Advertisement

ಹಸುವಿನ ಹೊಟ್ಟೆಯಿಂದ ತಂತಿ ಹೊರ ತೆಗೆದ ವೈದ್ಯರು

02:53 PM Dec 11, 2021 | Team Udayavani |

ತಿಪಟೂರು: ತಾಲೂಕಿನ ನೊಣವಿನಕೆರೆ ಗ್ರಾಮದ ನವೀನ್‌ ಎಂಬುವವರ ಸೀಮೆಹಸು ಹೊಟ್ಟೆ ಉಬ್ಬರದಿಂದ ನರಳುತ್ತಿತ್ತು. ಈ ಸಮಯದಲ್ಲಿ ಸ್ಥಳಕ್ಕೆ ಬಂದ ನೊಣವಿನಕೆರೆ ಪಶು ಆಸ್ಪತ್ರೆಯ ವೈದ್ಯ ಡಾ.ಎಸ್‌.ಪಿ.ಮಂಜುನಾಥ್‌ ಹಾಗೂ ಹುಣಸೇಘಟ್ಟದ ಡಾ.ಡಿ.ಎನ್‌. ಅಭಿಷೇಕ್‌ ಅವರು ಶಸ್ತ್ರಚಿಕಿತ್ಸೆ ಮಾಡಿ, ಹಸುವಿನ ಹೊಟ್ಟೆಯಲ್ಲಿದ್ದ ತಂತಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವೈದ್ಯ ಎಸ್‌.ಪಿ.ಮಂಜುನಾಥ್‌ ಮಾತನಾಡಿ, ಹಸುಗಳಲ್ಲಿ ಹೊಟ್ಟೆಗೆ ನಾಲ್ಕು ಭಾಗಗಳಿದ್ದು, ಚೂಪಾದ ವಸ್ತುಗಳು, ಪ್ಲಾಸ್ಟಿಕ್‌, ರೆಕ್ಸಿನ್‌ಗಳಂತಹ ವಸ್ತುಗಳನ್ನು ಹಸುವು ಮೇವಿನೊಂದಿಗೆ ತಿಂದಾಗ, ಹಸುವಿನ ಹೊಟ್ಟೆಯ ಎರಡನೇ ಭಾಗದಲ್ಲಿ ಸಿಕ್ಕಿಕೊಳ್ಳುತ್ತವೆ. ಈ ಹಸುವಿನಲ್ಲಿ ಅದರ ಸಗಣಿಯ ಸಾಂದ್ರತೆ ಮತ್ತು ಹಸುವು ತೋರುತ್ತಿದ್ದ ಕೆಲವು ಲಕ್ಷಣಗಳಿಂದ ಚೂಪಾಗಿರುವ ವಸ್ತುವೊಂದು ಸಿಕ್ಕಿಕೊಂಡಿರುವುದನ್ನು ಪತ್ತೆ ಹಚ್ಚಲಾಯಿತು. ಶಸ್ತ್ರ ಚಿಕಿತ್ಸೆ ನಡೆಸಿ ತಂತಿ ಹೊರ ತೆಗೆಯಲು ಸಹಕಾರಿಯಾಯಿತು ಎಂದರು.

60 ಜಾನುವಾರುಗಳಿಗೆ ಶಸ್ತ್ರ ಚಿಕಿತ್ಸೆ: ಈ ಮೊದಲು ತಮ್ಮ ತಂಡದಿಂದ ತುಮಕೂರು, ಹಾಸನ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಸುಮಾರು 60 ಜಾನುವಾರುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ತಂತಿ, ಸೂಜಿ, ಕಬ್ಬಿಣದ ಮೊಳೆ, ಚಮಚ ಮುಂತಾದ ಚೂಪಾದ ವಸ್ತುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಈ ಭಾಗದಲ್ಲಿ ಟೊಮೊಟೋ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಂತಿಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ದನಕರುಗಳ ಮೇವು ತಿನ್ನುವಾಗ ಎಚ್ಚರವಹಿಸಬೇಕು. ಕಬ್ಬಿಣದ ವಸ್ತುಗಳು ಹೊಟ್ಟೆಯನ್ನು ಸೇರಿಕೊಂಡಾಗ, ಅನೇಕ ರೀತಿಯ ಗಂಭೀರ ಸ್ಥಿತಿಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಪಶುಪಾಲಕರು ಗಮನಹರಿಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next