Advertisement
ಕೆಲವರಿಗೆ ಸಾವಿರದ ಒಳಗೆ, ಇನ್ನು ಕೆಲವರಿಗೆ ಹತ್ತು ಸಾವಿರದ ಒಳಗೆ ಮತ್ತೇ ಕೆಲವರಿಗೆ ಲಕ್ಷ, ಎರಡು-ಮೂರು ಲಕ್ಷ ಆಸು-ಪಾಸು ನೀಟ್ ರ್‍ಯಾಂಕ್ ಬಂದಿರಬಹುದು. ಆದರೆ, ನೀಟ್ ತೇರ್ಗಡೆ ಹೊಂದಿ ರ್‍ಯಾಂಕ್ ಪಡೆದ ಬಹುತೇಕ ವಿದ್ಯಾರ್ಥಿಗಳಲ್ಲಿ ತಮಗೆ ಸರಕಾರಿ ಕೋಟಾದಡಿ ಪ್ರವೇಶ ಸಿಗುತ್ತದೆಯೋ ,ಇಲ್ಲವೋ..? ಸೀಟು ಪಡೆಯುವುದು ಹೇಗೆ? ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಇದಕ್ಕೆ ಸೂಕ್ತ ಉತ್ತರ ಜೂನ್ 28 ಅಥವಾ 29ರಂದು ಸಿಗಲಿದೆ.
Related Articles
Advertisement
ದಾಖಲೆ ಪರಿಶೀಲನೆ:ಸಿಇಟಿ ಮತ್ತು ನೀಟ್ ಬರೆದಿರುವ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ ಸಮಸ್ಯೆ ಇಲ್ಲ. ಸಿಇಟಿ-2017ರ ರ್‍ಯಾಂಕ್ ಆಧಾರದಲ್ಲಿ ಈಗಾಗಲೇ ಕೆಇಎ ದಾಖಲೆ ಪರಿಶೀಲನೆ ನಡೆಸಿದೆ. ನೀಟ್ ಬರೆದು, ಸಿಇಟಿ ಬರೆಯದೇ ಇರುವ ಅಭ್ಯರ್ಥಿಗಳಿಗೆ ಕೆಇಎ ವೆಬ್‌ಸೈಟ್ ಜಠಿಠಿಟ://kಛಿಚ.kಚr.nಜಿc.ಜಿn ನಲ್ಲಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬಿಎಸ್‌ಇ ಕಟ್‌ಆಫ್ ಮಾರ್ಕ್ಸ್ ಹಂಚಿಕೆ ಮಾಡಿದ ನಂತರ ನೋಂದಾಯಿತ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಸಂಬಂಧಪಟ್ಟ ಕೇಂದ್ರದಲ್ಲಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ನೀಟ್ ಮಾತ್ರ ಬರೆದಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೆಇಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸೀಟು ಹಂಚಿಕೆ ಹೇಗೆ?
ನೀಟ್ ರ್‍ಯಾಂಕ್ ಆಧಾರದಲ್ಲಿ ಸಿಬಿಎಸ್‌ಇ ಎಲ್ಲಾ ರಾಜ್ಯಕ್ಕೂ ಕಟ್‌ಆಫ್ ಮಾರ್ಕ್ಸ್ ನೀಡಲಿದೆ. ಈ ಆಧಾರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಅವರ ರ್‍ಯಾಂಕ್ ಆಧಾರದಲ್ಲಿ ಸೀಟು ಪಡೆಯಲು ಬೇಕಾದ ಆಯ್ಕೆ ನೀಡಲಿದೆ. ಸಿಬಿಎಸ್‌ಇಯಿಂದ 350 ಅಥವಾ 400 ಕಟ್ ಆಫ್ ಮಾರ್ಕ್ಸ್ ನೀಡಿದರೆ, ಈ ಮಾರ್ಕ್ಸ್ ಆಧಾರದಲ್ಲಿ ಅಧಿಕ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮೊದಲು ಸೀಟಿ ಹಂಚಿಕೆ ನಡೆಯಲಿದೆ. ಇದರಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿನಾಯ್ತಿ ಇರುತ್ತದೆ. ಉಳಿದಂತೆ ಈ ಹಿಂದೆ ನಡೆಯುತ್ತಿದ್ದ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ. ಅಧಿಕಾರಿಗಳ ಸಭೆ:
ವೈದ್ಯಕೀಯ ಸೀಟು ಭರ್ತಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ನೀಟ್ ತೇರ್ಗಡೆಯಾದ ವಿದ್ಯಾರ್ಥಿಗಳ ಸೀಟು ಹಂಚಿಕೆ, ಕಟ್ ಆಫ್ ಮಾರ್ಕ್ಸ್ ಹಾಗೂ ರಾಜ್ಯಕ್ಕೆ ನೀಟ್‌ಕಟ್ ಆಫ್ ಅಂಕ ನೀಡುವ ಕುರಿತು ಸಿಬಿಎಸ್‌ಇ ಬೋರ್ಡ್‌ಗೆ ಸಲ್ಲಿಸಬೇಕಾದ ಮನವಿಯ ಕುರಿತು ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಿಬಿಎಸ್‌ಇಯಿಂದ ನೀಟ್ ಕಟ್‌ಆಫ್ ಮಾರ್ಕ್ಸ್ ಬಂದ ನಂತರವೇ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಎಷ್ಟು ರ್‍ಯಾಂಕ್ ಮಿತಿಯಲ್ಲಿ ಸೀಟು ಹಂಚಿಕೆ ಆಗಲಿದೆ ಎಂಬಿತ್ಯಾದಿಯನ್ನು ಈಗ ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಅಥವಾ ಪಾಲಕರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
– ಗಂಗಾಧರಯ್ಯ, ಕೆಇಎ ಆಡಳಿತಾಧಿಕಾರಿ