Advertisement

ವರ ಹುಡುಕಿಕೊಡದ ಮ್ಯಾಟ್ರಿಮನಿ ವೆಬ್‌ಗೆ ದಂಡ!

10:16 AM Oct 20, 2019 | Team Udayavani |

ನವದೆಹಲಿ: ಹರ್ಯಾಣ ವ್ಯಕ್ತಿಯೊಬ್ಬರ ಪುತ್ರಿಗೆ ಸೂಕ್ತ ಸಂಗಾತಿ ಹುಡುಕಿಕೊಡದ ಮ್ಯಾಟ್ರಿಮನಿ ಜಾಲತಾಣವೊಂದಕ್ಕೆ ಚಂಡೀಗಢ ಗ್ರಾಹಕರ ವೇದಿಕೆ 62,000 ರೂ. ದಂಡ ವಿಧಿಸಿದೆ.

Advertisement

ಹರ್ಯಾಣದ ಸುರೇಂದ್ರ ಪಾಲ್‌ ಸಿಂಗ್‌ ಚಾಹಲ್‌ ದಂಪತಿಯು, ವೈದ್ಯೆಯಾಗಿರುವ ಹಾಗೂ ಮಂಗಳದೋಷವುಳ್ಳ ತಮ್ಮ ಪುತ್ರಿಗಾಗಿ “ವೆಡ್ಡಿಂಗ್‌ ವಿಶ್‌’ ಎಂಬ ಖಾಸಗಿ ವಧು-ವರ ಅನ್ವೇಷಣೆ ವೆಬ್‌ಸೈಟ್‌ನಲ್ಲಿ ಗಂಡು ಹುಡುಕಲು ಮುಂದಾಗಿದ್ದರು. ವೆಬ್‌ಸೈಟ್‌ನ ಪ್ರತಿನಿಧಿಗಳ ಸೂಚನೆಯಂತೆ, ದಂಪತಿಯು ವೆಬ್‌ಸೈಟ್‌ನ 50,000 ರೂ. ಮೌಲ್ಯದ ರಾಯಲ್‌ ಪ್ಯಾಕೇಜ್‌ಗೆ ಚಂದಾದಾರರಾಗಿದ್ದರು. ಅದರಡಿ ಬಂದ ಗಂಡುಗಳ ಪ್ರೊಫೈಲ್‌ಗ‌ಳು ಅವರ ಮಗಳ ವಿದ್ಯಾರ್ಹತೆ, ಉದ್ಯೋಗಕ್ಕೆ ಸರಿಹೊಂದಲೇ ಇಲ್ಲ. ಹಾಗಾಗಿ, ಹಣ ವಾಪಸ್‌ ಕೊಡುವಂತೆ ದಂಪತಿ, ವೆಬ್‌ಸೈಟ್‌ಗೆ ಲಾಯರ್‌ ನೋಟಿಸ್‌ ಕಳಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ, ಅವರು ಚಂಡೀಗಢ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next