Advertisement

ವೈದ್ಯ ವೈವಿಧ್ಯ

06:00 AM Nov 20, 2018 | Team Udayavani |

ಜೀವವಿಜ್ಞಾನ, ಪಿ.ಯು.ಸಿ.ಯಲ್ಲಿ ಪಿ.ಸಿ.ಎಂ.ಬಿ. ಓದಿದವರು ವೈದ್ಯ, ದಂತವೈದ್ಯ, ಪಶುವೈದ್ಯರೇ ಆಗಬೇಕೆಂದಿಲ್ಲ. ಎಂ.ಬಿ.ಬಿ.ಎಸ್‌, ಜಯಾಲಜಿ ಓದಿದವರು ಕೈಗೊಳ್ಳಬಹುದಾದ ಇತರೆ ವೃತ್ತಿಗಳತ್ತ ಒಂದು ಕುಡಿನೋಟ ಇಲ್ಲಿದೆ…

Advertisement

ಪರಿಚಯದವರೊಬ್ಬರ ಮಕ್ಕಳಲ್ಲಿ ಒಬ್ಬಳು ವೈದ್ಯಕೀಯ ಪದವಿ ಮುಗಿಸಿ ಪ್ರಾಕ್ಟೀಸ್‌ ಆರಂಭಿಸಿದ್ದಳು. ಮತ್ತೂಬ್ಬಳು ಬಯೊಟೆಕ್ನಾಲಜಿ ಪದವಿ ಅಂತಿಮ ವರ್ಷ. “ಕೊನೆಯ ಮಗನನ್ನೂ ಡಾಕ್ಟರ್‌ ಮಾಡುತ್ತೀಯೋ?’ ಎಂದು ಸುಮ್ಮನೆ ಕೇಳಿದೆ. ಪರಿಚಯದವರು ಸಿಡುಕಿದರು, “ಮಗ ಜೆನೆಟಿಕ್ಸ್‌ ಅಲ್ಲಿ ಬಿ.ಎಸ್ಸಿ ಮುಗಿಸಿದ್ದಾನೆ ನಿಜ. ಆದರೆ ಬಯಾಲಜಿ ಓದಿದವರೆಲ್ಲರೂ ಡಾಕ್ಟರ್‌ ಆಗಲೇಬೇಕಾ? ಅವನಿಗೀಗ ಈಗ ಬನ್ನೇರುಘಟ್ಟದ ಬಳಿ 2 ಎಕರೆ ಜಮೀನು ಕೊಡಿÕದೀವಿ. ಮುಂದಿನ ವರ್ಷದಿಂದ ಡೈರಿ ಫಾರ್ಮಿಂಗ್‌ ಮಾಡ್ತಾನೆ. ನಿಮ್ಮನೆಗೂ ಹಾಕಿಸ್ಕೊ ಶುದ್ಧ ಹಾಲು!’ ಎಂದರು. ಇದನ್ನು ಕೇಳಿ ಶುದ್ಧ ಹಾಲು ಕುಡಿದಷ್ಟೆ ಖುಷಿಯಾಯಿತು. ಇಂಥ ವಿಶಾಲ ಆಲೋಚನೆ ಎಲ್ಲರಿಗೂ ಬಂದರೆ ಚೆನ್ನ. ಜೀವವಿಜ್ಞಾನ, ಪಿ.ಯು.ಸಿ.ಯಲ್ಲಿ ಪಿ.ಸಿ.ಎಂ.ಬಿ. ಓದಿದವರು ವೈದ್ಯ, ದಂತವೈದ್ಯ, ಪಶುವೈದ್ಯರೇ ಆಗಬೇಕೆಂದಿಲ್ಲ. ಎಂ.ಬಿ.ಬಿ.ಎಸ್‌, ಜಯಾಲಜಿ ಓದಿದವರು ಕೈಗೊಳ್ಳಬಹುದಾದ ಇತರೆ ವೃತ್ತಿಗಳತ್ತ ಒಂದು ಕುಡಿನೋಟ ಇಲ್ಲಿದೆ. 

ಪರಿಸರ ವಿಜ್ಞಾನಿ
ಎನ್ವಿರಾನ್‌ಮೆಂಟಲ್‌ ಸೈಂಟಿಸ್ಟ್‌! ಅಹ್‌ ಎಂತಹ ರೋಚಕ ಪದವಿ! ನೀವು ಪರಿಸರವಿಜ್ಞಾನದಲ್ಲಿ ವಿಜ್ಞಾನದ ಪದವಿ ಪಡೆಯಬಹುದು. ಪರಿಸರವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಕುರಿತು, ಪರಿಸರಕ್ಕೆ ಹಾನಿಕಾರಕವಾದ ಅಂಶಗಳನ್ನು ಗುರುತಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗಗಳನ್ನು ಈ ಪದವಿ ಅಧ್ಯಯನದಲ್ಲಿ ಅಭ್ಯಸಿಸುತ್ತೀರಿ. ಮುಂದೊಂದು ದಿನ ನೀವು ನೀಡುವ ಸಲಹೆ, ಮಾರ್ಗದರ್ಶನಗಳನ್ನು ದೊಡ್ಡ ಉದಿಮೆದಾರರು, ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಫೊರೆನ್ಸಿಕ್‌ ವಿಜ್ಞಾನಿ
ಅಪರಾಧಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಭಿನ್ನವಾಗಿ ಆಲೋಚಿಸಿ ಅಪರಾಧಿಗಳನ್ನು ಬಲೆಗೆ ಕೆಡವಬಲ್ಲ ಸಾûಾಧಾರಗಳನ್ನು ಕಲೆಹಾಕುವಲ್ಲಿ ಪೊಲೀಸರಿಗೆ ನೆರವಾಗುವವರು ಫೊರೆನ್ಸಿಕ್‌ ತಜ್ಞರು. ಕೇವಲ ಬೆರಳಚ್ಚು ತಜ್ಞತೆ ಹೊಂದಿರುವುದಲ್ಲದೆ ಅಪರಾಧ ನಡೆದ ಸ್ಥಳದ ಸಂಪೂರ್ಣ ಮಹಜರು ನಡೆಸುವಲ್ಲಿ ಇವರ ಪಾತ್ರ ಬಹಳ ಮುಖ್ಯ. ಇಡೀ ದೃಶ್ಯದ ಪುನನಿರ್ಮಾಣ ಮಾಡುವ ಮನೋಸಾಮರ್ಥ್ಯ ಗಳಿಸುವುದು ಈ ಪದವಿಯ ಉದ್ದೇಶ. ಸರ್ಕಾರಿ ಅಲ್ಲದೆ ಖಾಸಗಿ ವಲಯದಲ್ಲೂ ಇವರಿಗೆ ಬೇಡಿಕೆಯಿದೆ.

ಆಪ್ಟೊಮೆಟ್ರಿಸ್ಟ್‌ (ನೇತ್ರ ಚಿಕಿತ್ಸಕ)
ನೇತ್ರ ವಿಜ್ಞಾನದಲ್ಲಿ ಪದವಿ ಹೊಂದಿದವರು ನೇತ್ರ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬಹುದು. ನೇತ್ರ ರಕ್ಷಣೆ ಮತ್ತು ದೃಷ್ಟಿಗೆ ಸಂಬಂಧಿಸಿದ ಆರೋಗ್ಯ ರಕ್ಷಣೆಯಲ್ಲಿ ಪರಿಣಿತಿ ಗಳಿಸುವುದು ಈ ಪದವಿಯ ಉದ್ದೇಶ. ನೇತ್ರ ಪರೀಕ್ಷೆ ಮಾಡಿ ದೃಷ್ಟಿ ದೋಷ ನಿವಾರಣೆಗೆ ಕನ್ನಡಕವನ್ನು ಮತ್ತು ಕಾಂಟಾಕ್ಟ್ ಲೆನ್ಸ್‌ಗಳನ್ನು ಸೂಚಿಸುವುದು ಇವರ ಕೆಲಸ. ನೇತ್ರವೈದ್ಯರ ಜೊತೆಯಲ್ಲಿಯೋ ಅಥವ ತಾವೇ ಮುಕ್ತವಾಗಿಯೋ ದೃಷ್ಟಿಪರೀಕ್ಷಕರಾಗಿ ಇವರು ಕೆಲಸ ಮಾಡಬಹುದು.

Advertisement

ವಾಕ್‌ ಶ್ರವಣ ಚಿಕಿತ್ಸಕ (ಸ್ಪೀಚ್‌ ಥೆರಪಿಸ್ಟ್‌)
ಶ್ರವಣ ಮತ್ತು ವಾಕ್‌ ಪದವಿ ಗಳಿಸಿ ಅನುಪಮ ಸೇವೆ ಸಲ್ಲಿಸುವ ಅವಕಾಶವಿದೆ. ಇಂಗ್ಲೆಂಡ್‌ ದೇಶದ ರಾಜ ವಾಕ್‌ ಸಮಸ್ಯೆಯಿಂದ ಬಳಲುತ್ತಿದ್ದ. ಅದನ್ನು ನಿವಾರಿಸಿ ಆತ ಜಗತøಸಿದ್ಧ ಸ್ಪೀಚ್‌ ನೀಡುವಂತೆ ಮಾಡಿದ ಹೆಗ್ಗಳಿಕೆ ಸ್ಪೀಚ್‌ ಥೆರಪಿಸ್ಟ್‌ನದು. ಈ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕರನ್ನು ಗುಣಪಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬಹುದು. ಹುಟ್ಟಿನಿಂದಲೇ ಶ್ರವಣ-ವಾಕ್‌ ದೋಷವಿರುವ ಮಕ್ಕಳಿಗಷ್ಟೇ ಅಲ್ಲದೆ ಅಪಘಾತ, ಪಾರ್ಶ್ವವಾಯು ಕಾರಣಗಳಿಂದಾಗಿ ವಾಕ್‌-ಶ್ರವಣ ಸಮಸ್ಯೆ ಎದುರಿಸುತ್ತಿರುವವರಿಗೆ ಸೂಕ್ತ ಚಿಕಿತ್ಸೆ, ತರಬೇತಿ ನೀಡಲು ಈ ಪದವಿ ಕೋರ್ಸ್‌ನಲ್ಲಿ ತಯಾರಿ ನೀಡಲಾಗುತ್ತದೆ.

ಆಹಾರ ತಜ್ಞ
ಈ ವೃತ್ತಿಗೆ ಇಳಿಯಲು ಫ‌ುಡ್‌ ಟೆಕ್ನಾಲಜಿಯಲ್ಲಿ ಬಿ.ಎಸ್‌ಸಿ ಪದವಿ ಮಾಡಬೇಕಾಗುತ್ತದೆ. ಆಹಾರದ ಗುಣಮಟ್ಟ ವೃದ್ಧಿ, ಪೌಷ್ಟಿಕಾಂಶದ ಸಮತೋಲನ, ಆಹಾರದ ಸಂಸ್ಕರಣೆ ಮತ್ತು ಸಂರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಆಳವಾದ ಕಲಿಕೆ ತರಬೇತಿ ಪಡೆಯಲು ಈ ಪದವಿ ನೆರವಾಗುತ್ತದೆ. ಇಂದು ಜಾಗತಿಕ ವಲಯದಲ್ಲಿ ಆಹಾರ ತಂತ್ರಜ್ಞಾನಿಗಳಿಗೆ ಅಪಾರ ಬೇಡಿಕೆಯಿದೆ. ಫ‌ುಡ್‌ಸ್ಟ್ರೀಟ್‌ಗಳು, ಹೋಟೆಲ್‌ ಉದ್ಯಮ ವಿಸ್ತಾರಗೊಳ್ಳುತ್ತಿರುವಂತೆ ಫ‌ುಡ್‌ ಟೆಕ್ನಾಲಜಿಸ್ಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಫಿಸಿಯೊ ಥೆರಪಿಸ್ಟ್‌
ಇಂದು ಬ್ಯಾಚಲರ್‌ ಇನ್‌ ಫಿಸಿಯೊಥೆರಪಿ ಪಡೆದವರು ಕೂಡ ಬಹಳ ಬೇಡಿಕೆ ಹೊಂದಿದ್ದಾರೆ. ಅಂಗಾಂಗಗಳ ಕ್ಷಮತೆ ಕಳೆದುಕೊಂಡವರಿಗೆ ಪುನಶ್ಚೆçತನ್ಯ ಒದಗಿಸುವುದು ಫಿಸಿಯೊಥೆರಪಿ. ವ್ಯಾಯಾಮ, ಮಸಾಜ್‌, ವ್ಯಾಕ್ಸ್‌, ಶಾಖ, ವಿದ್ಯುತ್‌ ಕಂಪನಗಳನ್ನು ಬಳಸಿ ಆರೋಗ್ಯವನ್ನು ಮರಳಿಸುವುದೇ ಈ ಚಿಕಿತ್ಸಕರ ಕಾಯಕ. ಆಸ್ಪತ್ರೆಗಳಲ್ಲಿ, ಕ್ರೀಡಾಂಗಣಗಳಲ್ಲಿ ಈ ಸೇವೆ ಸಲ್ಲಿಸುವುದರ ಜೊತೆಗೆ ಮನೆಯಲ್ಲೂ ಈ ಸೇವೆ ನೀಡಬಹುದು.

– ರಘು ವಿ., ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next