Advertisement
ರಾಜಣ್ಣ: ಜಾತಿ ಪದ್ದತಿಯನ್ನು ನಿಷೇಧಿಸಬೇಕು. ಮಠಕ್ಕೆ ಕೊಡುವ ಆದ್ಯತೆ ಸಂಪೂರ್ಣ ವಾಗಿ ಕಡಿಮೆಯಾಗಬೇಕು. ಜಾತ್ಯಾತೀತ ಪದ ರಾಜಕೀಯದಿಂದ ಅಪವಿತ್ರವಾಗಿದೆ. ಲೋಕಾಯುಕ್ತ ಕಾನೂನು ಬಲಿಷ್ಠವಾಗಬೇಕು, ಜಾತಿ ಆಧಾರಿತ ವ್ಯವಸ್ಥೆ ನಿಲ್ಲಬೇಕು.
Related Articles
Advertisement
ನವಿ ದಾಸ್: ಜಾತಿ, ಮತ, ಧರ್ಮ ಇವುಗಳ ಬಗ್ಗೆ ಸಾಂವಿಧಾನಿಕವಾಗಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಉನ್ನತ ಮಟ್ಟದ ಅಧಿಕಾರಿಗಳು ಹತ್ಯೆಯಾದಾಗ ಅದರ ನ್ಯಾಯಕ್ಕೆ ಹೋರಾಟ ಮಾಡದೆ ಇರುವಂತಹ ಜಾತಿ, ಒಬ್ಬ ಪ್ರಜೆಗಳಿಂದ ಚುನಾಯಿತ ವ್ಯಕ್ತಿ ಬಗ್ಗೆ ಏಕೆ ? ನಮ್ಮ ದೇಶ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೊದಲು ಜಾತಿಯ ನಿರ್ಮೂಲನೆ ಅಗತ್ಯ.
ಲಿಂಗಪ್ಪ ಗೌಡ: ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜಾತಿ ಮತ ಪಂಥ ಧರ್ಮ ಭ್ರಷ್ಟಾಚಾರ ನಿರ್ಮೂಲನೆ ತೊಡರು ಆಗಬಾರದು, ಭ್ರಷ್ಟಾಚಾರ ಮಾಡುವವರನ್ನು ಜಾತಿ ನೋಡಿ ಅಳೆದರೆ. ನಾಳೆ ನಮ್ಮಂತಹ ಮೂರ್ಖರು ಯಾರು ಇರುವುದಿಲ್ಲ.
ಸೈಮನ್ ಫರ್ನಾಂಡೀಸ್: ಖಂಡಿತಾ ತಪ್ಪು. ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಯಾವುದೇ ಜಾತಿಯವರಾಗಲಿ, ಧರ್ಮದವರಾಗಲಿ, ಸಮುದಾಯದವರಾಗಲಿ, ಅವರು ಮಾಡಿದ ತಪ್ಪು ತಪ್ಪೇ. ! ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಪರಾಧ..
ದೊಡ್ಡನಗೌಡ : ಪ್ರತಿಯೊಬ್ಬ ರಾಜಕಾರಣಿಗಳಿಗೂ ಅಭಿಮಾನಿಗಳಿರುತ್ತಾರೆ ಹಾಗೆ ಪ್ರತಿಯೊಂದು ಜಾತಿಗೂ ಗುರುಗಳಿದ್ದಾರೆ. ಆದರೇ ಜನರನ್ನು ತಿದ್ದುವ, ಸೌಹಾರ್ದತೆ, ಸಹಬಾಳ್ವೆಯ ಮಹತ್ವ ಸಾರಬೇಕಾಗಿರುವ ಮಠ ಮಂದಿರಗಳು ಜಾತಿ ರಾಜಕಾರಣದ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ.
ಕೆ ಎಸ್ ಕೃಷ್ಣ: ಪ್ರತಿಯೋಬ್ಬ ರಾಜಕಾರಣಿಗಳಿಗೂ ಅವರವರ ಜಾತಿಯ ಮಠಾಧೀಶರು ಬೆಂಬಲಕ್ಕೆ ನಿಂತುಕೊಂಡರೆ ನ್ಯಾಯ,ನೀತಿ,ಧರ್ಮಕ್ಕೆ ಬೆಲೆ ಎಲ್ಲಿ?