Advertisement

ಕೋವಿಡ್‌ -19 ಕೇಂದ್ರಕ್ಕೆ ವೈದ್ಯರ ನೇಮಕ

04:02 PM Sep 18, 2020 | Suhan S |

ಕೆ.ಆರ್‌.ಪೇಟೆ: ಕೋವಿಡ್‌ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ. ಇದರಿಂದ ಪಾಳಿ ಪದ್ಧತಿಯಲ್ಲಿ ಕಾರ್ಯನಿರ್ವಹಿಸಲು 9 ಜನ ವೈದ್ಯರನ್ನು ನೇಮಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ. ಮಂಚೇಗೌಡ ತಿಳಿಸಿದರು.

Advertisement

ಪಟ್ಟಣದ ದುಂಡ ಶೆಟ್ಟಿಲಕ್ಷ್ಮಮ್ಮ ಸಾರ್ವ ಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲಿಸಿದ ಅವರು ಸುದ್ದಿ ಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಹೆಚ್ಚುತ್ತಿದ್ದು, ಹಲವು ಸಾವುಗಳು ಸಂಭವಿಸಿವೆ. ಪಟ್ಟಣದ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೋವಿಡ್‌ ಮತ್ತು ಇತರ 70 ರೋಗಿಗಳಿಗೆಸೌಲಭ್ಯ ವ್ಯವಸ್ಥೆಯ ಸಿದ್ಧತಾ ಕಾರ್ಯ ಶೇ.90ರಷ್ಟು ಮುಗಿದಿದೆ. ತುರ್ತು ಚಿಕಿತ್ಸೆ ಇರುವ ಕೋವಿಡ್‌ ರೋಗಿಗಳಿಗೆ ಆಗತ್ಯ ಔಷಧಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ತುರ್ತು ಕಾರ್ಯಕ್ಕೆ ಸೂಚನೆ: ರೋಗಿ ಗಳ ಆರೈಕೆಗೆ ಆದ್ಯತೆ ನೀಡಿ, ಆಸ್ಪತ್ರೆಯ ಸ್ವಚ್ಛತೆ, ತುರ್ತಾಗಿ ಆಗಬೇಕಾಗಿರುವ ಕೆಲಸ, ಕಾರ್ಯಗಳನ್ನು ಕೂಡಲೇ ಮಾಡು ವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಜೆ.ಸಿ.ಶಿವಪ್ಪಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಮಧು ಸೂದನ್‌ ಅವರಿಗೆ ಸೂಚಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾಲಕಾಲಕ್ಕೆ ವೇತನ ನೀಡುತ್ತಿಲ್ಲ. ಹೊರ ಗುತ್ತಿಗೆ ಏಜೆನ್ಸಿ ಮಾಲೀಕರಿಗೆ ಕೂಡಲೇ ವೇತನ ನೀಡಬೇಕು. ಗಂಟಲು ದ್ರವ ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಎಲ್ಲರೂ ಮಾಸ್ಕ್, ಸ್ಯಾನಿಟೈಸರ್‌ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ರೋಗಲಕ್ಷಣ ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿ ಕೊಂಡು, ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next