Advertisement

ಹಣ ವಿನಿಮಯದ ನೆಪದಲ್ಲಿ ದೋಚುತ್ತಿದ್ದ ಕಳ್ಳರ ಬಂಧನ

12:03 PM Feb 16, 2017 | Team Udayavani |

ಬೆಂಗಳೂರು: ನೋಟು ಅಮಾನ್ಯ ನಂತರ ರದ್ದಾಗಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳಿಗೆ ಹೊಸ ನೋಟು ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ನಕಲಿ ಸಿಸಿಬಿ ಪೊಲೀಸರನ್ನು ಬಂಧಿಸಲಾಗಿದೆ.

Advertisement

ಮಾಗಡಿ ತಾಲೂಕಿನ ಕಲ್ಯ ಗ್ರಾಮದ ರಮೇಶ್‌, ನಾಗಮಂಗಲ ತಾಲೂಕು ಮಣಿಯೂರು ಗ್ರಾಮದ ರೂಪೇಶ್‌ ಅಲಿಯಾಸ್‌ ಕುಮಾರ್‌, ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ಪುಟ್ಟರಾಜು, ಮಂಡ್ಯದ ಗೌಡಗೆರೆ ಗ್ರಾಮದ ಮುತ್ತುರಾಯಶೆಟ್ಟಿ ಬಂಧಿತ ಆರೋಪಿಗಳು. 

ಇವರು ಸಿಸಿಬಿ ಪೊಲೀಸರ ಸೋಗಿನಲ್ಲಿ 500 ಮತ್ತು 1000 ಮುಖಬೆಲೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಿಸಿ ಕೊಡುವುದಾಗಿ ಹಣವಂತರನ್ನು ನಂಬಿಸಿ, ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಳ್ಳುತ್ತಿದ್ದರು. ಹಳೆಯ ನೋಟುಗಳನ್ನು ತೆಗೆದುಕೊಂಡು ಬಂದವರಿಂದ ಆ ಹಣ ಕಸಿದು ಬೆದರಿಸಿ ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತ ಆರೋಪಿಗಳಿಂದ 500 ಮತ್ತು 1000 ರೂ.ಮುಖ ಬೆಲೆಯ 17.49 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳು ಹಾಗೂ 2000 ರೂ.ಮುಖಬೆಲೆಯ 9 ಲಕ್ಷ ರೂ. ಮೌಲ್ಯದ ಹೊಸ ನೋಟುಗಳು ಸೇರಿದಂತೆ ಒಟ್ಟು 26.49 ಲಕ್ಷ ರೂ.ನಗದು. ಕೃತ್ಯಕ್ಕೆ ಬಳಸಿದ ಇನೋವಾ ಕಾರು ಹಾಗೂ ಒಂದು ಆಕ್ಟೀವ್‌ ಹೋಂಡಾವನ್ನು ವಶಕ್ಕೆ ಪಡೆಯಲಾಗಿದೆ. ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next