ಬೆಂಗಳೂರು: ಇನ್ನು ಹಳ್ಳಿ ಹಳ್ಳಿಗಳಲ್ಲೂ ಸಂಚಾರಿ ಕ್ಲಿನಿಕ್ ಕಾಣಸಿಗಲಿವೆ, ಗ್ರಾಮಗಳಿಗೇ ಬರುವ ವೈದ್ಯರು ಸ್ಥಳದಲ್ಲೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ!
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಉಲ್ಬಣಿಸು ತ್ತಿದ್ದರೂ ಜನ ಪರೀಕ್ಷೆಗೆ ಒಳ ಗಾಗಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ “ವೈದ್ಯರ ನಡೆ ಹಳ್ಳಿಗಳ ಕಡೆ’ ಕಾರ್ಯ ಕ್ರಮದ ತ್ವರಿತ ಅನುಷ್ಠಾನಕ್ಕೆ ಸರಕಾರ ಆದೇಶ ನೀಡಿದೆ.
ಕಂದಾಯ ಸಚಿವ ಆರ್. ಅಶೋಕ್ ಇತ್ತೀಚೆ ಗಷ್ಟೇ ಈ ಕಾರ್ಯಕ್ರಮ ಜಾರಿಗೆ ಸೂಚಿಸಿದ್ದರು. ಸದ್ಯದಲ್ಲೇ ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಇಂಟರ್ನ್ಶಿಪ್ ವಿದ್ಯಾರ್ಥಿಗಳು, ಬಿಎಸ್‌ಸಿ ನರ್ಸಿಂಗ್, ಬಿಡಿಎಸ್, ಎಂಡಿಎಸ್, ಆಯುಷ್ ಪದವೀಧರ ವೈದ್ಯರ ಸೇವೆಯನ್ನು ಎರವಲು ಪಡೆಯಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಒಂದೇ ಕಡೆ ವೈದ್ಯರು, ಆರೋಗ್ಯ ಸಿಬಂದಿ ಲಭ್ಯವಿದ್ದು, ದೈಹಿಕ ಪರೀಕ್ಷೆ, ಗಂಟಲು ಮಾದರಿ ಪರೀಕ್ಷೆ ನಡೆಸಿ, ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದವರಿಗೆ “ವೈದ್ಯಕೀಯ ಕಿಟ್’ ವಿತರಿಸುವ ಸಂಚಾರಿ ಕ್ಲಿನಿಕ್ ಕೂಡ ಇರುತ್ತದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯ ದರ್ಶಿ ಕೂಡಲೇ ಈ ಕಾರ್ಯಕ್ರಮ ಜಾರಿ ಗೊಳಿಸುವಂತೆ ರವಿವಾರ ಆದೇಶಿಸಿದ್ದಾರೆ.
ಮೊಬೈಲ್ ಕ್ಲಿನಿಕ್ ತಂಡ
ಒಂದು ವಾರದಲ್ಲಿ ತಾಲೂಕಿನಲ್ಲಿರುವ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಬಂದರೆ ಮೆಡಿಕಲ್ ಕಿಟ್ ನೀಡಿ ಚಿಕಿತ್ಸೆ ಪ್ರಾರಂಭಿಸ ಬೇಕು. ರೋಗ ಲಕ್ಷಣಗಳಿದ್ದು, ನೆಗೆಟಿವ್ ವರದಿ ಬಂದರೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸ ಬೇಕು. ಮೊಬೈಲ್ ಕ್ಲಿನಿಕ್ ಸಿಬಂದಿ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ತಂಡದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.