Advertisement

ಮಂಡ್ಯ: ಸೋಂಕಿತರೊಂದಿಗೆ ನೃತ್ಯ ಮಾಡಿದ ವೈದ್ಯರು, ಸಿಬ್ಬಂದಿ

04:54 PM Jun 11, 2021 | Team Udayavani |

ಮಳವಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಲು ಸೋಂಕಿತರೊಂದಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ನೃತ್ಯ ಮಾಡಿ ಮನರಂಜನೆ ನೀಡಿದರು.

Advertisement

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾಧವ ನಾಯಕ್, ಡಾ.ಮುರಳೀಧರನ್, ಡಾ.ಶಿವಕುಮಾರ್, ಸಿಬ್ಬಂದಿಗಳಾದ ವಿನಯ್, ಮಂಜುನಾಥ್, ದ್ರಾಕ್ಷಾಯಿಣಿ, ಸುಮ ಸೇರಿದಂತೆ ಹಲವರು ಕೊಡವ ಗೀತೆ, ಮಲೆ ಮಹದೇಶ್ವರ ಸ್ವಾಮಿಯ ಗೀತೆ ಸೇರಿದಂತೆ ವಿವಿಧ ಹಾಡುಗಳಿಗೆ ಸೋಂಕಿತರ ಜತೆ ಹೆಜ್ಜೆ ಹಾಕುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಗೆ ಸುಧಾಕರ್ ಭೇಟಿ : ಅಧಿಕಾರಿಗಳ ಮೇಲೆ ಗರಂ

ಈ ಸಂಬಂಧ ಡಾ.ಶಿವಕುಮಾರ್ ಪ್ರತಿಕ್ರಿಯಿಸಿ ಕೋವಿಡ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮನರಂಜನೆ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ನೃತ್ಯ ಮಾಡಿ ಅವರಲ್ಲಿ ಸೋಂಕಿನ ಬಗ್ಗೆ ಇರುವ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next