Advertisement
ಪಿಯುಸಿ ಮುಗಿದ ಮೇಲೆ ಮುಂದೆ ಏನು ಮಾಡುವುದು ಎನ್ನುವ ಯೋಚನೆಯಲ್ಲಿದ್ದಾಗ, ಮೊದಲೇ ಭವಿಷ್ಯದ ಬಗ್ಗೆ ಅರೆಬೆಂದ ನಿರ್ಧಾರವನ್ನು ಮಾಡಿಬಿಟ್ಟಿದ್ದೆ. ಅದರಂತೆ ಕೊನೆಗೂ “ಜರ್ನಲಿಸಂ’ ಸಬೆjಕ್ಟ್ ಆಯ್ಕೆ ಮಾಡಿಕೊಂಡೆ. ಆವತ್ತಿನಿಂದ ಲೈಫ್ಸ್ಟೈಲ್ ಸ್ವಲ್ಪ ಬದಲಾಗಿ ಬರೀ ಓದು-ಬರಹಕ್ಕೆ ಸೀಮಿತಗೊಂಡಿತ್ತು.
Related Articles
Advertisement
ಡಿಗ್ರಿ ಲೆವೆಲ್‌ನಲ್ಲಿ ಪ್ರತಿಭೆಯನ್ನು ಗುರುತಿಸುವ ಅದೆಷ್ಟೋ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಾತೊರೆಯುತ್ತಾರೆ. ಪತ್ರಿಕೋದ್ಯಮದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ತಮ್ಮ ಕ್ರಿಯೇಟಿವ್ ಐಡಿಯಾಸ್‌ಗೆ ಬಣ್ಣ ಬಳಿಯುವ ಸಣ್ಣಪುಟ್ಟ ಸಾಮಾಜಿಕ ಸಂದೇಶಗಳನ್ನು ರವಾನಿಸುವ ಕಿರುಚಿತ್ರಗಳು ಸಾಕ್ಷ್ಯಚಿತ್ರಗಳನ್ನು ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುತ್ತಾರೆ.
ಇತ್ತೀಚೆಗೆ ಕಾಲೇಜಿನಲ್ಲಿ ಕ್ಯಾಮರಾವನ್ನು ವಿದ್ಯಾರ್ಥಿಗಳು ತಾವೇ ಬಳಸಿಕೊಂಡು ತಮಗೆ ಇಚ್ಛಿಸುವ ವಿಷಯದ ಬಗ್ಗೆ ಕಿರುಚಿತ್ರ ಮಾಡಿ ಅದರ ಎಡಿಟಿಂಗ್ ಹಂತವನ್ನು ತಮ್ಮಲ್ಲೇ ಒಬ್ಬ ಮಾಡಿ, ಕಾಲೇಜಿನ ಸ್ಪರ್ಧೆಯಲ್ಲಿ ಜನ ಮೆಚ್ಚುಗೆ ಗಳಿಸುವ ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮೊದಲ ಸಲ ನಾವೇ ಒಂದು ಹೊಸ ಪ್ರಯೋಗದ ಕಿರುಚಿತ್ರ ಮಾಡಿದಾಗ ಹಗಲು-ರಾತ್ರಿ ಎನ್ನದೆ ನಿದ್ದೆ ಬಿಟ್ಟು ಪರಿಶ್ರಮಪಟ್ಟು ಕೊನೆಗೆ ಅದನ್ನು ಯೂಟ್ಯೂಬ್‌ನಲ್ಲಿ ತೇಲಿ ಬಿಟ್ಟಾಗ ಸಿಕ್ಕ ಉತ್ತಮ ಪ್ರತಿಕ್ರಿಯೆಯ ಸಂತೋಷ ಹೇಳ ತೀರದು.
ಹೀಗೆ ಎಲ್ಲರ ಒಳಗೂ ಒಂದು ಪ್ರತಿಭೆ ಇರುತ್ತದೆ. ನಾವು ಹೊರತರಲು ಹಿಂಜರಿಯುತ್ತೇವೆ ಅಷ್ಟೇ. ನನ್ನ ಪ್ರತಿಭೆಗೆ ಜೀವ ಕೊಟ್ಟದ್ದು ಪತ್ರಿಕೋದ್ಯಮ. ಸಾಧನೆಯ ಶಿಖರವನ್ನು ಏರುವ ಕ್ರಿಯೇಟಿವ್ ಐಡಿಯಾಗಳಿರಬಹುದು. ಅವಕಾಶಗಳಿಗೆ ಕಾಯಬಾರದು. ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು.
ಸುಹಾನ್ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ ಕಾಲೇಜು ಉಡುಪಿ.