Advertisement

Doddanagudde; “ಶ್ರೀರಾಮನಂತೆ ಸ್ಮಿತಪೂರ್ವಭಾಷಿಯಾಗಬೇಕು’

11:48 PM Jan 22, 2024 | Team Udayavani |

ಉಡುಪಿ: ಸತ್ಯವಾದ ಮಾತುಗಳನ್ನು ಮತ್ತೂಬ್ಬರ ಮನಸ್ಸು ನೋವಾಗದ ಹಾಗೆ ಮಂದಸ್ಮಿತದಿಂದ ಮೃದುವಾಗಿ ಆಡುವ ಮೂಲಕ ಪರಮಾತ್ಮ ಶ್ರೀರಾಮಚಂದ್ರನು ಸ್ಮಿತ ಭಾಷಿಯಾಗಿದ್ದಾನೆ. ಅಂತಹ ಸದ್ಗುಣ ವನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕು ಎಂದು ಭೀಮನಕಟ್ಟೆ ಮಠಾಧಿಪತಿ ಶ್ರೀ ರಘು ವರೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ರಾಮನಾಮ ತಾರಕ ಮಂತ್ರ ಹೋಮದ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಯತ್ನ ಮಾಡಬೇಕಾಗಿದೆ
ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾದಂತೆ ನಮ್ಮ ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಿಕೊಂಡರೆ ಎಲ್ಲವೂ ಒಳಿತಾಗುವುದು. ಶ್ರೀರಾಮ ನನ್ನು ಧ್ಯಾನಿಸುವಾಗ ಆತನ ಒಂದು ಗುಣ ಸ್ವಭಾವವನ್ನಾದರೂ ನಮ್ಮೊಳಗೆ ತುಂಬಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ, ನಾವೆಲ್ಲರೂ ಶ್ರೀರಾಮನ ಆದರ್ಶವನ್ನು ಪಾಲಿಸಿಕೊಂಡು ಬದುಕುವ ಯೋಗ-ಯೋಗ್ಯತೆಯನ್ನು ಅವನೇ ಕರುಣಿಸಬೇಕೆಂಬುದು ಪ್ರಾರ್ಥನೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾತನಾಡಿ, ಕ್ಷೇತ್ರದಲ್ಲಿ ನೆರವೇರಿಸಲಾದ ರಾಮತಾರಕ ಮಂತ್ರ ಹೋಮವನ್ನು ಪ್ರಧಾನಿ ನರೇಂದ್ರ ಮೋದಿಯವರನ್ನೇ ಸಂಕಲ್ಪವಾಗಿರಿಸಿ, ದೇಶದ ಸುಭಿಕ್ಷೆಗೆ ಪ್ರಾರ್ಥಿಸಲಾಗಿದೆ ಎಂದರು.

Advertisement

ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಅಧ್ಯಕ್ಷ ಡಾ| ಅರವಿಂದ ಹೆಬ್ಟಾರ್‌, ಪಲಿಮಾರು ಮಠದ ಪಿಆರ್‌ಒ ಶ್ರೀಶ ಭಟ್‌ ಕಡೆಕಾರು ಉಪಸ್ಥಿತರಿದ್ದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next