Advertisement

ಭಾರತ ಕ್ರಿಕೆಟ್ ತಂಡಕ್ಕೊಬ್ಬ ಸಮರ್ಥ ವಿಕೆಟ್ ಕೀಪರ್ ಅಗತ್ಯವಿದೆಯೇ ?

04:12 PM Nov 09, 2019 | Team Udayavani |

ಮಣಿಪಾಲ: ಭಾರತ ಕ್ರಿಕೆಟ್ ತಂಡಕ್ಕೊಬ್ಬ ಸಮರ್ಥ ವಿಕೆಟ್ ಕೀಪರ್ ಅಗತ್ಯವಿದೆಯೇ? ನಿಮ್ಮ ಪ್ರಕಾರ ವಿಕೆಟ್ ಕೀಪಿಂಗ್ ಗೆ ಬೆಸ್ಟ್ ಆಯ್ಕೆ ಯಾರು? ಎಂಬ ಪ್ರಶ್ಬೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ರಾಜೇಶ್ ಅಂಚನ್; ಖಂಡಿತಾ ಹೌದು. ಧೋನಿ ನಂತರ ವಿಕೆಟ್ ಕೀಪರ್ ಸ್ಥಾನ ನಿಭಾಯಿಸಬಲ್ಲ ಆಟಗಾರ ಕಂಡು ಬರ್ತಿಲ್ಲಾ. ರಿಷಬ್ ಪಂತ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲಾ. ಬ್ಯಾಟಿಂಗ್,ಕೀಪಿಂಗ್ ಎರಡನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಆಟಗಾರನ ಅವಶ್ಯಕತೆ ಇದೆ. ಹಿಂದೆ ಭಾರತದಲ್ಲಿ ಕೀರ್ಮಾನಿ, ಸದಾನಂದ ವಿಶ್ವನಾಥ್, ಕಿರಣ್ ಮೊರೆ ಅವರಂತಹ ಅತಿರಥರು ಇದ್ದರು. ಈಗಲೂ ಅಂತಹ ಆಟಗಾರನ ಅವಶ್ಯಕತೆ ಇದೆ. ಸದ್ಯಕ್ಕೆ ಪಂತ್ ಬದಲು ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡೋದು ಒಳ್ಳೆಯದು

ಗೌಡ ನವೀನ್ ಕೆ ಬಿ: ಸಂಜು ಸಾಮ್ಸನ್ ಅಂತ ಒಳ್ಳೆಯ ಕೀಪರ್ ಕಮ್ ಬ್ಯಾಟ್ಸಮನ್ ಮತ್ತೊಬ್ಬರು ಇಲ್ಲ. ಕಲೆಗೆ ಬೆಲೆ ಕೊಡದೆ ಆ ಪಂತ್ ಗೆ ಕೊಡ್ತಾ ಇದ್ದಾರೆ.

ಶ್ರೀಶಾ ಉಡುಪ: ಕೆ ಎಲ್ ರಾಹುಲ್ ಅವರಿಗೂ ಅವಕಾಶ ಕೊಟ್ಟು ನೋಡಬಹುದು. ಐಪಿಎಲ್ ಅಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ ಟಿ ಟ್ವೆಂಟಿ ವರ್ಲ್ಡ್ ಕಪ್ ಅಲ್ಲಿ ಧೋನಿ ಗೆ ಅವಕಾಶ ನೀಡಬೇಕು. ಧೋನಿಯ ಅವಶ್ಯಕತೆ ತುಂಬಾ ಇದೆ ಟೀಮ್ ಇಂಡಿಯಾಗೆ.

ನಿತ್ಯಾ ಪೂಜಾರಿ: ಧೋನಿ ಆಡುವಾಗ ಇರೋ ಒಳ್ಳೆ ಕೀಪರ್ ಗಳನ್ನು ನೆಗಲೆಕ್ಟ್ ಮಾಡಿದ್ರಿ ಇವಾಗ ಕೀಪರ್ ಗಳನ್ನು ಹುಡುಕ್ತಾ ಇದ್ದೀರಾ.

Advertisement

ಶೇಖರ್ ಕಡತೋಕ; ಸ್ವಲ್ಪ ಅನುಭವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್. ಯಾಕೂ ಪಂತ್ ವಿಕೆಟ್ ಕೀಪಕಿಂಗ ನಲ್ಲಿ ಸರಿಯಾಗಿ ಮಾಡತಯಿಲ್ಲ. ಹೊಸ ಪ್ರತಿಭೆ ಅಂತ ಆಂದ್ರೇ ಸಂಜು ಸ್ಯಾಮ್ಸನ್. ಆದರೆ ಆಯ್ಕೆ ನಿಮ್ಮ. ಸಂಜುಗೇ ಒಂದೇ ಚಾನ್ಸ್ ಕೂಡಬಹುದು ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next