಅಲ್ಲಿಗೆ ಆಗಮಿಸಿತ್ತು. ಇದುವರೆಗೂ ಅದು ಆ ಜಾಗವನ್ನು ಬಿಟ್ಟು ಕದಲಿಲ್ಲ. ಈ ಶ್ವಾನ ಬಹುತೇಕ ಸಮಯ ಅಲ್ಲೇ ಕೂತು ಭಜನೆ ಆಲಿಸುತ್ತದೆ. ಅಲ್ಲಿಗೆ ಬಂದ ಭಜನೆ ಸದಸ್ಯರು, ಭಕ್ತರು ಕೊಡುವ ತಿನಿಸುಗಳನ್ನು ತಿಂದು ಹೊಟ್ಟೆ ಹೊರೆದುಕೊಳ್ಳುತ್ತದೆ. ಅಷ್ಟೇ ಅಲ್ಲ. ವಿದೇಶಿ ಬಿಳಿಯರೆಂದರೆ ಇದಕ್ಕೆ ಅಚ್ಚುಮೆಚ್ಚು. ಮನುಷ್ಯರ ಸಂಪರ್ಕ ಹೆಚ್ಚಿರುವುದರಿಂದ ಫೋಟೋಕ್ಕೂ ಫೋಸ್‌ ನೀಡುತ್ತದೆ. ಸುತ್ತ ಮುತ್ತಲಿನ ಜನರೊಂದಿಗೂ ಮುಕ್ತವಾಗಿ ಬೆರೆಯುತ್ತದೆ.

ಈ ಹೆಣ್ಣು ಶ್ವಾನ ಯಾರಿಗೂ ತೊಂದರೆ ಕೊಟ್ಟಿದ್ದಿಲ್ಲ. ಒಂದು ಬಾರಿ ಮರಿಯನ್ನೂ ಹಾಕಿತ್ತು ಎನ್ನುತ್ತಾರೆ ಅಖಂಡ ಭಜನೆ ಯೋಜನೆಯ ಸಂಚಾಲಕಿ ಗೀತಾ ಗುರುರಾಜಾಚಾರ್ಯರು. ಉಡುಪಿಯ ಹರಿಖಂಡಿಗೆ ರಮಾನಂದ ನಾಯಕ್‌ ದಂಪತಿ ಹೋಟೆಲ್‌ನಿಂದ ಬನ್ಸ್‌ ತಂದು ಕೊಡುತ್ತಾರೆ. ಬೇರೆ ಹೋಟೆಲ್‌ನಿಂದ ತಂದು ಕೊಟ್ಟರೆ ತಿನಿಸನ್ನು ಮುಟ್ಟುವುದೂ ಇಲ್ಲವಂತೆ!

ಅವಿನಾಭಾವ ಸಂಬಂಧ
ಇದು ಯಾವ ಜನ್ಮದ ಸಂಬಂಧದಿಂದ ಈ ರೀತಿ ವರ್ತಿಸುತ್ತದೆ ಎನ್ನುವುದು ತಿಳಿಯುತ್ತಿಲ್ಲ. ಭಜನೆ ಆರಂಭವಾದಂದಿನಿಂದ ಇಲ್ಲಿಯೇ ಇದೆ.
-ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪಲಿಮಾರು ಮಠ

ಗಲೀಜು ಮಾಡಲ್ಲ
ಈ ನಾಯಿಗೆ ಎಷ್ಟು ಬುದ್ಧಿ ಇದೆ ಎಂದರೆ ಒಂದೇ ಒಂದು ಬಾರಿ ರಥಬೀದಿ ಪರಿಸರದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದ್ದಿಲ್ಲ. ಹೊರಗೆ ಹೋಗಿ ಮಾಡಿ ಬರುತ್ತದೆ.
-ಗಣೇಶ ಪಡಿಯಾರ್‌, ವ್ಯಾಪಾರಸ್ಥರು, ರಥಬೀದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next