Advertisement

ದೋಳ್ಪಾಡಿ- ಕೊಜಂಬೇಡಿ: ಸೇತುವೆ ನಿರ್ಮಾಣವೆಂದು?

10:30 PM May 15, 2019 | mahesh |

ಕಾಣಿಯೂರು: ಗ್ರಾಮೀಣ ಭಾಗದಲ್ಲಿ ಹಲವೆಡೆ ರಸ್ತೆ ಇದ್ದರೆ ಸೇತುವೆ ಇಲ್ಲ, ಸೇತುವೆ ಇದ್ದರೆ ರಸ್ತೆ ಇಲ್ಲ ಎನ್ನುವ ಪರಿಸ್ಥಿತಿ ಸರ್ವೆ ಸಾಮಾನ್ಯ. ಊರನ್ನು ಸಂಪರ್ಕಿಸುವ ರಸ್ತೆ ಸುಧಾರಿಸಿದರೆ ಗ್ರಾಮವೇ ಅಭಿವೃದ್ಧಿಯಾದಂತೆ. ಆದರೆ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ದೋಳ್ಪಾಡಿ – ಕೊಜಂಬೇಡಿ- ಎಡಮಂಗಲ- ಕಡಬ ಸಂಪರ್ಕ ರಸ್ತೆಗೆ ಸಂಪರ್ಕ ಸೇತುವೆಯ ಭಾಗ್ಯಇನ್ನೂ ಕೂಡಿ ಬಂದಿಲ್ಲ.

Advertisement

ಊರವರಿಂದಲೇ ಅಡಿಕೆ ಪಾಲ
ಇಲ್ಲಿ ಸೇತುವೆ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಸೇತುವೆ ನಿರ್ಮಾಣದ ಕನಸು ಹಾಗೆಯೇ ಉಳಿದಿದೆ. ಇದರಿಂದ ಈ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹೊಳೆಗೆ ಅಡಿಕೆ ಮರದ ಪಾಲವನ್ನು ಊರ ನಾಗರಿಕರು ಕಟ್ಟಬೇಕು. ಈ ಸೇತುವೆ ಮೂಲಕ ನಿತ್ಯ ಸಾಗುವವರ ಸಂಖ್ಯೆ ಹಲವು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಅಡಿಕೆ ಮರದ ಸೇತುವೆಯಲ್ಲಿ ದಾಟಬೇಕು. ಮಳೆಗಾಲದಲ್ಲಿ ಅಪಾಯವನ್ನು ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನದು.

ಸುತ್ತು ಬಳಸಿ ವಾಹನ ಚಾಲಕರು ಪೇಟೆಗೆ ಬರಬೇಕಾದ ಪರಿಸ್ಥಿತಿ ಇಲ್ಲಿಯದ್ದು. ಒಂದು ವೇಳೆ ಈ ಪರಿಸರದಲ್ಲಿ ಯಾರದಾರೂ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದರೆ ದೇವರೇ ಗತಿ. ಸಂಪರ್ಕ ಸೇತುವೆಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಶಾಸಕರಿಗೆ ಮನವಿ ಮಾಡಲಾಗಿದೆ
ದೋಳ್ಪಾಡಿ-ಕೊಜಂಬೇಡಿ ಸಂಪರ್ಕಕ್ಕೆ ಸೇತುವೆ ನಿರ್ಮಾಣವಾಗಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಈ ಬಗ್ಗೆ ಸುಳ್ಯ ಶಾಸಕರಿಗೆ ಮನವಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಭರವಸೆಯನ್ನು ಶಾಸಕರು ನೀಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಜಿ.ಪಂ. ಎಂಜಿನಿಯರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೋಳ್ಪಾಡಿ – ಕೊಜಂಬೇಡಿಯಲ್ಲಿ ಸೇತುವೆ ನಿರ್ಮಾಣವಾದರೆ ಎಡಮಂಗಲದ ಮೂಲಕ ತಾಲೂಕು ಕೇಂದ್ರ ಕಡಬಕ್ಕೆ ಸಂಚರಿಸಲು ಹಾಗೂ ದೋಳ್ಪಾಡಿ ಶಾಲೆಗಳಿಗೆ ಬರಲು ಮಕ್ಕಳಿಗೆ ಸುಲಭ ದಾರಿಯಾಗಲಿದೆ.
– ಉಮೇಶ್‌ ಆಚಾರ್ಯ ದೋಳ್ಪಾಡಿ, ಸದಸ್ಯರು, ಕಾಣಿಯೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next