Advertisement

58 ವರ್ಷದ ಸಮಸ್ಯೆಗೆ ಕ್ಷಣಾರ್ಧದಲ್ಲೇ ಪರಿಹಾರ : ಬಸಪ್ಪನ ಪವಾಡ ನೋಡಿ ನಿಬ್ಬೆರಗಾದ ಜನ

04:21 PM Feb 20, 2022 | Team Udayavani |

ಮಂಡ್ಯ: ಐದು ದಶಕಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಮೂಲಕ ಬಸಪ್ಪ ಪವಾಡ ಮಾಡಿದ್ದಾನೆ. ಮಂಡ್ಯ ತಾಲೂಕಿನ ದೊಡ್ಡಬಾಣಸವಾಡಿ ಗ್ರಾಮದಲ್ಲಿ ದೇವಾಲಯಗಳಿಗೆ ಗುಡ್ಡಪ್ಪ ನೇಮಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿ ಬಸಪ್ಪ ಪವಾಡ ಮಾಡಿದ್ದಾನೆ.

Advertisement

5 ದಶಕಗಳ ಹಿಂದೆ ನಿಂತ ಹಬ್ಬವನ್ನ ಮತ್ತೆ ನಡೆಸಲು ಗ್ರಾಮಸ್ಥರ ಸಂಕಲ್ಪ ಮಾಡಿದ್ದರು. ಆ ಹಿನ್ನೆಲೆ ಗ್ರಾಮಸ್ಥರು ಬಸಪ್ಪನ ಮೊರೆ ಹೋಗಿದ್ದರು. ಗ್ರಾಮದ ಪಟ್ಟಲದಮ್ಮ ದೇಗುಲದ ಅರ್ಚಕರಿಬ್ಬರು 58 ವರ್ಷಗಳ ಹಿಂದೆ ವಯೋಸಹಜ ಸಾವನ್ನಪ್ಪಿದ್ದರು. ಆ ಬಳಿಕ ಪಟ್ಟಲದಮ್ಮ ದೇಗುಲಕ್ಕೆ ಮೈಮೇಲೆ ದೇವರು ಬಾರದ ಅರ್ಚಕರಿಂದ ಪೂಜೆ ಪುನಸ್ಕಾರ ಮಾಡುತ್ತಿದ್ದರು.
ಅಂದಿನಿಂದಲೂ ಊರಿನಲ್ಲಿ ಕೊಂಡ, ಬಂಡಿ ಗ್ರಾಮದೇವತೆ ದೊಡ್ಡ ಹಬ್ಬ ನಡೆಯುತ್ತಿರಲಿಲ್ಲ. 58 ವರ್ಷಗಳ ಬಳಿಕ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಈಗ ಹಬ್ಬ ಮಾಡಲು ನಿರ್ಧಾರ ಮಾಡಿದ್ದರು.

ಹಬ್ಬ ಆಚರಿಸುವ ಮುನ್ನ ಗ್ರಾಮದ ದೇವಾಲಯಗಳಿಗೆ ಅರ್ಚಕರ ನೇಮಿಸುವಂತೆ ಪಕ್ಕದೂರಿನ ಕಬ್ಬಾಳಮ್ಮದೇವಿ ಸೂಚನೆ ನೀಡಿತ್ತು. ಈ ಹಿನ್ನಲೆ ಗ್ರಾಮ ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರ ನೇಮಕಕ್ಕೆ ಬಸಪ್ಪನ ಮೋರೆ ಹೋಗಿದ್ದರು. ಮೂರು ದೇಗುಲಗಳಿಗೆ ಅರ್ಚಕರನ್ನು ಬಸಪ್ಪನೇ ನೇಮಿಸಿದೆ.

ಇತಿಹಾಸ ಪ್ರಸಿದ್ದ ಮಠ ಹೊನ್ನನಾಯಕನಹಳ್ಳಿಯ ಧರೆಗೆ ದೊಡ್ಡವರ ಮಂಟೇಸ್ವಾಮಿ ಬಸಪ್ಪ ನೇಮಿಸಿ ಪವಾಡ ಮಾಡಿ ಸಮಸ್ಯೆ ಬಗೆಹರಿಸಿದೆ.

ಇದನ್ನೂ ಓದಿ : ಕಾಸರಗೋಡು :ಸ್ವಪಕ್ಷದ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ, ಬಿಜೆಪಿ ಕಚೇರಿಗೆ ಬೀಗ

Advertisement

ಮೈಸೂರು ರಾಜವಂಶಸ್ಥರಾದ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜ್ ಅರಸ್ ಮಠದ ಪಿಠಾಧ್ಯಕ್ಷರು. ದೊಡ್ಡ ಬಾಣಸವಾಡಿ ಗ್ರಾಮಕ್ಕೆ ಬಂದು ಪೂಜೆ ಸ್ವೀಕಾರ ಮಾಡಿದ ಬಳಿಕ ದೇಗುಲಗಳಿಗೆ ಗುಡ್ಡಪ್ಪರನ್ನ ನೇಮಸಿದೆ. ದೇಗುಲದ ಮುಂಭಾಗದ ಕಲ್ಯಾಣಿಗೆ ತಳ್ಳಿ ಅರ್ಚಕರ ಆಯ್ಕೆ ಮಾಡಿತು. ಗುಂಪಿನಲ್ಲಿ ಕುಳಿತಿದ್ದವರಲ್ಲಿ ಇವರೇ ಅರ್ಚಕರು ಎಂದು ಬಸಪ್ಪ ಗುರುತು ಮಾಡಿತು.
ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಸಂತೋಷ ಪಟ್ಟರು. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನು ಗುಡ್ಡಪ್ಪರನ್ನಾಗಿ ನೇಮಿಸಿತು. ಈ ಪವಾಡವನ್ನು ನೋಡಲು ಇಡೀ ಗ್ರಾಮವೇ ನೆರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next