Advertisement

ವೈದ್ಯರ ದಿನಾಚರಣೆ: ‘ಕ್ಷೇಮ’ದಲ್ಲಿ ವೈದ್ಯರಿಗೆ ಸಮ್ಮಾನ

03:00 AM Jul 03, 2017 | Team Udayavani |

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿ (ಕ್ಷೇಮ)ಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆ ಆಶ್ರಯದಲ್ಲಿ ಭಾರತ ರತ್ನ ಡಾ| ಬಿ.ಸಿ.ರಾಯ್‌ ಜನ್ಮ ದಿನಾಚರಣೆಯ ಅಂಗವಾಗಿ ಕ್ಷೇಮ ಸೆಮಿನಾರ್‌ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ವೈದ್ಯರ ದಿನಾಚರಣೆ’ಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಖ್ಯಾತ ವೈದ್ಯರಾದ ಡಾ| ಎಂ.ಪಿ. ಶೆಟ್ಟಿ ಸಿದ್ಧಾಪುರ, ಡಾ| ಬಿ. ವಸಂತ ಬಾಳಿಗಾ ಬಂಟ್ವಾಳ, ಡಾ| ಹರಿದಾಸ್‌ ವೆರ್‌ ಕೋಟ್‌ ನೀಲೇಶ್ವರ ಅವರನ್ನು ಸಮ್ಮಾನಿಸಲಾಯಿತು.

Advertisement

ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಸಮ್ಮಾನ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಅವರನ್ನು ದೇವರ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಾರೆ. ಅವರ ಕ್ಲಿನಿಕ್‌ಗಳ ಮುಂದೆ ರೋಗಿಗಳು ಸರತಿ ಸಾಲಿನಲ್ಲಿ ನಿಂತರೆ ವೈದ್ಯರು ರೋಗಿಗಳಿಗೆ ನೀಡುತ್ತಿರುವ ಪ್ರಾಮಾಣಿಕ ಸೇವೆ ಹಾಗೂ ರೋಗಿ ವೈದ್ಯರ ಜತೆಗೆ ಇಟ್ಟುಕೊಂಡಿರುವ ಅವಿನಾಭಾವ ಸಂಬಂಧದ ಕುರುಹು ಆಗಿದೆ. ಇಲ್ಲಿ ಸಮ್ಮಾನಿಸಲ್ಪಟ್ಟ ವೈದ್ಯರು ತಮ್ಮ ಸೇವೆಯಿಂದ ಜನಪ್ರಿಯರಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಇವರಿಂದ ಗ್ರಾಮೀಣ ಪ್ರದೇಶದ ಜನರಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಸಮ್ಮಾನಿತ ವೈದ್ಯರಾದ ಡಾ| ಎಂ.ಪಿ. ಶೆಟ್ಟಿ ಸಿದ್ಧಾಪುರ, ಡಾ| ಬಿ. ವಸಂತ ಬಾಳಿಗಾ ಬಂಟ್ವಾಳ, ಡಾ| ಹರಿದಾಸ್‌ ವೆರ್‌ ಕೋಟ್‌ ನೀಲೇಶ್ವರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಡೀನ್‌ ಹಾಗೂ ಪ್ರಾಂಶುಪಾಲ ಡಾ| ಕೃಷ್ಣ ನಾಯಕ್‌, ವಿಶ್ರಾಂತ ಡೀನ್‌ ಡಾ| ಶ್ರೀಧರ್‌ ಶೆಟ್ಟಿ ಉಪಸ್ಥಿತರಿದ್ದರು. ಕ್ಷೇಮ ಡೀನ್‌ ಪ್ರೊ| ಡಾ| ಸತೀಶ್‌ ಕುಮಾರ್‌ ಭಂಡಾರಿ ಸ್ವಾಗತಿಸಿದರು. ಡಾ| ವಿಕ್ರಮ್‌ ಶೆಟ್ಟಿ, ಡಾ| ರಾಜೀವ್‌, ಡಾ| ತನ್ಮಯ ಭಟ್‌ ಸಮ್ಮಾನಿತರ ವಿವರ ನೀಡಿದರು. ಕ್ಷೇಮ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್‌ ಹಿರೇಮಠ ವಂದಿಸಿದರು. ಡಾ| ಸಿದ್ಧಾರ್ಥ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next