ಹುಬ್ಬಳ್ಳಿ: ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕಿಮ್ಸ್‌ನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಲೆಗೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಶನಿವಾರ ಕಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕಿಮ್ಸ್‌ನ ಹೊರ ರೋಗಿಗಳ ವಿಭಾಗ ಹಾಗೂ ಕೆಲಹೊತ್ತು ತುರ್ತು ನಿಗಾ ಘಟಕದಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಹಲ್ಲೆಕೋರರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಿಂದಾಗಿ ರೋಗಿಗಳು ಕೆಲಕಾಲ ಪರದಾಡಬೇಕಾಯಿತು. ಕಿರಿಯ ವೈದ್ಯರ ಸಂಘಟನೆ ಅಧ್ಯಕ್ಷ ಡಾ| ಮಲ್ಲಪ್ಪ, ಉಪಾಧ್ಯಕ್ಷ ಡಾ| ದರ್ಶನ, ಡಾ| ಮಾಲೇಗೌಡ, ಡಾ| ಗೋಪಿ, ಡಾ| ಧನ್ಯಶ್ರೀ ಸಂಪಗಾವಿ, ಡಾ| ವಾರ್ಷಾ, ಡಾ| ಇಂಚರ ಇನ್ನಿತರೆ ವೈದ್ಯರು ಪಾಲ್ಗೊಂಡಿದ್ದರು.
ಎಸ್‌ಡಿಎಂ ಆಸ್ಪತ್ರೆಯ ಹೊರ ರೋಗಿ ವಿಭಾಗ ನಾಳೆ ಬಂದ್:
ಧಾರವಾಡ: ಭಾರತೀಯ ವೈದ್ಯಕೀಯ ಮಂಡಳಿಯು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜೂ. 17ರಂದು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಅಂದು ಎಸ್‌ಡಿಎಂ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಹೊರ ರೋಗಿಗಳ ವಿಭಾಗ ಬಂದ್ ಇರಲಿದೆ. ಮುಷ್ಕರ ಬೆಂಬಲಾರ್ಥ ಹೊರ ರೋಗಿಗಳ ವಿಭಾಗವು ಕಾರ್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.