ಗದಗ: ಆರ್ ಎಂಪಿ ವೈದ್ಯರೊಬ್ಬರು ಮನಸೋಯಿಚ್ಛೆ ಬ್ಲೇಡ್ ನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ಗುರುರಾಜ್ ಜಾಗಿರದಾರ ಆತ್ಮಹತ್ಯೆ ಯತ್ನಿಸಿದ ವೈದ್ಯ. ನಗರದ ನಂದೀಶ್ವರ ಮಠದ ಹಿಂಭಾಗದಲ್ಲಿರುವ ತಮ್ಮ ಮನೆಯಲ್ಲಿ ಬ್ಲೇಡ್ ನಿಂದ ತಮ್ಮ ಎರಡೂ ಕಾಲುಗಳಿಗೆ ಗಾಯಪಡಿಸಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು.
ಇದನ್ನೂ ಓದಿ:ವಾಟ್ಸ್ಯಾಪ್ ಚಾಟ್ : “ಟೂಲ್ಕಿಟ್ ನ್ನು ಟ್ವೀಟ್ ಮಾಡ್ಬೇಡಿ” : ಥನ್ ಬರ್ಗ್ ಗೆ ದಿಶಾ ರವಿ ಮನವಿ
ಗುರುರಾಜ್ ಅವರು ನರಳಾಟವನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನೆ ಹಿನ್ನೆಲೆಯಲ್ಲಿ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಯಾವ ಐಎಎಸ್ ಅಧಿಕಾರಿ ಲಾಬಿಯೋ ಗೊತ್ತಿಲ್ಲ: ಕತ್ತಿ ವಿರುದ್ದ ರೇಣುಕಾಚಾರ್ಯ ಕಿಡಿ