Advertisement

Doddaballapur: ಮಹಿಳೆ ಸಾವಿನ ಮನೆಯ ಕದ ಮುರಿದ ಪೊಲೀಸರು!

04:00 PM Feb 08, 2024 | Team Udayavani |

ದೊಡ್ಡಬಳ್ಳಾಪುರ: ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದನ್ನು ತಡೆದು ಆಕೆಯ ಪ್ರಾಣ ರಕ್ಷಣೆ ಮಾಡಿದ ಇಆರ್‌ಎಸ್‌ಎಸ್‌ (ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ)-112 ಸಿಬ್ಬಂದಿಯಾದ ಅಭಿಷೇಕ್‌ (ಪಿಸಿ) ಹಾಗೂ ಶಿವರಾಜ್‌ ( ಎಪಿಸಿ) ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದ್ದಾರೆ.

Advertisement

ಘಟನೆ ವಿವರ: ಜ.23ರಂದು ಮೆಳೇಕೋಟೆ ಕ್ರಾಸ್‌ ಗ್ರಾಮದ ಮಹಿಳೆಯೊಬ್ಬರ ಮನೆಯಲ್ಲಿ ಅತ್ತೆ, ನಾದಿನಿಯೊಂದಿಗೆ ಜಗಳ ನಡೆದಿದೆ. ಈ ವೇಳೆ ತೀವ್ರವಾಗಿ ಮನನೊಂದ ಮಹಿಳೆ ಮನೆಯಿಂದ ಹೊರಬಂದು, ಸಹಾಯಕ್ಕಾಗಿ 112 ಪೊಲೀಸರಿಗೆ ಅತ್ತೆ, ನಾದಿನಿ ಕಿರುಕುಳದ ಬಗ್ಗೆ ಕರೆ ಮಾಡಿ ತಿಳಿಸಿದ್ದಾಳೆ. ತಕ್ಷಣವೇ 112 ಸಿಬ್ಬಂದಿ ಮೆಳೇಕೋಟೆ ಕ್ರಾಸ್‌ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಆಕೆ ಕೊನೇ ಬಾರಿ ಕರೆ ಮಾಡಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವೇಳೆಗೆ ಊರ ಆಚೆಗಿನ ಪಾಳುಬಿದ್ದ ಮನೆಯೊಂದರಲ್ಲಿ ಇಬ್ಬರು ಮಕ್ಕಳ ಮುಂದೆಯೇ ನೇಣುಬಿಗಿದುಕೊಳ್ಳಲು ಯತ್ನಿಸಿದ್ದಾಳೆ. ಮಕ್ಕಳ ಚೀರಾಟದಿಂದ ಮನೆಯ ಕಿಟಕಿ ಯನ್ನು ಇಣುಕಿ ನೋಡಿದ್ದಾರೆ. ಮಹಿಳೆ ಸಾವು- ಬದುಕಿನ ಮಧ್ಯೆ ಇರುವುದನ್ನು ಕಂಡು ಕೂಡಲೇ ಜಾಗೃತರಾದ ಸಿಬ್ಬಂದಿ, ಮನೆ ಬಾಗಿಲು ಒಡೆದು ಆಕೆಯನ್ನು ರಕ್ಷಿಸಿ, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.

ಪ್ರಶಂಸನಾ ಪತ್ರ ವಿತರಣೆ: ಈ ಮೂಲಕ ಇಬ್ಬರು ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿರುವ ಹಿನ್ನೆಲೆ ಯಲ್ಲಿ ಪೊಲೀಸ್‌ ಇಲಾಖೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ನಾಗರಾಜು ಅವರು ಇಆರ್‌ಎಸ್‌ಎಸ್‌ ಸಿಬ್ಬಂದಿ ಗಳಾದ ಅಭಿಷೇಕ್‌ ಮತ್ತು ಶಿವರಾಜ್‌ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next