Advertisement

ಸರ್ಜರಿ: ಮಹಿಳೆಯ ಹೊಟ್ಟೆಯಲ್ಲೇ ಉಳಿದ ಕತ್ತರಿ; ವೈದ್ಯರ ವಿರುದ್ಧ ಕೇಸು

11:15 AM Feb 09, 2019 | Team Udayavani |

ಹೈದರಾಬಾದ್‌ : ಕಳೆದ ವರ್ಷ ನವೆಂಬರ್‌ ನಲ್ಲಿ  ತನ್ನ ಪತ್ನಿಗೆ ಉದರ ಶಸ್ತ್ರ ಚಿಕಿತ್ಸೆ ನಡೆಸಿದ್ದ ಸರಕಾರಿ ಆಸ್ಪತ್ರೆಯ ವೈದ್ಯರ ತಂಡ ಆಕೆಯ ಹೊಟ್ಟೆಯೊಳಗೆ ಶಸ್ತ್ರ ಚಿಕಿತ್ಸೆಯ ಕತ್ತರಿಯನ್ನು ಬಿಟ್ಟಿರುವುದಾಗಿ ವ್ಯಕ್ತಿಯೋರ್ವ ಇಂದು ಶನಿವಾರ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ತೀವ್ರ ಹೊಟ್ಟೆ ನೋವಿನ ಕಾರಣ ನಿನ್ನೆ ಶುಕ್ರವಾರ 33ರ ಹರೆಯದ ಮಹಿಳೆಯು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ಅಲ್ಲಿ ನಡೆಸಲಾದ ಎಕ್ಸ್‌ರೇ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯೊಳಗೆ ಶಸ್ತ್ರ ಚಿಕಿತ್ಸೆ ಕತ್ತರಿ ಇರುವುದು ಪತ್ತೆಯಾಗಿತ್ತು. 

ಇದನ್ನು ಅನುಸರಿಸಿ ಆಕೆಯ ಪತಿ ವೈದ್ಯರ ನಿರ್ಲಕ್ಷ್ಯ ಮತ್ತು ಅದರಿಂದಾಗಿ ತನ್ನ ಪತ್ನಿಯ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷೆಗೆ ಎದುರಾಗಿರುವ ಗಂಡಾಂತರವನ್ನು ಆರೋಪಿಸಿ ಪೊಲೀಸರಲ್ಲಿ ಕೇಸು ದಾಖಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next