Advertisement
ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಕಾಮಗಾರಿಯ ಟ್ಯಾಕ್ಸಿ ಬೇ ರಚನೆ ಕಾಮಗಾರಿಯ ಮಣ್ಣು ಕರಂಬಾರು ಪ್ರದೇಶದ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಮಳೆ ನೀರು ತೋಡುಗಳಲ್ಲಿ ಹರಿದು ಅಪಾರ ಹಾನಿಯಾಗಿತ್ತು. ಮಳವೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಕೊಪ್ಪಳ, ಏರುಗುಡ್ಡೆ, ಪಂಚಕೋಟಿ, ಕೋರªಬು ದೈವಸ್ಥಾನದ ಬಳಿ, ಪಾದೆಬೆಟ್ಟು, ಬಗ್ಗಕೋಡಿ ಪ್ರದೇಶದ ಸುಮಾರು ಮನೆಗಳಿಗೆ ಹಾನಿಯಾಗಿ ಕೃಷಿ ತೋಟಗಳು ನಷ್ಟ ಅನುಭವಿಸಿದ್ದವು. ಗ್ರಾ. ಪಂ. 67 ಜಾಗಗಳನ್ನು ಗುರುತಿಸಿ 1.40 ಕೋಟಿ ನಷ್ಟದ ಬಗ್ಗೆ ವರದಿ ಸಲ್ಲಿಸಿತ್ತು. ಅದರಲ್ಲಿ 16 ಮಂದಿಗೆ ಪ್ರಕೃತಿ ವಿಕೋಪದಡಿ 2 ರಿಂದ 3 ಸಾವಿರ ರೂ. ಪರಿಹಾರ ಸಿಕ್ಕಿದ್ದು ಇನ್ನೂ ಕೆಲವರಿಗೆ ಬಿಡಿಗಾಸು ಸಿಕ್ಕಿಲ್ಲ. ಒಬ್ಬರಿಗೆ ಮಾತ್ರ 1ಲಕ್ಷ 20 ಸಾವಿರ ಪರಿಹಾರ ಸಿಕ್ಕಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಮಳವೂರು ಗ್ರಾ.ಪಂ. ನ ಕರಂಬಾರು ಪ್ರದೇಶದವರೆಗೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ 6.75ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮಳೆನೀರು ಹರಿಯುವ ಕಾಲುವೆಯ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಕೆಲವೆಡೆ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಮಹಾಮಳೆಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆಗ್ರಾಮ ವಿಟ್ಲಬೆಟ್ಟು ದೇವಸ್ಥಾನದ ಬಳಿ ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಕಾಮ ಗಾ ರಿಯ ಟ್ಯಾಕ್ಸಿ ಬೇಗೆ ನೀರು ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿ ರಸ್ತೆ ಡಾಮರೀಕರಣ ಈ ನೀರಿನಿಂದ ಕೊಚ್ಚಿ ಹೋಗಿ ಪರಿ ಸರದ ಮನೆ, ಬಾವಿ, ಕೆರೆ, ಕೃಷಿ ಪ್ರದೇ ಶ ಗ ಳಿಗೆ ಮಣ್ಣು ತುಂಬಿತ್ತು. ಶಿವರಾಮ ಕುಲಾಲ್ ಅವರ ಮನೆ ಅಡಿಪಾಯ, ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ, ತಾರಾನಾಥ ಪೂಜಾರಿ, ದೇವಪ್ಪ ಪೂಜಾರಿ, ಲೀಲಾ ಪೂಜಾರಿ ಮನೆ, ಬಾವಿ, ಕೃಷಿ ಹಾಗೂ ಸೀತಾರಾಮ ಶೆಟ್ಟಿಯವರ ಅವರಣ ಗೋಡೆ, ಮನೆಗೆ ಮಣ್ಣು ತುಂಬಿ, ಬಾಲಕೃಷ್ಣ ಭಂಡಾರಿಯವರ ಕೆರೆ ಹಾಗೂ ಗದ್ದೆ, ಕೃಷಿ ಪ್ರದೇಶಗಳಿಗೆ ಅಪಾರ ಹಾನಿ ಸಂಭವಿಸಿತ್ತು. ಶಿವರಾಮ್ ಕುಲಾಲ್ ಅವರಿಗೆ 1,01,900 ರೂಪಾಯಿ ಪರಿಹಾರ ಸಿಕ್ಕಿದೆ. ಇತರರಿಗೆ ತಲಾ 5,200 ರೂಪಾಯಿ ಪರಿಹಾರ ನೀಡಲಾಗಿದೆ.
Related Articles
Advertisement
ಬಜಪೆ -ಮರವೂರು-ಮಂಗಳೂರು ರಾಜ್ಯ ಹೆದ್ದಾರಿ67ರ ಕರಂಬಾರಿನ ಮಸೀದಿ ಬಳಿ ಚರಂಡಿ ಸಮಸ್ಯೆಯಿಂದಾಗಿ ಮಳೆಯ ನೀರು ಹರಿಯದೆ ರಸ್ತೆಯಲ್ಲಿ ಶೇಖರಣೆಗೊಂಡು ಇಕ್ಕೆಲದಲ್ಲಿ ಹರಿದು ಮಣ್ಣು ಕೊರೆದ ಕಾರಣ ಹೆದ್ದಾರಿಯ ಬದಿಯ ಮಣ್ಣು ಕುಸಿದಿತ್ತು. ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಈಗ ತಡೆಗೋಡೆ ನಿರ್ಮಾಣವಾಗಿದೆ. ಮಂಗಳವಾರ ಶಾಸಕ ಡಾ| ವೈ. ಭರತ್ ಶೆಟ್ಟಿ ವಿಟ್ಲಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಅವರೊಂದಿಗೆ ತಾ. ಪಂ.ಸದಸ್ಯ ವಿಶ್ವನಾಥ ಶೆಟ್ಟಿ, ವಕೀಲ ಶೈಲೇಶ್ ಚೌಟ, ಸುಧಾಕರ ಕೊಳಂಬೆ ಉಪಸ್ಥಿತರಿದ್ದರು.
ಕ್ರಮಕ್ಕೆ ಆಗ್ರಹಮಳೆಹಾನಿಯಲ್ಲಿ ಈಗಾಗಲೇ ರಸ್ತೆಯ ತಡೆಗೋಡೆಗೆ ಸುಮಾರು 8 ಲಕ್ಷ ರೂ. ನಷ್ಟು ಅನುದಾನ ಇಡಲಾಗಿದೆ. ಜಿಲ್ಲಾ ಪಂಚಾಯತ್ ಎಂಜಿನಿಯರ್‌ರಲ್ಲಿ ಮಾತನಾಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.
- ಡಾ| ಭರತ್ ಶೆಟ್ಟಿ ವೈ., ಶಾಸಕ ಚರಂಡಿ ವ್ಯವಸ್ಥೆ ಆಗಬೇಕಿದೆ
ಬಾವಿಯಲ್ಲಿ ಬಿದ್ದಿರುವ ಮಣ್ಣು ತೆಗೆಯುತ್ತೇನೆ ಎಂದು ಗುತ್ತಿಗೆದಾರ ಹೇಳುತ್ತಿದ್ದಾರೆ. ಮನೆಗೆ ಬರುವ ರಸ್ತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಇದು ಮಳೆ ಬಂದರೆ ಕೊಚ್ಚಿ ಹೋಗಬಹುದು. ಮಳೆ ಬರುವ ಮುಂಚೆ ಚರಂಡಿ ವ್ಯವಸ್ಥೆ ಮುಖ್ಯವಾಗಿ ಆಗಬೇಕಿದೆ.
- ಶಿವರಾಮ ಕುಲಾಲ್, ಸ್ಥಳೀಯ ನಿವಾಸಿ.