Advertisement

ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಬೆಂ.ಗ್ರಾಮಾಂತರದ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮ

01:28 PM Jul 18, 2022 | Team Udayavani |

ದೇವನಹಳ್ಳಿ: ಕೊರೊನಾ ಸಂದರ್ಭದಲ್ಲಿ ಜಿಲ್ಲಾಡಳಿತವು ವೈದ್ಯರ ನಡೆ ಗ್ರಾಮಗಳ ಕಡೆ ಹಾಗೂ ಕಂದಾಯ ಇಲಾಖೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ ಇಡೀ ರಾಜ್ಯಕ್ಕೆ ಮಾದರಿಯಾಗುವ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ.

Advertisement

ಕೊರೊನಾ ಸಂಕಷ್ಟ ಕಾಲದಲ್ಲಿ ಜಿಲ್ಲಾಡಳಿತವು ಕೊರೊನಾ ಪರೀಕ್ಷೆ ಹೆಚ್ಚಿಸುವ ಉದ್ದೇಶದಿಂದ ಗ್ರಾಮಗಳಿಗೆ ಮೊಬೈಲ್‌ ವಾಹನಗಳ ಮೂಲಕ ಸ್ಥಳದಲ್ಲೇ ಕೊರೊನಾ ಪರೀಕ್ಷೆ ಮಾಡಿ ಕೊರೊನಾವನ್ನು ತಡೆಗಟ್ಟಲು ಶ್ರಮಿಸಿತ್ತು. ಗ್ರಾಮೀಣ ಜನರಿಗೆ ಆರೋಗ್ಯಸಮಸ್ಯೆ ಎದುರಿಸುತ್ತಿರುವುದರಿಂದ ಬೆಂ.ಗ್ರಾ. ಜಿಪಂ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವೈದ್ಯರ ನಡೆ ಗ್ರಾಪಂ ಕಡೆ ನೂತನ ಕಾರ್ಯಕ್ರಮ ಮಾಡಿ ರಾಜ್ಯದಲ್ಲೇ ಈ ಕಾರ್ಯಕ್ರಮ ಗಮನ ಸೆಳೆಯುವಂತೆ ಆಗಿದೆ.

ಚಿಕಿತ್ಸೆ ಪಡೆಯಲು ಅನುಕೂಲ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇರುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಕಾಯಿಲೆಗಳನ್ನು ಪರೀಕ್ಷೆ ಮಾಡಿ ವೈದ್ಯರಿಂದ ಸಲಹೆ ಕೊಟ್ಟು ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯರನ್ನು ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಉತ್ತಮ, ಆರ್ಥಿಕವಾಗಿರುವ ಗ್ರಾಪಂ ಹಾಗೂ ದಾನಿಗಳ ಸಹಕಾರ ಸಿಎಸ್‌ಆರ್‌ ಅನುದಾನದಲ್ಲಿ ವೈದ್ಯರ ನಡೆ ಗ್ರಾಪಂ ಕಾರ್ಯಕ್ರಮ ಮಾಡಿಕೊಳ್ಳಬಹುದು. ಜು.19ರಂದು ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ವೈದ್ಯರ ನಡೆ ಗ್ರಾಪಂ ಕಡೆ ಚಾಲನೆ ನೀಡಲಾಗುತ್ತದೆ.

ಹಳ್ಳಿ ಜನರಿಗೆ ಸಹಕಾರಿ: ಆಯುಷ್ಮಾನ್‌ ಭಾರತ್‌, ಲಸಿಕಾ ಅಭಿಯಾನಗಳು, ಕ್ಷಯ ನಿಯಂತ್ರಣ ಸೇರಿ ದಂತೆ ಮಾನಸಿಕ ಆರೋಗ್ಯ, ಕಣ್ಣು, ಅಪೌಷ್ಟಿಕತೆ ಸೇರಿದಂತೆ ನಾನಾ ವಿಭಾಗೀಯ ಪರಿಣತರು ಭಾಗವಹಿ ಸುವ ಹಿನ್ನೆಲೆ ಆರೋಗ್ಯ ಸಮಸ್ಯೆ ಅನುಭಸುತ್ತಿರುವ ಹಳ್ಳಿ ಜನರಿಗೆ ಸಹಕಾರಿ ಯಾಗಲಿದೆ. ಚಿಕಿತ್ಸೆಗೂ ನೆರವು ಸಿಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ಕುಗ್ರಾಮಗಳಲ್ಲಿ ಒಂದುದಿನ ಜನರ ಆರೋಗ್ಯ ತಪಾಸಣೆ, ಸಾಂಕ್ರಾಮಿಕ ರೋಗಗಳಬಗ್ಗೆ ಜಾಗೃತಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಆರೋಗ್ಯ ಜಾಗೃತಿ, ಉನ್ನತ ಚಿಕಿತ್ಸೆಗೆ ಸಹಕಾರಿ :  ನಾಲ್ಕು ತಾಲೂಕು ತಾಪಂ ಇಒ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಲಾ 5 ಕುಗ್ರಾಮ ಆಯ್ಕೆ ಮಾಡಬೇಕು. ಗ್ರಾಮಗಳಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿದ ಬಳಿಕ ತಜ್ಞ ವೈದ್ಯ ಸಿಬ್ಬಂದಿ ಇಡೀ ದಿನ ಆರೋಗ್ಯ ಸೌಕರ್ಯನೀಡಬೇಕು. ಪ್ರಾಯೋಗಿಕ ಕಾರ್ಯಕ್ರಮ ದಿನ ನಿಗದಿ ನಂತರ ಗ್ರಾಮದ ಜನ ರಿಗೂ ಮಾಹಿತಿ ನೀಡಬೇಕು.ಅಧಿಕಾರಿಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಹಳ್ಳಿ ಜನರು ಮಾರಕ ರೋಗಗಳ ತಪಾಸಣೆಗೆ ಬೆಂಗಳೂರಿಗೆ ತೆರಳಲಾಗದೇ ಯಾವ ರೋಗವೆಂಬ ಮಾಹಿತಿಯೂ ಇಲ್ಲದೆ ನರಳುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಗಳಲ್ಲಿ ವೈದ್ಯರ ಭೇಟಿಯಿಂದ ಆರೋಗ್ಯ ಜಾಗೃತಿಗೆ, ಉನ್ನತ ಚಿಕಿತ್ಸೆಗೆ ಸಹಕಾರಿಯಾಗಲಿದೆ.

Advertisement

ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಜು.19ರಂದು ಜಿಪಂ ಸಿಇಒ ರೇವಣಪ್ಪ ನೇತೃತ್ವದಲ್ಲಿ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮಕ್ಕೆಚಾಲನೆ ನೀಡಲಾಗುತ್ತಿದೆ. ಗ್ರಾಮೀಣಪ್ರದೇಶದ ಜನರಿಗೆ ವಿವಿಧ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು.ಕಾಯಿಲೆಗಳಿಗೆ ಪರೀಕ್ಷೆ ಮಾಡಿ ವೈದ್ಯರುಮಾರ್ಗದರ್ಶನ ನೀಡುತ್ತಾರೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು. -ಮಲ್ಲೇಶ್‌, ಬೆಟ್ಟಕೋಟೆ ಪಿಡಿಒ

ಗ್ರಾಪಂ ವ್ಯಾಪ್ತಿಗಳಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಹಾಗೂ ಎಲ್ಲಾ ತರಹದಕಾಯಿಲೆಗಳಿಗೆ ಪರೀಕ್ಷೆ ಮಾಡಿಸಲು ವೈದ್ಯರನಡೆ ಗ್ರಾಪಂ ಕಡೆ ಎಂಬ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಸಂಪನ್ಮೂಲಇರುವ ಗ್ರಾಪಂ ಶಾಮಿಯಾನ, ಚೇರ್‌ಗಳವ್ಯವಸ್ಥೆ ಮಾಡಿ ಬರುವ ವೈದ್ಯರಿಗೆ ಅನುಕೂಲಕಲ್ಪಿಸಿ ಕೊಡಬೇಕು. ಪ್ರಾಯೋಗಿಕವಾಗಿಮಾಡುತ್ತಿದ್ದು, ಮುಂಬ ರುವ ದಿನಗಳಲ್ಲಿ ವಿಸ್ತರಣೆ ಮಾಡುವ ಉದ್ದೇಶವಿದೆ. – ಕೆ.ರೇವಣಪ್ಪ, ಜಿಪಂ ಸಿಇಒ

– ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next