Advertisement
ಅಸಮಾಧಾನ: ನೇಕಾರರಿಗೆ ಶೇ.8ರಷ್ಟುಬಡ್ಡಿ ದರದ ಸಹಾಯಧನ ಸ್ವಾಗತಾರ್ಹವಾಗಿದೆ. ವೃಷಾಭವತಿಕಣಿವೆಯಿಂದ ಸಂಸ್ಕರಿಸಿದ ನೀರನ್ನು ಹರಿಸಲು ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಕಳೆದ ಬಜೆಟ್‌ನಿಂದತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನುಸೇರಿಸಿದ್ದು, 865 ಕೋಟಿ ರೂ ಮೀಸಲಾಗಿರಿಸಿದೆ. ಕೃಷಿಯ ಕೆಲವು ಯೋಜನೆಗಳ ಲಾಭ ಬಿಟ್ಟರೆ, ತಾಲೂಕಿಗೆ ಅನುಕೂಲವಾಗುವ ಯಾವುದೇ ಅಂಶಗಳಿಲ್ಲದೇ ಬಜೆಟ್‌ಗೆ ತಾಲೂಕಿನ ಬಹುಪಾಲು ಜನರ ಅಸಮಾಧಾನ ವ್ಯಕ್ತವಾಗಿದೆ.
Related Articles
Advertisement
ನೇಕಾರರಿಗೆ ಹೆಚ್ಚಿನ ಪ್ರಯೋಜನವಿಲ್ಲ. ನೇಕಾರರಿಗೆ ಶೇ.8ರಷ್ಟು ಬಡ್ಡಿ ದರದ ಸಹಾಯಧನ, ವಿದ್ಯಾರ್ಥಿವೇತನ ಯೋಜನೆ ಬಿಟ್ಟರೆ ಹೆಚ್ಚಿನ ಅನುಕೂಲಗಳಾಗಿಲ್ಲ. ರೈತರಿಗೆ ಯಶಸ್ವಿನಿ ಯೋಜನೆ ಜಾರಿಯಾದಂತೆ ನೇಕಾರರಿಗೂ ಆಗಬೇಕಿದೆ. ನೇಕಾರ ಸನ್ಮಾನ ಯೋಜನೆಯಲ್ಲಿ ನೇಕಾರರಿಗೆ 5 ಸಾವಿರ ರೂ.ಗಳ ವಾರ್ಷಿಕಆರ್ಥಿಕ ಸಹಾಯವನ್ನು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರಿಗೂ ವಿಸ್ತರಿಸಬೇಕಿದೆ. ರೇಷ್ಮೆ ಬೆಳೆಗಾರರಿಗೆಹೆಚ್ಚಿನ ಸಹಾಯಧನ ನೀಡಿ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸುವ ಸರ್ಕಾರ ರೇಷ್ಮೆ ಬಳಸುವ ನೇಕಾರರಿಗೆಯಾವುದೇ ಸವಲತ್ತು ನೀಡಿಲ್ಲ. ಇದರಿಂದ ರೇಷ್ಮೆ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ನೇಕಾರರಿಂದ ಸೀರೆಗಳ ಖರೀದಿಗೆ ಅನುದಾನ ನೀಡಬೇಕಿತ್ತು. ನೇಕಾರಿಕೆಯೇ ಪ್ರಧಾನವಾಗಿರುವ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿರುವ ಹೆದ್ದಾರಿ ಬದಿಯಲ್ಲಿ ನಗರದ ನೇಕಾರರು ನೇಯ್ದಿರುವ ಸೀರೆಗಳ ಮಾರಾಟಕ್ಕೆ ನೇಕಾರರ ಭವನ ನಿರ್ಮಾಣ, ನೇಕಾರರಿಗೆ ಬಂಡವಾಳ ದೊರಕಿಸಿಕೊಡಲು ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ. ಕೈಮಗ್ಗ, ವಿದ್ಯುತ್ ಮಗ್ಗಗಳ ಇಲಾಖೆಗಳಿಗೆ ಹೆಚ್ಚಿನ ಅನುದಾನ, ರೇಷ್ಮೆ ಬೆಳೆಗೆ ಉತ್ತೇಜನ ನೀಡಿ ನೇಕಾರರಿಗೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸಿಗುವಂತೆ ಮಾಡುವುದು. ಕಚ್ಚಾ ಸಾಮಗ್ರಿಗಳಿಗೆ ಸಹಾಯಧನ, ಜವಳಿ ಹಾಗೂ ಸಿದ್ಧ ಉಡುಪು ವಲಯದ ಅಭಿವೃದ್ಧಿಗಾಗಿ ಹೊಸ ಜವಳಿ ನೀತಿಗಾಗಿ ಬಜೆಟ್‌ನಲ್ಲಿ ಮೀಸಲಿಡುವ ನಿರೀಕ್ಷೆಯಿತ್ತು.
ರಾಜ್ಯ ಬಜೆಟ್ ಸಂಪೂರ್ಣ ನೀರಸವಾಗಿದೆ. ಎತ್ತಿನಹೊಳೆ ಯೋಜನೆ ಹಿಂದಿನ ಪ್ರಗತಿ ಬಿಟ್ಟರೆ ಬೇರೇನೂ ಕಾರ್ಯಗತವಾಗಿಲ್ಲ.ಯೋಜನೆಯ ಭೂಸ್ವಾಧೀನದ ಬಗ್ಗೆ ಪ್ರಸ್ತಾಪವಿಲ್ಲ. ರಾಗಿ ಖರೀದಿಗೆನಿಯಮಗಳನ್ನು ಹೇರಿ ರೈತರು ಕಂಗಾಲಾಗುವಂತೆ ಮಾಡಿರುವ ಈಬಜೆಟ್ ರೈತರಿಗೆ ಏನು ಅನುಕೂಲ ಮಾಡಿದೆ ಎನ್ನುವ ಪ್ರಶ್ನೆ ಎದುರಾಗಿದೆ. ರೈತರು, ನೇಕಾರರು, ಜನಸಾಮಾನ್ಯರನ್ನು ಕಡೆಗಣಿಸಿದೆ. -ಟಿ.ವೆಂಕಟರಮಣಯ್ಯ, ಶಾಸಕರು
ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತಂದಿರುವುದು ಸ್ವಾಗತಾರ್ಹ.ಕೃಷಿ ಅಭಿವೃದ್ಧಿಗೆ ಪೂರಕವಾಗುವ ಯಾವುದೇ ಗಮನಾರ್ಹಯೋಜನೆಗಳಿಲ್ಲ. ರೈತರಿಗೆ ಸಾವಿರಾರು ಕೋಟಿ ರೂ. ಸಾಲ ನೀಡುವುದು.ಅದು ಸಮಪರ್ಕಕವಾಗಿ ತಲುಪದೇ ಇರುವುದು ಎಂದಿನಂತೆಯೇ ಕಾಗದದಲ್ಲಿ ಮಾತ್ರವೇ ಹೊರತು ಇದರಲ್ಲಿ ಹೆಚ್ಚಿನದೇನೂ ಇಲ್ಲ. -ಕೆ.ಸಿ.ಲಕ್ಷ್ಮೀನಾರಾಯಣ, ನಿರ್ದೇಶಕರು, ಟಿಎಪಿಎಂಸಿಎಸ್
ಪ್ರಾಕೃತಿಕ ಸಂಪತ್ತನ್ನು ಉಳಿಸುವುದಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕಿತ್ತು. ವೃಷಭಾವತಿ ನದಿಯಂತೆ ನೀರುಮಲಿನವಾಗುವುದು ಹಾಗೂ ಕೆರೆಗಳಿಗೆ ಕಲುಷಿತ ನೀರು ಹರಿಯುವುದುನಿಲ್ಲಬೇಕು. ನಗರ ಪ್ರದೇಶಗಳಿಗೆ ಹೊಂದಿಕೊಂಡ ಕರೆಗಳಿಗೆ ಶುದ್ಧೀಕರಿಸಿದ ನೀರು ಹರಿಯುವಂತೆ ಮಾಡಲು ಯೋಜನೆ ರೂಪಿಸಿಬೇಕಿದೆ. – ವಸಂತ್ ಕುಮಾರ್‌ರೈತ ಮುಖಂಡ
ಬಜೆಟ್‌ನಲ್ಲಿ ಸ್ತ್ರೀಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ.ವಿಶೇಷವಾಗಿ ಗ್ರಾಮೀಣ ಮಹಿಳೆಯರು ತಾವು ತಯಾರಿಸಿರುವಉತ್ಪನ್ನಗಳನ್ನು ಮಾರಾಟ ಮಾಡಲು ಮಾರಾಟ ಮೇಳಆಯೋಜಿಸಿರುವುದು, ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಬ್ರ್ಯಾಂಡಿಂಗ್, ಮೌಲ್ಯವರ್ಧನೆ ಮೊದಲಾಗಿ ಮಾರುಕಟ್ಟೆ ಒದಗಿಸಲು ರೂಪಿಸಿರುವ ಆಸ್ಮಿತೆ ಯೋಜನೆ ಸ್ವಾಗತಾರ್ಹ. – ಲೀಲಾ ಮಹೇಶ್, ಮಹಿಳಾ ಮುಖಂಡರು