Advertisement

Bidar: ಸಾಲ‌ ಬಾಧೆ… ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವೈದ್ಯ, ಕಾಡಿನಲ್ಲಿ ದೇಹ ಪತ್ತೆ

09:39 PM Sep 11, 2024 | Team Udayavani |

ಬೀದರ್: ಸಾಲ ಬಾಧೆ ತಾಳದೆ ಬ್ರಿಮ್ಸ್ ಪಿಜಿ ವಿದ್ಯಾರ್ಥಿ ಡಾ.ಮಹ್ಮದ್ ಸೋಹೆಲ್ ಅಹ್ಮದ್ (29) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಾಲೂಕಿನ ಚಿಟ್ಟಾ ಕಾದಿಟ್ಟ ಅರಣ್ಯದಲ್ಲಿ ಬುಧವಾರ ಶವ ಪತ್ತೆಯಾಗಿದೆ.

Advertisement

ನಗರದ ರಾವ್ ತಾಲೀಮ್ ನಿವಾಸಿಯಾದ ಸೋಹೆಲ್ ಸೆ.4ರಂದು ಕಾಣೆಯಾಗಿರುವ ಬಗ್ಗೆ ಅವರ ತಂದೆ ಚೌಬಾರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಳ್ಳಿಖೇಡ್ (ಬಿ) ಪಟ್ಟಣದಲ್ಲಿ ಕ್ಲಿನಿಕ್ ಹಾಕಲು ಸೋಹೆಲ್ ಸಾಲವನ್ನು ಮಾಡಿಕೊಂಡಿದ್ದ. ಕ್ಲಿನಿಕ್ ಸರಿಯಾಗಿ ನಡೆಯದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಗಾಂಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Election Rally: 20 ಸ್ಥಾನ ಹೆಚ್ಚು ಸಿಗುತ್ತಿದ್ದರೆ ಬಿಜೆಪಿಗರು ಜೈಲು ಸೇರ್ತಿದ್ರು: ಖರ್ಗೆ

Advertisement

Udayavani is now on Telegram. Click here to join our channel and stay updated with the latest news.