Advertisement

ಹೊರ ರೋಗಿಗಳೊಂದಿಗೆ ಸೇರಿ ವೈದ್ಯೆ ಪ್ರತಿಭಟನೆ!

11:30 AM May 26, 2019 | Team Udayavani |

ರೋಣ: ಸೂಕ್ತ ಸಮಯದಲ್ಲಿ ವ್ಯವಸ್ಥಿತ ಚಿಕಿತ್ಸೆ ದೊರೆಯದ ಸಂದರ್ಭದಲ್ಲಿ ವೈದ್ಯರ ವಿರುದ್ಧ ರೋಗಿಗಳು ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಗಳೊಂದಿಗೆ ವೈದ್ಯೆ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರೋಣ ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ವಿವಿಧ ಗ್ರಾಮಗಳಿಂದ ಆಗಮಿಸುತ್ತಾರೆ. ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಪ್ರತಿನಿತ್ಯ ನಾಲ್ಕು ವೈದ್ಯರು ಬೇಕಾಗುತ್ತದೆ. ಆದರೆ ಶನಿವಾರ ಎನ್‌.ಎನ್‌. ನಾಶಿಪುಡಿಯವರನ್ನು ಹೊರತುಪಡಿಸಿ ಬೇರೆ ಯಾವುದೇ ವೈದ್ಯರಿರಲಿಲ್ಲ. ಇದರಿಂದ ಆಸ್ಪತ್ರೆ ಆಡಳಿತಾಧಿಕಾರಿ ವಿರುದ್ಧ ಆಕ್ರೋಶಗೊಂಡ ಹೊರ ರೋಗಿಗಳು ಹಾಗೂ ವೈದ್ಯೆ ಎನ್‌.ಎನ್‌.ನಾಶಿಪುಡಿ ಪ್ರತಿಭಟನೆ ನಡೆಸಿದರು.

ಡಾ| ಎನ್‌.ಎನ್‌. ನಾಶಿಪುಡಿ ಅಸಹಾಯಕತೆ ತೋರ್ಪಡಿಸಿ, ಶನಿವಾರ ನಾನು ಆಸ್ಪತ್ರೆಗೆ ಆಗಮಿಸಿದಾಗ ನೂರಾರು ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದರು. ನನ್ನ ಪ್ರಯತ್ನ ಮೀರಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಒಬ್ಬಳಿಗೆ ನಿರ್ವಹಣೆ ಮಾಡಲು ಅಸಾಧ್ಯವಾದಾಗ ಗೈರಾಗಿದ್ದ ವೈದ್ಯರಿಗೆ ದೂರವಾಣಿ ಕರೆ ಮಾಡಿ ಆಗಮಿಸುವಂತೆ ಕೇಳಿಕೊಂಡರೂ ಸ್ಪಂದಿಸದಿರುವುದರಿಂದ ರೋಗಿ ಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಬೇಕಾಯಿತು ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಹೊರ ರೋಗಿಗಳಾದ ಶೈನಾಜಬೀ ಮಾಟಲದಿನ್ನಿ, ಗೀರಿಜವ್ವ ನವಲಗುಂದ, ಗೌರಮ್ಮಾ ತಳ್ಳಿಕೇರಿ, ಸುಕನ್ಯಾ ಕೊಡಿಕೊಪ್ಪ, ಶೋಭಾ ಗಡ್ಡಿ, ನೂರಜಾನ್‌ ಬಳ್ಳಾರಿ, ಸುನಂದಾ ನಿಲಗುಂದ, ಸವಿತಾ ಹೂಗಾರ, ಸುವರ್ಣಾ ಇಟಗಿ, ಸುಧಾ ಕಮ್ಮಾರ, ಲಲಿತಾ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next