Advertisement
ವಿಶೇಷವಾಗಿ ಕುಟುಂಬದೊಂದಿಗೆ ಹೆಚ್ಚು ನಂಟು ಹೊಂದಿರುವ ನಾಯಿ, ಬೆಕ್ಕುಗಳನ್ನು ನಗರ ಪ್ರದೇಶಗಳಲ್ಲಿ ಮನೆ ಯಿಂದ ದೂರದಲ್ಲಿ ಬಿಟ್ಟುಬರಲಾಗುತ್ತಿದೆ. ಇದರಿಂದ ಅನಾಥವಾದ ಸಾಕುಪ್ರಾಣಿಗಳು ದಿಕ್ಕುತೋಚದಂತಾ ಗಿವೆ. ಅದರಲ್ಲೂ ಕೆಲವು ಅನಾರೋಗ್ಯ ಲಕ್ಷಣಗಳು ಕಂಡು ಬರುತ್ತಿದ್ದಂತೆ ಅಮಾನವೀಯವಾಗಿ ಕೆರೆ ದಡದಲ್ಲಿ, ಬೀದಿನಾಯಿಗಳ ಗುಂಪಿನಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಬೆಂಗಳೂರಿನ ಕೋರಮಂಗಲ, ಬನಶಂಕರಿ, ಜಯನಗರ, ಬಿಟಿಎಂ ಲೇಔಟ್, ಬೈರಸಂದ್ರ ಕಡೆಗಳಲ್ಲಿ ಲ್ಯಾಬ್ರೆಡಾಗ್, ಬುಲ್‌ಡಾಗ್, ಹಸ್ಕಿ, ಗೋಲ್ಡನ್ ರಿಟ್ರೀವರ್‌ನಂತಹ ಬೆಲೆಬಾಳುವ ನಾಯಿಗಳು ಬೀದಿಗಳಲ್ಲಿ ದಿಕ್ಕಿಲ್ಲದೆ ಓಡಾಡುತ್ತಿರುವುದು ಕಳೆದ ಮೂರ್‍ನಾಲ್ಕು ದಿನಗಳಿಂದ ಕಂಡುಬರುತ್ತಿವೆ. ಅದೇ ರೀತಿ, ಮೈಸೂರಿನಲ್ಲಿ ಹಕ್ಕಿಜ್ವರ ಮತ್ತು ಕೊರೊನಾ ವೈರಸ್ ಭೀತಿಯಿಂದ ವಿದೇಶಿ ಹಕ್ಕಿಗಳನ್ನು ಹಾರಿಬಿಡಲಾಗಿದೆ ಎಂದು ಪ್ರಾಣಿಪ್ರಿಯ ಅರುಣ್ ಪ್ರಸಾದ್ ಮತ್ತು ಪ್ರದೀಪ್ ಕುಮಾರ್ ತಿಳಿಸಿದ್ದಾರೆ