Advertisement

ಉದಯವಾಣಿ ಫಲಶ್ರುತಿ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ವೈದ್ಯರು!

05:04 PM May 02, 2020 | mahesh |

ನೆಲಮಂಗಲ: ತಾಲೂಕಿನ ಸೋಲದೇವನಹಳ್ಳಿ ಡಾ. ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇ.01ರ ಕಾರ್ಮಿಕ ದಿನಾಚರಣೆಯಂದು ವೈದ್ಯರು ನೇಮಕಗೊಂಡು ಚಿಕಿತ್ಸೆ ನೀಡಿ, ಗ್ರಾಮೀಣ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ, ತಾಲೂಕು ಆರೋಗ್ಯ ಇಲಾಖೆ ಮಾನವೀಯತೆ ಮೆರೆದಿದೆ. ಸೋಲದೇವನಹಳ್ಳಿ ಮತ್ತು ಪಂಚಾಯತಿ ವ್ಯಾಪ್ತಿಯ ಹಾಗೂ ಸುತ್ತಮುತ್ತ ಗ್ರಾಮಗಳ ಜನರು ಸಣ್ಣಪುಟ್ಟ ಅನಾರೋಗ್ಯಕ್ಕೂ ಹತ್ತಾರು ಕಿ.ಮೀ.ದೂರದ ಪಟ್ಟಣ ಪ್ರದೇಶದ ಆಸ್ಪತ್ರೆಗಳಿಗೆ ಹೋಗಿ ಬರುವುದು ಕಷ್ಟಕವಾಗಿದ್ದನ್ನು ಅರಿತು ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಿಸಿ, ಹಿರಿಯ ನಟಿ ಡಾ.ಲೀಲಾವತಿ ಗ್ರಾಮೀಣರ ಮೇಲೆ ಮಮತೆ ತೋರಿದ್ದರು. ಅದರಿಂದಾಗಿ ಸೋಲದೇವನಹಳ್ಳಿಯಲ್ಲಿ ಪ್ರಾರಂಭವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ಇಲಾಖೆಯಿಂದ ನಿಯೋಜಿಸಲಾಗಿತ್ತು.

Advertisement

ಕೋವಿಡ್‌ 19 ಹಿನ್ನಲೆಯಲ್ಲಿ ಆರಂಭವಾದ ಲಾಕ್‌ಡೌನ್‌ನಿಂದಾಗಿ ಸೋಲದೇವನಹಳ್ಳಿಯಲ್ಲಿರುವ ಡಾ.ಲೀಲಾವತಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ವೈದ್ಯರಿಲ್ಲದೆ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಅದನ್ನು ಮನಗಂಡು ಉದಯವಾಣಿ ಪತ್ರಿಕೆಯಲ್ಲಿ ಮೇ.1ರಂದು ಆಸ್ಪತ್ರೆಗೆ ಆರೋಗ್ಯಾಧಿಕಾರಿಗಳಿಂದ ಬೀಗ! ಎಂಬ ಶೀರ್ಷಿಕೆಯಡಿ ವೈದ್ಯರ ನೇಮಕಕ್ಕೆ ಲೀಲಾವತಿ ಮನವಿ, ಗ್ರಾಮಸ್ಥರಿಗೂ ಸ್ಪಂದಿಸದ ಅಧಿಕಾರಿಗಳು ಎಂದು ವಿಸ್ತೃತ ವರದಿ ಪ್ರಕಟಿಲಾಗಿತ್ತು. ವರದಿ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಮೇ.1ರಂದೆ ವೈದ್ಯರನ್ನು ನಿಯೋಜಿಸಿ ಆರೋಗ್ಯಕೇಂದ್ರದಲ್ಲಿ ತಪಾಸಣೆ ಆರಂಭಿಸಿದ್ದಾರೆ.

ಅಭಿನಂದನೆ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಸುದ್ದಿ ಪ್ರಕಟಿಸಿ ವೈದ್ಯರ ನಿಯೋಜನೆಗೆ ಸಹಕರಿಸಿದ ಉದಯವಾಣಿ ಕಾರ್ಯವೈಖರಿಯನ್ನು ಹಿರಿಯ ನಟಿ ಡಾ.ಲೀಲಾವತಿ, ನಟ ವಿನೋದ್‌ರಾಜ್‌ ಸೇರಿದಂತೆ ವ್ಯಾಪ್ತಿಯ ಮುಖಂಡರು ಮತ್ತು ನಾಗರಿಕರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next