ಹೈದರಾಬಾದ್: ಒಂದು ಕಾಲದ ಅಮೆರಿಕದ ಜನಪ್ರಿಯ ಹಾಡುಗಾರ, ಗೀತರಚನಕಾರ ಬಾಬ್ ಡಿಲಾನ್ ಅವರ “ದ ಟೈಮ್ಸ್ ದೇ ಆರ್ ಎ ಚೇಂಜಿಂಗ್(ಕಾಲ ಎಲ್ಲವನ್ನೂ ಬದಲಾಯಿಸುತ್ತದೆ) ಎಂಬ ಹಾಡು ತುಂಬಾ ಜನಪ್ರಿಯವಾದದ್ದು…ಅದೇ ರೀತಿ ಆಂಧ್ರಪ್ರದೇಶದ ಈ ರೈತನ ವಿಚಾರದಲ್ಲಿಯೂ ಹಾಗೇ ಆಗಿದೆ..ಕಾಲಕ್ಕೆ ತಕ್ಕ ಕೋಲ ಎಂಬಂತೆ ಈತ ಕಂಡುಕೊಂಡ ಉಪಾಯ ನಿಮ್ಮ ಹುಬ್ಬೇರಿಸುತ್ತದೆ!
ಬಾಲಿವುಡ್ ತಾರೆ ಸನ್ನಿ ಲಿಯೋನ್ ಗೂ ಆಂಧ್ರಪ್ರದೇಶದ ನೆಲ್ಲೂರ್ ಜಿಲ್ಲೆಯ ಈ ರೈತನಿಗೂ ಏನು ಸಂಬಂಧ ಅಂತ ಎಣಿಸುತ್ತಿದ್ದೀರಾ? ತನ್ನ ಬೆಳೆಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಈ ರೈತ ಸನ್ನಿ ಲಿಯೋನ್ ಮೊರೆ ಹೋಗಿದ್ದಾನೆ!
ಸಾಮಾನ್ಯವಾಗಿ ಹಕ್ಕಿಗಳ ಕಾಟ ಹಾಗೂ ಕಳ್ಳಕಾಕರ ಕಾಕ ದೃಷ್ಟಿಯಿಂದ ಬಚಾವಾಗಲು ಭತ್ತದ ಗದ್ದೆಯಲ್ಲಿ ಬೆದರು ಬೊಂಬೆ ಇರಿಸುವುದು ಸಹಜ. ಆದರೆ ನೆಲ್ಲೂರು ಜಿಲ್ಲೆಯ ಬಂಡಾ ಕಿಂಡಿ ಪಲ್ಲೆ ಗ್ರಾಮದ ಚೆಂಚು ರೆಡ್ಡಿ ಎಂಬ ರೈತ ತನ್ನ ಹೊಲದಲ್ಲಿ ಬೆಳೆದ ಬೆಳೆ ಕಳ್ಳ ಕಾಕರ ದೃಷ್ಟಿ ಬೀಳದಂತೆ ಮಾಡಲು ನಟಿ ಸನ್ನಿ ಲಿಯೋನ್ ಬಿಕಿನಿ ಧರಿಸಿದ್ದ ದೊಡ್ಡ ಫೋಸ್ಟರ್ ಅನ್ನು ಗದ್ದೆಯಲ್ಲಿ ಹಾಕಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹೌದು ರೆಡ್ಡಿ ಅವರ 10 ಎಕರೆ ಜಾಗದಲ್ಲಿ ಹೂ ಕೋಸು, ಕ್ಯಾಬೇಜ್(ಎಲೆ ಕೋಸು) ಹಾಗೂ ಮೆಣಸು ಸೇರಿದಂತೆ ಬಂಪರ್ ಬೆಳೆ ಬೆಳೆಯುತ್ತಾರೆ. ಹೀಗಾಗಿ ತನ್ನ ಬೆಳೆಯ ಮೇಲೆ ಕಣ್ಣು ಹಾಕುವ ಬದಲು ಜನರು ಸನ್ನಿ ಲಿಯೋನ್ ನ ಫೋಸ್ಟರ್ ಮೇಲೆ ದೃಷ್ಟಿ ನೆಟ್ಟಿರುತ್ತಾರೆ ಎಂಬುದು ರೆಡ್ಡಿ ಅವರ ಉತ್ತರ!
Related Articles
ಸನ್ನಿ ಲಿಯೋನ್ ಫೋಸ್ಟರ್ ನಲ್ಲಿ ಹೇ..ಅಳಬೇಡಿ, ನನಗೆ ಹೊಟ್ಟೆ ಕಿಚ್ಚಾಗುತ್ತೇ ಎಂದು ತೆಲುಗಿನಲ್ಲಿ ಸಂದೇಶವನ್ನೂ ಬರೆಸಿದ್ದಾರೆ! ಅಂತೂ ಬೆಳೆಕಾಯಲು ಸನ್ನಿ ಲಿಯೋನ್ ಪೋಸ್ಟರ್ ಹಾಕಿ ಅನುಕೂಲವಾಗಿದೆ ಎಂಬುದು ರೆಡ್ಡಿಯವರ ಮಾತು!
(Image Credit: Sunny Leone/Twitter)