Advertisement

ಗೋಪಿಚಂದ್‌ಗೆ ಸ್ವಹಿತಾಸಕ್ತಿ ಅನ್ವಯಿಸಲ್ಲವೇ?

07:59 PM Dec 20, 2019 | Lakshmi GovindaRaj |

ಭಾರತದಲ್ಲಿ ಈಗ ಸ್ವಹಿತಾಸಕ್ತಿ ಸಂಘರ್ಷ ಎಂಬ ಪದ ಆಗಾಗ ಕೇಳಿಬರುತ್ತಲೇ ಇದೆ. 2013ರ ಐಪಿಎಲ್‌ನಲ್ಲಿ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದೇ ತಡ, ಸ್ವಹಿತಾಸಕ್ತಿ ಕಾರಣದಿಂದ ಬಿಸಿಸಿಐನಲ್ಲಿ ಹಲವರು ಹುದ್ದೆ ಕಳೆದುಕೊಂಡರು. ಈಗಂತೂ ಬಿಸಿಸಿಐಗೆ ಯಾವುದೇ ವ್ಯಕ್ತಿಗಳನ್ನು, ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿದೆ. ನಿರ್ದಿಷ್ಟ ವ್ಯಕ್ತಿ, ಪ್ರಭಾವ ಬೀರಬಲ್ಲ ಇನ್ನೊಂದು ಹುದ್ದೆಯನ್ನು ಬಿಸಿಸಿಐನೊಳಗೆ ಅಥವಾ ಹೊರಗೆ ಹೊಂದಿದ್ದರೆ ಅದು ಸ್ವಹಿತಾಸಕ್ತಿ ಸಂಘರ್ಷದ ವ್ಯಾಪ್ತಿಯಲ್ಲಿ ಬರುತ್ತದೆ.

Advertisement

ಈ ರೀತಿಯ ಸಮಸ್ಯೆಯಿಲ್ಲದ ಒಬ್ಬನೇ ಒಬ್ಬ ಖ್ಯಾತನಾಮ ಕ್ರಿಕೆಟಿಗ ಭಾರತದಲ್ಲಿಲ್ಲ! ಕ್ರಿಕೆಟ್‌ ವ್ಯವಸ್ಥೆ ಹೀಗೆ ತಳಮಳ ಎದುರಿಸುತ್ತಿರುವ ಹೊತ್ತಿನಲ್ಲೇ ಭಾರತ ಬ್ಯಾಡ್ಮಿಂಟನ್‌ ವಲಯದಿಂದ ಇಂತಹದ್ದೇ ಒಂದು ಮಾತು ಕೇಳಿಬಂದಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಮಾತಿಗೆ ಬಹಳ ತೂಕವಿದೆ. ಇದನ್ನು ಯಾರೂ ಗಮನಿಸಿಲ್ಲ! ಸ್ವಹಿತಾಸಕ್ತಿ ಸಂಘರ್ಷದ ಧ್ವನಿಯೆತ್ತಿದ್ದು ಭಾರತದ ಖ್ಯಾತ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ.

ಅವರು ಇಲ್ಲಿ ಗುರಿ ಮಾಡಿದ್ದು ಭಾರತದ ಬ್ಯಾಡ್ಮಿಂಟನ್‌ ತರಬೇತುದಾರ ಗೋಪಿಚಂದ್‌ ಅವರನ್ನು. ಬರೀ ತೆಲುಗು ಆಟಗಾರರೇ ಭಾರತ ಬ್ಯಾಡ್ಮಿಂಟನ್‌ ತಂಡದಲ್ಲಿರುತ್ತಾರೆ. ಇದಕ್ಕೆ ಕಾರಣ ಗೋಪಿಚಂದ್‌ ಎನ್ನುವುದು ಅವರ ಮುಖ್ಯ ಆರೋಪ. ಸ್ವತಃ ರಾಜ್ಯದ ಆಟಗಾರ್ತಿಯರಿಗೂ ದ.ಏಷ್ಯಾ ಗೇಮ್ಸ್‌ ನಲ್ಲಿ ಎಲ್ಲ ಅರ್ಹತೆಗಳ ಹೊರತಾಗಿಯೂ ಸ್ಥಾನ ಸಿಕ್ಕಿಲ್ಲ. ಇದು ಜ್ವಾಲಾ ಮಾತಿನ ಮಹತ್ವ ಹೆಚ್ಚಿಸಿದೆ.

ಹಾಗೆಯೇ ಗಮನಿಸಿ. ಗೋಪಿಚಂದ್‌ ಭಾರತ ಬ್ಯಾಡ್ಮಿಂಟನ್‌ ತಂಡದ ತರಬೇತುದಾರ, ಹಾಗೆಯೇ ಮುಖ್ಯ ಆಯ್ಕೆಗಾರ. ಅವರದ್ದೊಂದು ಅಕಾಡೆಮಿ ಹೈದರಾ­ಬಾದ್‌ನಲ್ಲಿದೆ. ಹಾಗೆಯೇ ಭಾರತ ಬ್ಯಾಡ್ಮಿಂಟನ್‌ ಅಕಾಡೆಮಿ ಇರುವುದೂ ಹೈದರಾಬಾದ್‌ನಲ್ಲೇ! ಅಷ್ಟು ಮಾತ್ರವಲ್ಲ, ಪಿಬಿಎಲ್‌, ಖೇಲೋ ಇಂಡಿಯಾ ಇಲ್ಲೂ ಗೋಪಿಚಂದ್‌ಗೆ ಜವಾಬ್ದಾರಿ. ಒಬ್ಬನೇ ವ್ಯಕ್ತಿ ಇಷ್ಟೆಲ್ಲ ಹೊಣೆ­ಗಾರಿಕೆ ಹೊಂದಿರುವುದು ಸ್ವಹಿತಾಸಕ್ತಿಯಲ್ಲವೇ!

Advertisement

Udayavani is now on Telegram. Click here to join our channel and stay updated with the latest news.

Next