Advertisement
“ನನ್ನ ಮೊಮ್ಮಗಳು ಈಗಾಗಲೇ ನಡೆಯಲು ಪ್ರಾರಂಭಿಸಿದ್ದಾಳೆ ಮತ್ತು ಅವಳಿಗೆ ಕೇವಲ ಒಂದು ವರ್ಷ. ನಿಮ್ಮ ಮಗು ಅವಳಿಗಿಂತ ದೊಡ್ಡವ ಮತ್ತು ಅವನು ಆಗಲೇ ನಡೆಯಲು ಪ್ರಾರಂಭಿಸಿರಬೇಕಿತ್ತು.’
Related Articles
Advertisement
ಬೆಳವಣಿಗೆಯ ವಿಳಂಬವಿರುವ ಮೂರು ವರ್ಷದ ಮಗುವಿನ ಪೋಷಕರೊಂದಿಗೆ ಸಂಭಾಷಣೆಯಲ್ಲಿದ್ದಾಗ ಇಂತಹ ಅನೇಕ ಸಲಹೆಗಳನ್ನು ಗಮನಿಸಿರಬಹುದು. ಅಂತಹ ಸಲಹೆಗಳು ನಿಜವಾದ ಕಾಳಜಿಯ ಸ್ಥಳದಿಂದ ಬರಬಹುದು. ಆದರೆ ಇದು ಬೆಳವಣಿಗೆಯಲ್ಲಿ ವಿಳಂಬವಿರುವ ಮಕ್ಕಳ ಪೋಷಕರಿಗೆ ಅಸ್ವಸ್ಥತೆಯನ್ನು ಉಂಟುಮಾಡಬಹುದು.
ಅದೇ ವಯಸ್ಸಿನ ಶ್ರೇಣಿಯ ತಮ್ಮ ಇತರ ಗೆಳೆಯರೊಂದಿಗೆ ಹೋಲಿಸಿದಾಗ ಮಗುವು, ಬೆಳವಣಿಗೆಯ ಮೈಲಿಗಲ್ಲುಗಳನ್ನು ಸಾಧಿಸದಿದ್ದಾಗ ಬೆಳವಣಿಗೆಯ ವಿಳಂಬ ಸಂಭವಿಸುತ್ತದೆ. ಸರಳವಾಗಿ ಹೇಳುವುದಾದರೆ, ಮಗುವು ನಿರೀಕ್ಷೆಯಂತೆ ಮಾತನಾಡುವುದು, ನಡೆಯುವುದು ಅಥವಾ ಘನ ಆಹಾರವನ್ನು ತಿನ್ನುವಂತಹ ಮೈಲಿಗಲ್ಲುಗಳನ್ನು ಸಾಧಿಸದಿದ್ದರೆ ಅದು ಬೆಳವಣಿಗೆಯ ವಿಳಂಬವಾಗಿದೆ. ಪೋಷಕರು ತಮ್ಮ ಶಿಶುವೈದ್ಯರನ್ನು ಸಂಪರ್ಕಿಸಿ, ಮಗುವನ್ನು ಸಂಪೂರ್ಣವಾಗಿ ಪರೀಕ್ಷಿಸಿದ ಅನಂತರ ಅಂತಹ ರೋಗನಿರ್ಣಯವನ್ನು ಪಡೆಯಲಾಗುತ್ತದೆ. ಮಗುವಿನ ಅಗತ್ಯಾನುಸಾರ ಮುಂದಿನ ಚಿಕಿತ್ಸಕ ಮಧ್ಯಸ್ಥಿಕೆಗಾಗಿ ಔದ್ಯೋಗಿಕ ಚಿಕಿತ್ಸಕ, ಭೌತಚಿಕಿತ್ಸಕ, ವಾಕ್ ಚಿಕಿತ್ಸಕ ಅಥವಾ ಯಾವುದೇ ಇತರ ತಜ್ಞರನ್ನು ಪರಿಗಣಿಸಬಹುದು.
ಒಬ್ಬ ಔದ್ಯೋಗಿಕ ಚಿಕಿತ್ಸಕರಾಗಿ, ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಮೂಲಭೂತ ಹಕ್ಕು ಎಂದು ನಾವು ನಂಬುತ್ತೇವೆ. ಉದ್ಯೋಗಗಳು ಯಾವುವು ಎಂದು ನೀವು ಕೇಳಬಹುದು. ಅವುಗಳು ಯಾವುದೆಂದರೆ, ನೀವು ಮಾಡಲು ಬಯಸುವ, ಮಾಡಬೇಕಾದ ಅಥವಾ ಮಾಡಲು ನಿರೀಕ್ಷಿಸಲಾದ ಕೆಲಸಗಳು ಅಥವಾ ಚಟುವಟಿಕೆಗಳಾಗಿವೆ; ಇದು ನೀವು ಒಂದು ದಿನದಲ್ಲಿ ಮಾಡುವ, ಅಂದರೆ ಎಚ್ಚರಗೊಳ್ಳುವುದರಿಂದ ಹಿಡಿದು ನಿದ್ರೆಗೆ ಹೋಗುವವರೆಗೆ, ನಿದ್ರೆಯು ಸೇರಿ ಎಲ್ಲವನ್ನೂ ಒಳಗೊಳ್ಳುತ್ತದೆ.
ಒಬ್ಬ ವ್ಯಕ್ತಿಯು ಬಾಹ್ಯ ನಿರ್ಬಂಧಗಳಿಂದ ಅಥವಾ ತಾರತಮ್ಯದಿಂದ ಈ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಅವರು ಔದ್ಯೋಗಿಕ ಅನ್ಯಾಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಬೆಳವಣಿಗೆಯ ವಿಳಂಬವನ್ನು ಹೊಂದಿರುವ ಮಕ್ಕಳ ಪೋಷಕರು ಸಾಮಾನ್ಯವಾಗಿ ಈ ಅನ್ಯಾಯವನ್ನು ಎದುರಿಸುತ್ತಾರೆ. ಏಕೆಂದರೆ ಅವರು ಸಾಮಾಜಿಕ ಕೂಟಗಳಲ್ಲಿ ಮುಕ್ತವಾಗಿ ಭಾಗವಹಿಸಲು ಸಾಧ್ಯವಿಲ್ಲ ಅಥವಾ ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತಪ್ಪಿಸಬಹುದು. ಹಾಗೆಯೇ, ಅವರ ಮಕ್ಕಳು ತಾರತಮ್ಯವನ್ನು ಎದುರಿಸಬಹುದು ಏಕೆಂದರೆ ಆ ಮಕ್ಕಳು ವಿಭಿನ್ನವಾಗಿ ಕಾಣುತ್ತಾರೆ, ವಿಭಿನ್ನವಾಗಿ ಚಲಿಸುತ್ತಾರೆ ಅಥವಾ ವಿಭಿನ್ನವಾಗಿ ಮಾತನಾಡುತ್ತಾರೆ.
“ಇದು ನನಗೆ ತುಂಬಾ ಕೋಪ ತರಿಸುತ್ತದೆ. ನಾನು ನನ್ನ ನೆರೆಹೊರೆಯವರನ್ನು ತಪ್ಪಿಸಲು ಒಲವು ತೋರುತ್ತೇನೆ; ನಾನು ಅವರ ಮನೆಗೆ ಹೋಗುವುದಿಲ್ಲ, ಅವರೊಂದಿಗೆ ಮಾತನಾಡುವುದಿಲ್ಲ’ ಎಂದು ಇಂತಹ ಒಬ್ಬ ಪೋಷಕಿ ನೇಹಾ ಹೇಳಿದರು. ಇದು ಈ ಪೋಷಕರಿಂದ ಮನೆಯಲ್ಲಿ ತಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯಗಳಿಂದ ದೂರವಿರಲು ಹಾಗೂ ಸಮಾಜದ ಭಾಗವಾಗಿ ಅನ್ವೇಷಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತದೆ. “ಸಾಧ್ಯವಾದರೆ, ನಾನು ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಬಹುದು’ ಎಂದು ಅವರು ಸೇರಿಸಿದರು. ಹವ್ಯಾಸಗಳನ್ನು ಅನ್ವೇಷಿಸಲು ಹಾಗೂ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿರಾಮವನ್ನು ಅನುಭವಿಸಲು ಇರುವ ಅವಕಾಶಗಳನ್ನು ಮತ್ತು ಹಕ್ಕುಗಳನ್ನು ಇದು ಮಿತಿಗೊಳಿಸುತ್ತದೆ; “ನನ್ನ ಅತ್ತೆ ಮತ್ತು ಪತಿ ಹೋಗುವಾಗ ನಾನು ನನ್ನ ಮಗುವಿನೊಂದಿಗೆ ಮನೆಯಲ್ಲಿಯೇ ಇರುತ್ತೇನೆ; ನಾನು ಹೋಗಲೇ ಬೇಕಿರುವ ಪರಿಸ್ಥಿತಿಯ ವಿನಾ ಮತೆ ಇನ್ಯಾವ ಸಮಯದಲ್ಲೂ ನಾನು ಹೋಗುವುದಿಲ್ಲ’ ಎಂದು ಅವರು ವಿವರಿಸಿದರು.
ಶಾಲೆಯಲ್ಲಿದ್ದಾಗ ತಮ್ಮ ಮಗುವಿಗೆ ಚಿಕಿತ್ಸೆ ಅಥವಾ ಹೆಚ್ಚಿನ ಗಮನ ಬೇಕಾಗಬಹುದು ಎಂದು ಒಪ್ಪಿಕೊಳ್ಳುವ ಕುಟುಂಬಗಳು ಅಥವಾ ಪೋಷಕರನ್ನು ನೀವು ಕಂಡುಕೊಳ್ಳುವುದು ತುಂಬಾ ಸಾಮಾನ್ಯವಲ್ಲ, ಆದ್ದರಿಂದ ಅವರು ಸಾಮಾನ್ಯವಾಗಿ ವಿಜ್ಞಾನದಲ್ಲಿ ಇಲ್ಲದೆ ಇರುವಂತಹ ಸಲಹೆಯನ್ನು ಸ್ವೀಕರಿಸಿದಾಗ, ಕೋಪಗೊಳ್ಳುತ್ತಾರೆ ಮತ್ತು ಅಸಮಾಧಾನಗೊಳ್ಳುತ್ತಾರೆ. ಈ ಕೋಪವು ತಮ್ಮ ಮೇಲೆ, ಅವರ ಸಂಗಾತಿಯ ಮೇಲೆ, ಕುಟುಂಬದ ಮೇಲೆ ಅಥವಾ ಅವರ ಮಗುವಿನ ಮೇಲೆ ನಿರ್ದೇಶಿಸಬಹುದು. “ಆ ವ್ಯಕ್ತಿಯ ಬಗ್ಗೆ ನನಗೆ ಇದ್ದ ಭಾವನೆಗಳು ಬದಲಾಗಿದೆ. ಏಕೆಂದರೆ ಈಗ ಅವರು ನನ್ನ ಮಗನ ಬಗ್ಗೆ ವಿಷಯಗಳನ್ನು ತೋರಿಸುತ್ತಿದ್ದಾರೆ’, “ನನ್ನ ಮಗನ ಬಗ್ಗೆ ಕುಟುಂಬದಲ್ಲಿ ಹರಟೆ ನಡೆಯುತ್ತಿದೆ’ ಎಂದು ನೇಹಾ ನಮಗೆ ಹೇಳಿದರು. ಇದು ಪೋಷಕರ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ; ಅವರ ಕುಟುಂಬ ಜೀವನ, ಸಮಾಜದ ಭಾಗವಾಗಿ ಮತ್ತು ಪೋಷಕರ ಪಾತ್ರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
ಇಂತಹ ಮಗುವು, ಇತರ ತೋರಿಕೆಯಲ್ಲಿ “ಸಾಮಾನ್ಯ’ ಮಕ್ಕಳೊಂದಿಗೆ ಬೆರೆಯುವುದರಿಂದ ಮಗುವಿಗೆ ವಿಳಂಬದೊಂದಿಗೆ ಸಹಾಯ ಮಾಡುತ್ತದೆ ಎಂಬ ಭಾವನೆಯಲ್ಲಿ ಸಮಾಜವು ತಮ್ಮ ಇಂತಹ ಮಕ್ಕಳನ್ನು ಸಾಧ್ಯವಾದಷ್ಟು ಬೇಗ ಶಾಲೆಗೆ ಪರಿಚಯಿಸಲು ಸಲಹೆ ನೀಡಬಹುದು. ತರಗತಿಯ ಶಿಕ್ಷಣ, ಸ್ನೇಹಿತರನ್ನು ಮಾಡಿಕೊಳ್ಳುವುದು, ಗುಂಪುಗಳಲ್ಲಿ ಹೇಗೆ ಕೆಲಸ ಮಾಡಬೇಕೆಂದು ಕಲಿಯುವುದು, ಸಮಸ್ಯೆ-ಪರಿಹರಿಸುವ ಕೌಶಲಗಳನ್ನು ಹೆಚ್ಚಿಸುವುದು ಮತ್ತು ನಿಯಮಗಳನ್ನು ಅನುಸರಿಸಲು ಕಲಿಯಲು ಶಾಲಾ ಶಿಕ್ಷಣ ಅತ್ಯಗತ್ಯ. ಅದೇ ಸಮಯದಲ್ಲಿ, ಸುರಕ್ಷಿತ ವಾತಾವರಣದಲ್ಲಿ ಮಾಡಿದ ಎಲ್ಲರಿಗೂ ಒಪ್ಪಿಗೆಯಾಗದ ವಿಚಾರಗಳನ್ನು ಸಹ ಇದು ಸವಾಲು ಮಾಡುತ್ತದೆ. ಶಾಲಾ ಶಿಕ್ಷಣವು ಅತ್ಯಗತ್ಯವಾಗಿದ್ದರೂ, ನಿಮ್ಮ ಮಗುವನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಪರಿಚಯಿಸಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಕೂಡ ನಿರ್ಣಾಯಕವಾಗಿದೆ.
“ನಾನು ಸಮೀಪಿಸಿದ ಶಾಲೆಯೊಂದರಲ್ಲಿ, ಅವರು ನನ್ನ ಮಗುವಿನ ಬಗ್ಗೆ ಗಮನ ಹರಿಸುವುದಿಲ್ಲ ಮತ್ತು ಅವನು ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ ಎಂದು ಹೇಳಿದರು. ಅವರು ನನ್ನ ಮಗುವಿಗೆ ಸರಿಯಾಗಿ ಉಪಚರಿಸುವುದಿಲ್ಲ’ ಎಂದು ಶ್ರೀ ನೇಹಾ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ, ಶಾಲೆಗಳು ವಿಭಿನ್ನ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಅವಕಾಶ ನೀಡದಿರಬಹುದು. “ಶಿಕ್ಷಣದ ಹಕ್ಕು’ವಿನಂತಹ ಕಾನೂನುಗಳಿವೆ ಎಂದು ತಿಳಿಯುವುದು ಅತ್ಯಗತ್ಯ. ಇದು ವಿಶೇಷ ಅಗತ್ಯವುಳ್ಳ ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳು – ಪೂರ್ಣ ಸಮಯದ ಪ್ರಾಥಮಿಕ ಶಿಕ್ಷಣ (6-14 ವರ್ಷ ವಯಸ್ಸಿನ) ಹಾಗೆಯೆ, ಔಪಚಾರಿಕ ಶಾಲೆಯಲ್ಲಿ ಕೆಲವು ಅಗತ್ಯ ನಿಯಮಗಳು ಮತ್ತು ಮಾನ ದಂಡಗಳನ್ನು ಪೂರೈಸುವ ತೃಪ್ತಿದಾಯಕ ಮತ್ತು ಸಮಾನ ಗುಣಮಟ್ಟದ ಶಿಕ್ಷಣದ ಹಕ್ಕನ್ನು ಹೊಂದಿರುತ್ತಾರೆ. ಬಹು ಮತ್ತು ತೀವ್ರ ಅಂಗವೈಕಲ್ಯ ಹೊಂದಿರುವ ಮಕ್ಕಳು ಗೃಹಾಧಾರಿತ ಶಿಕ್ಷಣವನ್ನು ಆಯ್ಕೆ ಮಾಡಬಹುದು ಎಂದು ಅದು ಹೇಳುತ್ತದೆ.
ಎಂಟು ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಮಕ್ಕಳನ್ನು “ಮಾಧ್ಯಮಿಕ ಹಂತದಲ್ಲಿ ಅಂಗವಿಕಲರಿಗೆ ಒಳಗೊಳ್ಳುವ ಶಿಕ್ಷಣ’ ಯೋಜನೆಯಲ್ಲಿ ಒಳಗೊಳ್ಳಲಾಗುತ್ತದೆ. ಇದು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಈ ಮಕ್ಕಳಿಗೆ ನಾಲ್ಕು ವರ್ಷಗಳ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ.
ಕೇಳದೆಯೇ ಒದಗಿಸಿದ ಸರಳ ಹೇಳಿಕೆಗಳು ಅಥವಾ ಸಲಹೆಗಳು ಸಾಮಾನ್ಯವಾಗಿ ಪ್ರಯೋಜನಕ್ಕಿಂತ ಹೆಚ್ಚು, ಮಗುವಿಗೆ, ಪೋಷಕರಿಗೆ ಮತ್ತು ಕುಟುಂಬದೊಂದಿಗಿನ ನಿಮ್ಮ ಸಂಬಂಧಕ್ಕೆ ಹಾನಿಯನ್ನುಂಟುಮಾಡುವ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ, ಪಾಲಕರು, ಅವರಿಗೆ ಅಗತ್ಯವಿರು ವಾಗ ಸಹಾಯವನ್ನು ಪಡೆಯಲು ಹಿಂಜರಿಯಬಾರದು. ಈ ಸಹಾಯವು ಕುಟುಂಬ, ಸ್ನೇಹಿತರು, ವೃತ್ತಿಪರರು ಅಥವಾ ವಿಶೇಷ ಅಗತ್ಯವಿರುವ ಮಕ್ಕಳ ಇತರ ಪೋಷಕರಿಂದ ಆಗಿರಬಹುದು. ಬೆಂಬಲ ಗುಂಪುಗಳನ್ನು ರಚಿಸುವುದು ಮತ್ತು ಮರಳಿ ಬೀಳಲು ಘನ ನಿವ್ವಳವು ಅವರಿಗೆ ಪ್ರಯೋಜನವನ್ನು ನೀಡುತ್ತದೆ.
-ಮುಂದಿನ ವಾರಕ್ಕೆ
ಪ್ರಮೋದ್ ಡಿ. ಲಂಬೋರ್,
ಸಹಾಯಕ ಪ್ರಾಧ್ಯಾಪಕರು, ಆಕ್ಯುಪೇಷನಲ್ ಥೆರಪಿ ವಿಭಾಗ
ಜುದಿತ್ ಶಿಫಾಲಿ ಜತ್ತನ್ನ, ಸಹಾಯಕ ಪ್ರಾಧ್ಯಾಪಕರು
– ಹಿರಿಯ ಶ್ರೇಣಿ ಆಪ್ತೊಮೆಟ್ರಿ ವಿಭಾಗ,
ಸೃಷ್ಟಿ ಧನಾನಿಯಾ ಮತ್ತು ಬಿಯೋನಾ ರಾಚೆಲ್,
ಐ-ಎಂಒಟಿ ವಿದ್ಯಾರ್ಥಿಗಳು, ಆಕ್ಯುಪೇಷನಲ್ ಥೆರಪಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಕ್ಯುಪೇಶನಲ್ ಥೆರಪಿ ವಿಭಾಗ, ಕೆಎಂಸಿ, ಮಂಗಳೂರು)