Advertisement

ದೊಡ್ಡಾಟ ಅಪ್ಪಟ ಶ್ರೇಷ್ಠ ದೇಶೀಯ ಕಲೆ

10:01 AM Jun 03, 2019 | Suhan S |

ರಾಮನಗರ: ದೊಡ್ಡಾಟವನ್ನು ಶ್ರೇಷ್ಠ ಕಲೆ, ಅಪ್ಪಟ ದೇಶೀ ಕಲೆ. ರಂಗಭೂಮಿಯಲ್ಲಿ ಜೀವಂತವಾಗಿರುವ ಕಲೆ. ವಿದ್ಯಾವಂತರೂ ಈ ಕಲೆಯನ್ನು ಕಲಿತು ಕಲೆಯನ್ನು ಮುಂದಿನ ಪೀಳಿಗೆಗಳಿಗೆ ಕೊಡುಗೆ ನೀಡ ಬೇಕೆಂದು ದೊಡ್ಡಾಟ ಕಲಾವಿದ ಮತ್ತು ಕತೆಗಾರ ಬಸವರಾಜ ಶಿಗ್ಗಾಂವ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಿಂಗಳ ಬೆಳೆಕು ಕಾರ್ಯಕ್ರಮದ ಅತಿಥಿಯಗಿ ಭಾಗವಹಿಸಿದ್ದ ದೊಡ್ಡಾಟ ಕತೆಗಾರ ಬಸವರಾಜ ಶಿಗ್ಗಾಂವ ದೊಡ್ಡಾಟ ಕಲೆ ಹಾಗೂ ತಮ್ಮ ಜೀವನದ ಪುಟಗಳನ್ನು ತೆರೆದಿಟ್ಟರು.

ತಾವು ನೂರಾರು ದೊಡ್ಡಾಟ ಪ್ರದರ್ಶನ ಕೊಟ್ಟಿದ್ದು, ಕಲೆಯ ಉಳಿವಿಗಾಗಿ ಶಿಷ್ಯ ಬಳಗವನ್ನು ಸೃಷ್ಟಿಸಿದ್ದೇನೆ. ವಿದ್ಯಾವಂತರು ಈ ಕಲೆಯನ್ನು ಕಲಿತು ಪ್ರದರ್ಶನ ನೀಡಬಹುದು. ರಾಜ್ಯದ 24 ಜಿಲ್ಲೆಗಳಲ್ಲಿ ಬಯಲಾಟ, ದೊಡ್ಡಾಟವನ್ನು ಪ್ರದರ್ಶಿಲಾಗುತ್ತದೆ. ಉತ್ತರ ಕರ್ನಾಟಕ ಭಾಗದ ದೊಡ್ಡಾಟಕ್ಕೆ ತನ್ನದೆಯಾದ ಸ್ವರೂಪವಿವೆ. ಇಂತಹ ವಿಶೇಷ ಕಲೆಯನ್ನು ಉಳಿಸುವಲ್ಲಿ ಕಲಾವಿದರ ಪಾತ್ರ ಗಣನೀಯವಾಗಿದೆ ಎಂದರು.

ಅನಕ್ಷರಸ್ಥರ ಪ್ರಯೋಗ ಯಶಸ್ವಿ: ನಾಟ್ಯಶಾಸ್ತ್ರ ಅಧ್ಯಯನ ಮಾಡುವ ಅನೇಕರು ಕಲಾಪ್ರಕರಗಳನ್ನು ಹೊರತರುವಲ್ಲಿ ಯಶಸ್ವಿಯಾಗುವುದಿಲ್ಲ. ಆದರೆ ಅನಕ್ಷರಸ್ಥ ಜನರು ತಮ್ಮ ಜೀವನದ ಅನುಭವಗಳನ್ನು ದೊಡ್ಡಾಟ, ಬಯಲಾಟದಲ್ಲಿ ತೊಡಗಿಸಿಕೊಂಡು ಅನೇಕ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡುತ್ತಾರೆ ಎಂದು ದೊಡ್ಡಾಟ ಕಲಾವಿದರ ಹಿರಿಮೆಯ ಬಗ್ಗೆ ತಿಳಿಸಿಕೊಟ್ಟರು. ಆದರೆ ಇಂದು ಕಲಾವಿದರ ಸೋಗು ಹಾಕಿಕೊಂಡ ಅನೇಕರು ಸರ್ಕಾರದ ಮುಂದೆ ಭಿಕ್ಷುಕರಂತೆ ಅನುದಾನವನ್ನು ಬೇಡುತ್ತಿದ್ದಾರೆ ಎಂದು ವಿಷಾದಿಸಿದರು. ಕಲೆಯನ್ನು ರೂಢಿಸಿಕೊಳ್ಳುವುದರಿಂದ ಸಹನೆಯ ಗುಣ ಬೆಳೆಯುತ್ತದೆ. ಇಲ್ಲಿ ಆಯ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮದಾದರೆ ಕಲೆ ಉಳಿಯುತ್ತದೆ. ದೊಡ್ಡಾಟ ಕಲೆ ಉಳಿವಿಗೆ ನಿರಂತರವಾಗಿ ಕಲಾಸಕ್ತರು ಪ್ರಾಮಾಣಿಕವಾದ ಪ್ರಯತ್ನ ಪಡಬೇಕು ಎಂದು ತಿಳಿಸಿದರು.

ಕಲೆ ಉಳಿವಿಗೆ ಪ್ರಯತ್ನಿಸುವವರ ಸಂಖ್ಯೆ ಕ್ಷೀಣ: ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಕಲೆ ಸಹಾಯಕ ಎನ್ನುತ್ತಾರೆ. ಆದರೆ ಕಲೆ ಉಳುವಿಗಾಗಿ ಪ್ರಯತ್ನಿಸುವವರು ಸಂಖ್ಯೆ ಕ್ಷೀಣಿಸುತ್ತಿದೆ. ಕಲೆ ಪ್ರೋತ್ಸಾಹಿಸಿದಾಗ ಪಾರಂಪರಿಕ ಕಲೆ ಉಳಿದು, ಬೆಳೆಯಲು ಸಾಧ್ಯವಾಗುತ್ತದೆ. ಪ್ರಾಮಾಣಿಕ ಕಲಾವಿದನಿಗೆ ಕಲೆಯೇ ಉಸಿರಾಗಿರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಬದುಕನ್ನು ಕಲೆಗಾಗಿ ಸವೆಸುತ್ತಿದ್ದೇನೆ ಎಂದು ತಿಳಿಸಿದರು.

Advertisement

ಹೋಮಿಯೋಪತಿ ವೈದ್ಯ ಡಾ. ಸತೀಶ್‌ ಮಾತನಾಡಿದರು. ದೊಡ್ಡಾಟ ಕಲಾವಿದರಾದ ವೀರೇಶ್‌ ಬಡಿಗೇರ್‌, ಮಲ್ಲೇಶಪ್ಪ ತಡಸದ, ಹೇಮಂತ್‌ ಕುಮಾರ್‌ ಭಜಂತ್ರಿ, ಕನಕಪ್ಪ, ಬಗರಿಕರ್‌, ಮಲ್ಲೇಶ್‌, ನೀಲಗುರಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆ. ಕಾಳಯ್ಯ, ಉಪನ್ಯಾಸಕ ಕೆ.ಎಸ್‌. ಧನಂಜಯ, ಶಿಕ್ಷಕರಾದ ನೆ.ರ. ಪ್ರಭಾಕರ್‌, ಎಂ.ಎಚ್. ಚನ್ನವೀರಪ್ಪ, ನೃತ್ಯ ಕಲಾವಿದೆ ಚಿತ್ರಾರಾವ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next