Advertisement

ಜಲಮೂಲಗಳ ಸಂರಕ್ಷಿಸಿಕೊಳ್ಳುವ ಅಗತ್ಯವಿದೆ

05:51 PM Feb 06, 2020 | Naveen |

ದೊಡ್ಡಬಳ್ಳಾಪುರ : ವಾತಾವರಣದಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕಿದ್ದು, ಮಾನವರಂತೆ ಇತರೆ ಜೀವ ಸಂಕುಲಗಳಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆ. ಈ ದಿಸೆಯಲ್ಲಿ ಜೀವ ವೈವಿಧ್ಯದ ಸಂರಕ್ಷಣೆಯಲ್ಲಿ ಇಂದಿನ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್‌ ಅಭಿಪ್ರಾಯಪಟ್ಟರು.

Advertisement

ಡಬ್ಲ್ಯೂಡಬ್ಲ್ಯೂ ಎಫ್‌ – ಇಂಡಿಯಾ (ವರ್ಲ್ಡ್ ವೈಡ್‌ ಫಂಡ್‌ ಫಾರ್‌ ನೇಚರ್‌) ಸಂಸ್ಥೆಯ ವತಿಯಿಂದ ತಾಲೂಕಿನ ಶಿವಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತೇವಾಂಶ ಭೂಮಿ ದಿನಾಚರಣೆ (ವರ್ಲ್ಡ್ ವೆಟ್‌ ಲ್ಯಾಂಡ್‌ ಡೇ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವ ಸಂಕುಲಕ್ಕೆ ನೀರಿನ ಅಗತ್ಯವಿದೆ. ಅಂತೆಯೇ ನೀರನ್ನು ಮಿತವಾಗಿ ಬಳಸುವ ಜವಾಬ್ದಾರಿಯಿದೆ. ಕಾಡುಗಳ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಅರಣ್ಯ ಹೆಚ್ಚಾಗಿರಬೇಕು. ಮನೆಗಳ ಮೇಲೆ ತಟ್ಟೆಯಾಕಾರದ ಪಾತ್ರೆಯಲ್ಲಿ ನೀರಿಡುವ ಮೂಲಕ ಪಕ್ಷಿಗಳ ನೀರಿನ ದಾಹವನ್ನು ನೀಗಿಸಲು ಸಲಹೆ ನೀಡಿದರು.

ಡಬ್ಲ್ಯೂಡಬ್ಲ್ಯೂ ಎಫ್‌ ನ ವೈ.ಟಿ.ಲೋಹಿತ್‌ ಮಾತನಾಡಿ, ಜಲಮೂಲಗಳ ಸುಸ್ಥಿರ ಬಳಕೆಗಾಗಿ 2 ಫೆಬ್ರವರಿ 1971 ರಲ್ಲಿ ಇರಾನ್‌ ದೇಶದ ರಾಮ್ಸರ್‌ ನಗರದಲ್ಲಿ ಅಂತಾರಾಷ್ಟ್ರೀಯ ಸಮಾವೇಶವೊಂದು ನಡೆಯಿತು, ಆ ದಿನದ ನೆನೆಪಿಗಾಗಿ ವಿಶ್ವ ತೇವಾಂಶ ಭೂಮಿ ದಿನಾಚರಣೆ ಆಚರಿಸಲಾಗುವುದು. ಈ ವರ್ಷದ ಧ್ಯೇಯ ವಾಕ್ಯ ಕೆರೆಗಳು ಮತ್ತು ಜೀವವೈವಿಧ್ಯತೆ’. ನಮ್ಮ ದೇಶದಲ್ಲಿ ರಾಮ್ಸರ್‌ ಮಾನ್ಯತೆ ಪಡೆದಿರುವ 37 ವಿವಿಧ ವರ್ಗದ ಜಲಮೂಲಗಳಿವೆ. ಜಲಮೂಲಗಳು ಜೀವವ್ಯವಿಧ್ಯತೆಯ ತಾಣವಾಗಿದ್ದು ಭೂಮಿಯ ಮೇಲಿನ ಶೇ.40ರಷ್ಟು ಸಸ್ಯ ಹಾಗೂ ಪ್ರಾಣಿ ವರ್ಗ ನೀರಿನಲ್ಲಿ ಹಾಗು ನೀರಿನ ಮೂಲಗಳ ಸುತ್ತ ಮುತ್ತ ಕೇಂದ್ರೀಕೃತವಾಗಿದೆ. ಇಂದು ಕಾಡುಗಳಿಗಿಂತ ಮೂರು ಪಟ್ಟು ವೇಗವಾಗಿ ಜಲಮೂಲಗಳು ನಾಶವಾಗುತ್ತಿವೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಚಿನ್ಮಯ್‌.ಸಿ ಮಳಿಯೆ ಮಕ್ಕಳಿಗೆ ಜೇಡ, ಕೀಟಗಳು ಹಾಗು ಜಲಮುಲಗಳ ಬಳಿ ಇರುವ ಜೀವವೈವಿಧ್ಯತೆಯ ಮಹತ್ವವನ್ನು ತಿಳಿಸಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ನವೋದಯ ಚಾರಿಟಬಲ್‌ ಟ್ರಸ್ಟ್‌ನ ಆರ್‌.ಜನಾರ್ಧನ, ಸುನಿಲ್‌ ಗೌಡ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next