Advertisement

ಮುಂಡಿತ್ತಡ್ಕ ಎಸ್‌ಎಂಎಂ ಶಾಲೆಯಲ್ಲಿ ವೈದ್ಯರ ದಿನಾಚರಣೆ

12:09 AM Jul 04, 2019 | Team Udayavani |

ಬದಿಯಡ್ಕ: ಮುಂಡಿತ್ತಡ್ಕದ ಎಸ್‌.ಎಂ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವೈದ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

Advertisement

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಕ್ಕಿನಡ್ಕದ ಡಾ| ಪಿ. ನಾರಾಯಣ ಭಟ್ ಮೆಮೋರಿ ಯಲ್ ಆಯು ರ್ವೇದಿಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ| ಸ್ವಪ್ನಾ ಜೆ. ಅವರು ಮನುಷ್ಯನ ಸುಖಮಯ ಜೀವನ ವ್ಯವಸ್ಥೆಗೆ ಪೂರಕವಾಗಿ ಬೆಳೆದು ಬಂದ ವೈದ್ಯಕೀಯ ವಿಭಾಗ ಇಂದು ವಿಸ್ತಾರವಾಗಿ ಬಹುಮುಖಗಳ ವೈದ್ಯ ಸೇವೆ, ಸಂಶೋಧನೆಗಳಿಂದ ಬೆಳೆದು ನಿಂತಿದೆ. ಚಿಕಿತ್ಸೆ ನೀಡುವ ವೈದ್ಯನ ಅರಿವು-ಅನುಭವಗಳ ಜ್ಞಾನ ರೋಗ ಮುಕ್ತತೆಗೆ ಕಾರಣವಾಗುವ ಪ್ರಧಾನ ಅಂಶವಾಗಿದ್ದು, ಭಾರತೀಯ ಪರಂಪರೆಯಲ್ಲಿ ವೈದ್ಯನಿಗೆ ವಿಶೇಷ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ವೈದ್ಯರ ನಗುಮೊಗದ ಸೇವೆಗೆ ರೋಗಿಯು ಪೂರಕ ಸ್ಪಂದನ, ವ್ಯಾಯಾಮ, ನಿಗದಿತ ಆಹಾರ ಸೇವನೆ, ಪಿಡುಗುಗಳಿಂದ ದೂರ ಇರುವಿಕೆ ಮೊದಲಾದ ಅಂಶಗಳ ಮೂಲಕ ರೋಗಮುಕ್ತತೆಗೆ ಸಹಸ್ಪಂದಿಸಬೇಕಿದ್ದು, ವ್ಯಾದಿಮುಕ್ತ ಸಮಾಜ ವೈದ್ಯನ ಪರಮ ಲಕ್ಷ್ಯವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ವ್ಯವಸ್ಥಾಪಕ, ನಿವೃತ್ತ ಮುಖ್ಯೋಪಾಧ್ಯಾಯ ಜನಾರ್ದನ ಮಾಸ್ತರ್‌ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ಟೀಚರ್‌ ಹಾಗೂ ಶಾಲಾ ನೌಕರ ಸಂಘದ ಕಾರ್ಯದರ್ಶಿ ಪದ್ಮನಾಭ ನಾಯಕ್‌ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಕ್ಷಕ ವಿಜಯ ಮಾಸ್ತರ್‌ ಸ್ವಾಗತಿಸಿದರು. ಸುಮತಿ ಟೀಚರ್‌ ವಂದಿಸಿದರು. ದಾಮೋದರ ಮಾಸ್ತರ್‌ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಡಾ| ಸ್ವಪ್ನಾ ಜೆ. ಅವರನ್ನು ಗೌರವಿಸಿ, ವೈದ್ಯ ದಿನಾಚರಣೆಯ ಶುಭಾಶಯ ವ್ಯಕ್ತಪಡಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next