ದೊಡ್ಡಬಳ್ಳಾಪುರ: ಭೂ ವ್ಯವಹಾರದಲ್ಲಿ ಪಡೆದಿದ್ದ ಕಮಿಷನ್ ಹಣದ 5 ಲಕ್ಷ ರೂ. ಚೆಕ್ ಅನ್ನು 65 ಲಕ್ಷ ರೂ. ಎಂದು ತಿದ್ದಿ, ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದಾಗ ಚೆಕ್‌ನ ಅಸಲಿ ಸತ್ಯ ಬಯಲಾಗಿದ್ದು, ವಂಚನೆ ಪ್ರಕರಣದಲ್ಲಿ ಆರೋಪಿ ಎಂ.ಸಿ.ಚಂದ್ರಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿರುವ ಪ್ರಕರಣ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ದರ್ಗಾಪುರಕ್ಕೆ ಸೇರಿದ ಎರಡು ಎಕರೆಯನ್ನು ಜಮೀನು ಮಾಲೀಕರಿಂದ ಆಂಜಿನಪ್ಪ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ವ್ಯವಹಾ ರವನ್ನು ಎಂ.ಸಿ.ಚಂದ್ರಶೇಖರ್ ಎಂಬಾತನ ಮುಂದಾಳತ್ವದಲ್ಲಿ ನಡೆದಿತ್ತು. ಈ ಕೆಲಸಕ್ಕೆ ಮಧ್ಯವರ್ತಿ ಕಮಿಷನ್ ಆಗಿ ಚಂದ್ರಶೇಖರ್ ಅವರಿಗೆ 10 ಲಕ್ಷ ರೂ. ನೀಡಲು ಮಾತುಕತೆ ನಡೆಸಿದ್ದರು. ಇದರ ಬಾಬ್ತು ಆಂಜಿನಪ್ಪ ಅವರು ಚಂದ್ರಶೇಖರ್ ಅವರಿಗೆ ತಲಾ 5 ಲಕ್ಷದ 2 ಚೆಕ್‌ಗಳನ್ನು ನೀಡಿದ್ದರು.
ಚೆಕ್ ತಿದ್ದುಪಡಿ: ಮೊದಲ ಚೆಕ್‌ನ ಹಣ ಚಂದ್ರಶೇಖರ್ ಪಡೆದುಕೊಂಡು, ಖಾತೆಯಿಂದ ಡ್ರಾ ಆಗಿತ್ತು. ನಂತರ ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವ ಮುನ್ನಾ ಅತಿಯಾಸೆಗೆ ಬಿದ್ದು 5 ಎಂಬ ಅಕ್ಷರ ಮತ್ತು ಅಂಕಿಯ ಮುಂದೆ ಯಾವುದೇ ಅನುಮಾನ ಬಾರದಂತೆ ಅಂಕಿಯಲ್ಲಿ 6 ಎಂದು ಮತ್ತು ಆಂಗ್ಲ ಅಕ್ಷರದಲ್ಲಿ ಅರವತ್ತು ಎಂದು ಬರೆದು ಬ್ಯಾಂಕ್‌ನಲ್ಲಿ ಹಣ ಪಡೆದುಕೊಳ್ಳಲು ಬ್ಯಾಂಕ್‌ಗೆ ಚೆಕ್ ಹಾಕಿದ್ದಾರೆ. ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ನೀಡಿದ್ದ ಗ್ರಾಹಕರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಠಾಣೆಯಲ್ಲಿ ದೂರು ದಾಖಲು: ಬಳಿಕ ಚೆಕ್ ಮಾಲೀಕ ಆಂಜಿ ನಪ್ಪ ಅವರು 5 ಲಕ್ಷದ ಚೆಕ್ ಮಾತ್ರ, 65 ಲಕ್ಷ ರೂ.ಗಳ ಚೆಕ್ ಕೊಟ್ಟಿಲ್ಲ ಎಂದು ಹೇಳಿದಾಗ ಮಧ್ಯವರ್ತಿ ಚಂದ್ರಶೇಖರ್ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತ ಆಂಜಿನಪ್ಪ ಮತ್ತು ಮಗ ಲೋಕೇಶ್ ಚೆಕ್ ತಿದ್ದಿ ನಂಬಿಕೆ ದ್ರೋಹ ಎಸಗಿದ ಚಂದ್ರಶೇಖರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೆಕ್ ವಶಪಡಿಸಿಕೊಂಡ ಪೊಲೀಸರು ವಿಧಿವಿ ಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪರೀಕ್ಷೆಯಲ್ಲಿ ಚೆಕ್ ತಿದ್ದಿರುವುದು ಪತ್ತೆಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Har Har Shambhu…: ಗಾಯಕಿ ಫರ್ಮಾನಿ ನಾಜ್ ಸೋದರಸಂಬಂಧಿಯ ಬರ್ಬರ ಹತ್ಯೆ