Advertisement

ನೂತನ ವೈದ್ಯಕೀಯ ನೀತಿಗೆ ವೈದ್ಯರ ಆಕ್ರೋಶ

03:16 PM Dec 09, 2020 | Suhan S |

ಹರಿಹರ: ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಯನ್ನು ಮಿಶ್ರಣಗೊಳಿಸಿ ಕೇಂದ್ರ ಸರಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದನ್ನು ಖಂಡಿಸಿ ಐಎಂಎ ಸ್ಥಳೀಯ ಶಾಖೆವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಐಎಂಎ ತಾಲೂಕು ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ್‌ ಮಾತನಾಡಿ, ಕೇಂದ್ರಸರ್ಕಾರ ವೈಜ್ಞಾನಿಕ ತಳಹದಿಯಲ್ಲಿ ಸಾಕಷ್ಟು ಸಂಶೋಧನೆ, ಅವಿಷ್ಕಾರಗಳಿಂದ ರೂಪಿಸಿರುವ ಆಧುನಿಕ ವೈದ್ಯಕೀಯಪದ್ಧತಿಯನ್ನು ಕಡೆಗಣಿಸಿದೆ. ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮಬೀರುವ ಕುರುಡು ವೈದ್ಯಕೀಯ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.

ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನೇ ಅಳವಡಿಸಿ ಹೆಸರಿಗಷ್ಟೇ ಶಲ್ಯ ತಂತ್ರ,ಶಾಲಕ್ಯ ತಂತ್ರ ಹೆಸರಿನ ಸ್ನಾತಕೋತ್ತರಕೋರ್ಸ್‌ ಆರಂಭಿಸಲಾಗುತ್ತಿದೆ.ಆಧುನಿಕ ಬೆಳವಣಿಗೆಗಳು ಮನುಕುಲದ ಸಾಮಾನ್ಯ ಪರಂಪರೆಯಾದ್ದರಿಂದ ಈ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಸೇರಿಸಬಹುದೆಂಬ ಆಯುಷ್‌ ಸಚಿವಾಲಯದ ಸ್ಪಷ್ಟನೆ ವಿಚಿತ್ರವಾಗಿದೆ ಎಂದು ದೂರಿದರು.

ಡಾ| ಆರ್‌.ಆರ್‌. ಖಮೀತ್ಕರ್‌ ಮಾತನಾಡಿ, ಕೇಂದ್ರದ ನೀತಿಯಿಂದ ದೇಶದ 600 ವೈದ್ಯಕೀಯಕಾಲೇಜುಗಳಿಂದ 2030ರ ವೇಳೆಗೆ ಖೀಚಡಿ ವೈದ್ಯಕೀಯ ಪದ್ಧತಿಯ ಹೈಬ್ರಿಡ್‌ ವೈದ್ಯರು ಉದ್ಬವಿಸಲಿದ್ದಾರೆ. ಅಲೋಪತಿ ಮತ್ತು ಆಯುರ್ವೇದದ ಕಿಚಡಿ ವೈದ್ಯಕೀಯ ಪದ್ಧತಿಯನ್ನು ವಿವೇಚನೆ ಇರುವವರು ಯಾರೂಒಪ್ಪಲು ಸಾಧ್ಯವಿಲ್ಲ ಎಂದರು.

ಐಎಂಎ ಕಾರ್ಯದರ್ಶಿ ಡಾ|ಗೋಪಿ ಮಾತನಾಡಿ, ಆಯುಷ್‌ ವೈದ್ಯ ಪದ್ಧತಿಯಲ್ಲಿ ಅರಿವಳಿಕೆ, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಸೋಂಕುಗಳ ಬಗ್ಗೆ ವಿವರಣೆಯಿಲ್ಲ. ಸೂಕ್ಷ್ಮಜೀವಿ ಸಿದ್ಧಾಂತವನ್ನೇ ಒಪ್ಪದ ಈ ಆರೋಗ್ಯ ಪದ್ಧತಿ ರೋಗಿಗಳನ್ನು ಸೆಪ್ಟಿಕ್‌ ವಾರ್ಡ್‌ಗಳಿಗೆ ನೂಕಲಿದೆ.ಕೇವಲ ಪರಂಪರೆಯ ವೈಭವೀಕರಣಕ್ಕೆ ಆಯುಷ್‌ ಸಚಿವಾಲಯ ಅರ್ಥಹೀನ ವಿವರಣೆ ನೀಡುತ್ತಿರುವುದು ಅಪರಾಧಕೃತ್ಯವಾಗಿದೆ. ವಿವಿಧ ಕ್ಷೇತ್ರಗಳತಜ್ಞರು, ಸಾರ್ವಜನಿಕರು ಇದನ್ನು ಖಂಡಿಸಬೇಕಾಗಿದೆ ಎಂದು ತಿಳಿಸಿದರು.

Advertisement

ಡಾ| ಪ್ರವೀಣ್‌ ಹೆಗಡೆ, ಡಾ| ವಿ.ಟಿ. ನಾಗರಾಜ್‌, ಡಾ| ಶಾರದಾ ದೇವಿಶ್ರೇಷ್ಠಿ,ಡಾ| ಹರೀಶ್‌, ಡಾ| ಮೆಹರವಾಡೆ, ಡಾ| ಸುರೇಶ್‌ ಬಸರಕೋಡ್‌, ಡಾ| ಚಂದ್ರಿಕಾ ಅನಂತನಾಗ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next