Advertisement
ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ನಾನಾ ತೆರಿಗೆ ಪಾಲಿನ ಮೊತ್ತ, ಅನುದಾನದಲ್ಲಿ ಕಡಿತ ರಾಜ್ಯದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ರಾಜ್ಯ ಸರ್ಕಾರ ತನ್ನ ಸ್ವಂತ ತೆರಿಗೆ ಆದಾಯ ಉತ್ತಮವಾಗಿದ್ದರೂ ಹೆಚ್ಚುವರಿ ಸಾಲಕ್ಕೆ ಮೊರೆ ಹೋಗುವ ಲಕ್ಷಣ ಕಾಣುತ್ತಿದೆ. ಆ ಹಿನ್ನೆಲೆಯಲ್ಲಿ 2020- 21ನೇ ಸಾಲಿನ ಬಜೆಟ್ ಗಾತ್ರವು ನಾಮ್‌ಕೇವಾಸ್ತೆಗೆ ಎಂಬಂತೆ ಹೆಚ್ಚ ಳ ವಾಗಿ, 2019-20ರ ಬಜೆಟ್‌ನ ಗಾತ್ರಕ್ಕೆ ಹೋಲಿಸಿದರೆ ಅತ್ಯಲ್ಪ ಹೆಚ್ಚಳ ವಾಗುವ ಸಾಧ್ಯತೆಯಿದೆ.
Related Articles
Advertisement
ಪ್ರಸಕ್ತ 2019-20ನೇ ಸಾಲಿನ ಆಯವ್ಯಯವನ್ನೂ ಎಚ್.ಡಿ.ಕುಮಾರಸ್ವಾಮಿ ಮಂಡಿ ಸಿದ್ದರು. ಬರೋಬ್ಬರಿ 2.34 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿತ್ತು. ಬದಲಾದ ರಾಜಕೀಯ ಬೆಳ ವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆ ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸ ಬಜೆಟ್ ಮಂಡಿಸುವ ಗೋಜಿಗೆ ಹೋಗದೆ ಕೆಲ ಮಾರ್ಪಾಡು ಮಾಡಿ ಕೊಂಡು ಅನುಷ್ಠಾನಕ್ಕೆ ಮುಂದಾದರು. ಕಳೆದ ಮೂರು ವರ್ಷಗಳಲ್ಲಿ ಬಜೆಟ್ ಗಾತ್ರ 44,000 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.
ಸಾಲ ಏರುಮುಖ: ರಾಜ್ಯ ಸರ್ಕಾರ ನಾನಾ ತೆರಿಗೆ, ಆದಾಯ ಮೂಲದಿಂದ ಸಂಗ್ರಹಿಸುವ ಮೊತ್ತ ಮೀರಿ ವೆಚ್ಚದ ಬಾಬ್ತುಗಳಿದ್ದಾಗ ಅನಿ ವಾರ್ಯವಾಗಿ ಹಣಕಾಸು ಸಂಸ್ಥೆಗಳಿಂದ ಸಾಲ ಎತ್ತುವಳಿ ಮೂಲಕ ಆರ್ಥಿಕತೆ ನಿಭಾಯಿಸು ವುದು ವಾಡಿಕೆ. ಅದರಂತೆ ವರ್ಷಗಳು ಕಳೆದಂತೆ ಜಿಎಸ್‌ಡಿಪಿ ಹೆಚ್ಚಾಗುತ್ತಿದ್ದರೂ ಖರ್ಚಿನ ಬಾಬ್ತು ವಿಸ್ತರಿಸುತ್ತಿರುವುದರಿಂದ ಸಾಲವೂ ಏರುಮುಖವಾಗಿದೆ.
2017-18ನೇ ಸಾಲಿನಲ್ಲಿ ಒಟ್ಟು 34,716 ಕೋಟಿ ರೂ. ಸಾಲ ಪಡೆಯುವ ಅಂದಾಜು ಇದ್ದರೂ ಅಂತಿಮವಾಗಿ 34,171 ಕೋಟಿ ರೂ. ಸಾಲವನ್ನಷ್ಟೇ ಪಡೆಯಲಾಗಿತ್ತು. ನಂತರ 2018-19ರಲ್ಲಿ ಸಿದ್ದರಾಮಯ್ಯ 36,317 ಕೋಟಿ ರೂ. ಸಾಲ ಪಡೆಯುವುದಾಗಿ ಅಂದಾ ಜಿಸಿ ದ್ದರು. ಆದರೆ ಬಳಿಕ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿಯವರು ಸಾಲ ಮನ್ನಾ ಘೋಷಣೆ ಹಿನ್ನೆಲೆಯಲ್ಲಿ ಸಾಲದ ಮೊತ್ತ 43,731 ಕೋಟಿ ರೂ.ಗೆ ಏರಿಕೆ ಯಾಗಿತ್ತು. ಹಾಗಿದ್ದರೂ ಒಟ್ಟು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೇ ಇತ್ತು.
46,127 ಕೋಟಿ ರೂ. ಸಾಲ ಅಂದಾಜು: ಪ್ರಸಕ್ತ ಹಣಕಾಸು ವರ್ಷದಲ್ಲಿ 46,127 ಕೋಟಿ ರೂ. ಸಾಲ ಪಡೆಯುವ ಅಂದಾಜು ಇದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಮೊತ್ತದ ಶೇ.3ರಷ್ಟಿದೆ. 2019-20ನೇ ಸಾಲಿನಲ್ಲಿ ಜಿಎಸ್‌ಡಿಪಿಯ ಶೇ. 2.65ರಷ್ಟು ಸಾಲ ಪಡೆಯುವು ದಾಗಿ ಹೇಳಲಾಗಿತ್ತು. ಅದರಂತೆ ಮುಂದುವರಿ ದಿದ್ದರೆ 42,051 ಕೋಟಿ ರೂ.ಗಳಷ್ಟೇ ಸಾಲ ಪಡೆಯಬೇಕಿತ್ತು. ಆದರೆ ಬಜೆಟ್‌ನಲ್ಲಿ 46,127 ಕೋಟಿ ರೂ. ಸಾಲದ ಮೊರೆ ಹೋಗುವುದಾಗಿ ಉಲ್ಲೇಖವಾಗಿದೆ. ಪ್ರಸಕ್ತ ಸಾಲಿನಲ್ಲಿ ಎಷ್ಟು ಸಾಲ ಪಡೆಯಲಾಗಿದೆ ಎಂಬುದು ಗುರುವಾರದ ಆಯವ್ಯಯದಲ್ಲಿ ಸ್ಪಷ್ಟವಾಗಲಿದೆ.
ಶೇ. 3.5ರವರೆಗೆ ಸಾಲಕ್ಕೆ ಅವಕಾಶ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ. 3ರವರೆಗೆ ಸಾಲ ಪಡೆಯಲು ಅವಕಾಶವಿದೆ. ಸಾಲ ಎತ್ತುವಳಿ ಹಾಗೂ ನಿರ್ವಹಣೆಯಲ್ಲಿ ಶಿಸ್ತು ಪಾಲಿಸುವ ರಾಜ್ಯಗಳು ವಿತ್ತೀಯ ಕೊರತೆ ಪ್ರಮಾಣದ ಶೇ. 0.5ರಷ್ಟು ಹೆಚ್ಚು ಸಾಲ ಪಡೆಯಲು ಅವಕಾಶವಿರುತ್ತದೆ. ಗರಿಷ್ಠ ಶೇ.3.5ರಷ್ಟು ಸಾಲ ಪಡೆಯಲು ಅವಕಾಶವಿದೆ. ಇದನ್ನು ಬಳಸಿಕೊಂಡು ಶೇ. 3ಕ್ಕಿಂತಲೂ ಹೆಚ್ಚು ಸಾಲ ಪಡೆಯಲು ರಾಜ್ಯ ಸರ್ಕಾರ ಮುಂದಾಗುವುದೇ ಕಾದು ನೋಡಬೇಕಿದೆ.
ಜಿಎಸ್‌ಡಿಪಿ ವರ್ಷದಿಂದ ವರ್ಷಕ್ಕೆ ಹೆಚ್ಚು ತ್ತಲೇ ಇದ್ದು, ಆರ್ಥಿಕ ಪ್ರಗತಿಯನ್ನು ದೃಢೀ ಕರಿ ಸುತ್ತಿದೆ. ವಾರ್ಷಿಕವಾಗಿ ಸರಾಸರಿ ಶೇ. 10ರಷ್ಟು ಪ್ರಗತಿಯಾಗುತ್ತಿದೆ. ತೆರಿಗೆ ಆದಾ ಯವು ಆಶಾದಾಯಕವಾಗಿಯೇ ಇದೆ. ಆದರೂ ಕೇಂದ್ರದಿಂದ ರಾಜ್ಯಕ್ಕೆ ಬರ ಬೇಕಾದ ತೆರಿಗೆ ಪಾಲು, ಕೇಂದ್ರ ಪ್ರಾಯೋ ಜಿತ ಕಾರ್ಯಕ್ರಮ ಗಳಿಗೆ ಕೇಂದ್ರದ ಪಾಲಿನ ಮೊತ್ತ, ಅನುದಾನ, ವಿಶೇಷ ಅನುದಾನದಲ್ಲಿ ಕಡಿತ ವಾಗಿರುವುದು ಆರ್ಥಿಕ ಲೆಕ್ಕಾಚಾರಕ್ಕೆ ತೊಡಕಾಗಿದೆ.
ಗಾತ್ರದಲ್ಲಿ ಕೊಂಚ ಏರಿಕೆ!: ವಾಸ್ತವಿಕ ಆದಾಯ, ವೆಚ್ಚದ ಲೆಕ್ಕಾಚಾರ ಪರಿಶೀಲಿಸಿ ದರೆ ಬಜೆಟ್ ಗಾತ್ರ 2019-20ಕ್ಕಿಂತ ಕಡಿಮೆಯಾಗುವಂತಹ ಪರಿಸ್ಥಿತಿ ಇದಂತಿದೆ. ಆರ್ಥಿಕ ಪ್ರಗತಿ ಏರುಮುಖ ವಾಗ ದಿದ್ದರೆ ಹಲವು ಅನುಮಾನ ಕಾರಣ ವಾಗುವ ಸಾಧ್ಯತೆಗಳಿರುತ್ತದೆ. 2019-2 0ನೇ ಸಾಲಿನ ಬಜೆಟ್ ಗಾತ್ರದ ಶೇ. 10ಕ್ಕಿಂತಲೂ ಕಡಿಮೆ ಪ್ರಮಾಣದ ಹೆಚ್ಚು ವರಿ ಮೊತ್ತದ ಹಾಗೂ ಸಾಲವನ್ನು ಪ್ರಧಾನವಾಗಿ ಅವಲಂಬಿಸಿರುವ ಬಜೆಟ್ ಮಂಡನೆಯಾಗುವ ಲಕ್ಷಣ ಕಾಣುತ್ತಿದೆ ಎಂದು ಮೂಲಗಳು ಹೇಳಿವೆ.
ಬಜೆಟ್ ಗಾತ್ರ (ಕೋಟಿ ರೂ.ಗಳಲ್ಲಿ)ವರ್ಷ ಅಂದಾಜು ವೆಚ್ಚ ಪರಿಷ್ಕೃತ ವೆಚ್ಚ
2017-18 1,86,561 1,89,679
2018-19 (ಸಿದ್ದರಾಮಯ್ಯ) 2,09,181 –
2018-19 (ಎಚ್.ಡಿ. ಕುಮಾರಸ್ವಾಮಿ) 2,18,488 2,17,451
2019-20 (ಎಚ್.ಡಿ.ಕುಮಾರಸ್ವಾಮಿ) 2,34,153 – ಬಾಹ್ಯ ಸಾಲ (ಕೋಟಿ ರೂ.ಗಳಲ್ಲಿ)
ವರ್ಷ ಅಂದಾಜು ಸಾಲ ಪರಿಷ್ಕೃತ ಸಾಲ
2017-18 34,716 34,171
2018-19 (ಸಿದ್ದರಾಮಯ್ಯ) 36,317 –
2018-19 (ಎಚ್.ಡಿ.ಕುಮಾರಸ್ವಾಮಿ) 43,731 43,731
2019-20 (ಎಚ್.ಡಿ.ಕುಮಾರಸ್ವಾಮಿ) 46,127 * ಎಂ. ಕೀರ್ತಿಪ್ರಸಾದ್