ನಿನ್ನ ಮನೆಯೆದುರು ದೀನನಂತೆ ದಿನವಿಡೀ ಕಾದರೂ ಕಠೊರ ಬಾಗಿಲುಗಳು ಒಂದು ಬಾರಿಯೂ ನಿನ್ನನ್ನು ತೋರಿಸುವುದೇ ಇಲ್ಲ. ನಿನ್ನ ತಂದೆ ದೂರ್ವಾಸ ಮುನಿಯಂತೆ ಕೆಕ್ಕರಿಸಿಕೊಂಡು ನೋಡುತ್ತಿರುತ್ತಾರೆ. ನಿನ್ನ ತಾಯಿ ಮಾತ್ರ ತನ್ನ ಅಸಹಾಯಕ ನಿಲುವನ್ನು ಮೋರೆಯಲ್ಲಿ ವ್ಯಕ್ತಪಡಿಸುತ್ತಾಳೆ.
ನನ್ನ ನಡುಮಧ್ಯಾಹ್ನದ ಹಗಲುಗಳು ಕಳೆಯುವುದೇ ಹಾಗೆ. ಗುಬ್ಬಿ ಗೂಡಿನಂಥ ಕೋಣೆಯಲ್ಲಿ ತಿರುಗುವ ಫ್ಯಾನಿನಡಿಯಲ್ಲಿ, ಅಂಗಾತ ಬಿದ್ದುಕೊಂಡು, ಬಿಟ್ಟಕಂಗಳ ಬಿಟ್ಟ ಹಾಗೆ ನಿನ್ನ ಜೊತೆ ಕಳೆದ, ಇನ್ನೆಂದೂ ಬಾರದ ಆ ಸವಿಘಳಿಗೆಗಳನ್ನು ಕಣ್ಣಿಗೆ ತುಂಬಿಕೊಳ್ಳುತ್ತಾ ಕಣ್ಣೀರಾಗುವುದು. ಹೊರಗಿನ ಕೋಣೆಯಲ್ಲಿ ಮನೆಮಂದಿಯೆಲ್ಲ ಯಾವುದೋ ಲವ್‌ಸ್ಟೋರಿಯ ಸಿನಿಮಾವನ್ನು ಆಸಕ್ತಿಯಿಂದ ನೋಡುತ್ತಿರುವ ಹೊತ್ತಿನಲ್ಲೇ, ನಾನು ನನ್ನ ಕೋಣೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಮುರಿದು ಬಿದ್ದ ಪ್ರೀತಿಯ ತಲೆ ನೇವರಿಸುತ್ತಾ ನೋವು ತಿನ್ನುತ್ತಿರುತ್ತೇನೆ. ಹೇಳು ಈ ನೋವು ನ್ಯಾಯವೇ?
ಅದೆಷ್ಟೋ ಬಾರಿ ನಿನ್ನ ಮೊಬೈಲಿಗೆ ರಿಂಗ್ ಮಾಡಿದರೂ ಅದು ನಿರ್ಜಿàವ. ಕಳುಹಿಸಿದ ಮೆಸೇಜುಗಳೆಲ್ಲ ತಿರುಗಿ ಔಟ್ ಬಾಕ್ಸ್‌ಗೆ ಬಂದು ಅಣಕಿಸುತ್ತವೆ. ನಿನ್ನ ಮನೆಯೆದುರು ದೀನನಂತೆ ದಿನವಿಡೀ ಕಾದರೂ ಕಠೊರ ಬಾಗಿಲುಗಳು ಒಂದು ಬಾರಿಯೂ ನಿನ್ನನ್ನು ತೋರಿಸುವುದೇ ಇಲ್ಲ. ನಿನ್ನ ತಂದೆ ದೂರ್ವಾಸ ಮುನಿಯಂತೆ ಕೆಕ್ಕರಿಸಿಕೊಂಡು ನೋಡುತ್ತಿರುತ್ತಾರೆ. ನಿನ್ನ ತಾಯಿ ಮಾತ್ರ ತನ್ನ ಅಸಹಾಯಕ ನಿಲುವನ್ನು ಮೋರೆಯಲ್ಲಿ ವ್ಯಕ್ತಪಡಿಸುತ್ತಾಳೆ.
ಮುರಿದುಕೊಳ್ಳುವುದೇ ಆದರೆ ನೀನು ಪ್ರೀತಿಸಿದ್ದು ಏಕೆ ಎಂಬ ಅರ್ಥವಿಲ್ಲದ ಪ್ರಶ್ನೆ ತಲೆ ಕೊರೆಯುತ್ತದೆ. ನಮ್ಮ ಪ್ರೀತಿಗೆ ಜಾತಿ ಅಡ್ಡ ಬರಲಿಲ್ಲ, ದುಡ್ಡು ಹೊರೆಯಾಗಲಿಲ್ಲ, ವಯಸ್ಸು ತೊಂದರೆ ಕೊಡಲಿಲ್ಲ, ನೌಕರಿ ಲಕ್ಷ್ಮಣ ರೇಖೆ ಹಾಕಲಿಲ್ಲ. ಆದರೆ, ಅದ್ಯಾರೋ ರೌಡಿ ಹುಡುಗರ ಜೊತೆ ನಾನಿದ್ದೆ ಎನ್ನುವ ಒಂದೇ ಒಂದು ಕಾರಣಕ್ಕೆ ನಿಮ್ಮಪ್ಪ ನಮ್ಮಿಬ್ಬರ ಪ್ರೀತಿಗೆ ಎಳ್ಳು ನೀರು ಬಿಟ್ಟು ಬಿಟ್ಟರು. ಸಾಕಷ್ಟು ಸಲ ಸಮಜಾಯಿಷಿ ನೀಡ ಹೋದರೂ, “ಒಬ್ಬ ರೌಡಿಗೆ ನಾವು ಮಗಳನ್ನು ಕೊಡೋದಿಲ್ಲ’ ಎನ್ನುವ ಸ್ಪಷ್ಟ ನಿರ್ಧಾರ ಸಾರಿಬಿಟ್ಟರು.
ಅಲ್ಲಿಯವರೆಗೆ ಸಾವಿರ ದೇವರುಗಳ ಮೇಲೆ ಆಣೆ ಮಾಡಿ, ನದಿ-ಸಾಗರಗಳ ನೀರನ್ನು ತಲೆಗೆ ಸುರುವಿಕೊಂಡು, ಭೂಮಿ-ಆಗಸದ ಸಾಕ್ಷಿ ಕೊಟ್ಟು, ಅಮರಪ್ರೇಮಿಗಳ ವಕಾಲತ್ತು ವಹಿಸಿ ಎಂದೆಂದಿಗೂ ಅಗಲದ ದೃಢ ನಿರ್ಧಾರ ತಳೆದಿದ್ದ ನೀನು, ನಿಮ್ಮಪ್ಪ ಹಾಕಿದ ಒಂದೇ ಆವಾಜಿಗೆ ಹೆದರಿ ಒಳಕೋಣೆ ಸೇರಿಬಿಟ್ಟೆ. ಮತ್ತು ಆ ಕ್ಷಣದಿಂದಲೇ ನಾನು ದಿಕ್ಕೆಟ್ಟ ಪರದೇಶಿ ಆಗಿಬಿಟ್ಟೆ.
ನಿಜಕ್ಕೂ ಅವತ್ತೇನಾಯ್ತು ಗೊತ್ತಾ..? ನನ್ನ ಜೀವದ ಗೆಳೆಯನನ್ನು ಯಾರೋ ಪೋಲಿಗಳು ಕೆಣಕಿದ್ದರಂತೆ. ನಾವೆಲ್ಲ ಸೇರಿ ಅವರಿಗೆ ಎಚ್ಚರಿಕೆ ಕೊಡೋಣಾಂತ ಬೈಕ್ ಮೇಲೆ ಮೂರು ಮೂರು ಜನ ಕೂತ್ಕೊಂಡು, ಕೈಯಲ್ಲಿ ಹಾಕಿ ಸ್ಟಿಕ್ ಹಿಡ್ಕೊಂಡು ಜೋರಾಗಿ ಅರಚಾ¤ ಹೋಗ್ತಿದ್ವಿ. ಅದನ್ನು ನೋಡಿದ ನಿಮ್ಮಪ್ಪ ನನ್ನನ್ನೇ ರೌಡಿ ಅಂತ ನಂಬಿ ಬಿಡೋದಾ?
ಬೇಡ ಚಿನ್ನು, ನಿನ್ನ ಗಾಢ ಮೌನ ಎದೆಯ ಮೇಲೆ ಕಾದ ಕಬ್ಬಿಣದ ಸೀಸದಂತೆ ಬರೆ ಎಳೆಯುತ್ತಿದೆ. ನಿನ್ನ ಬಿಟ್ಟಿರಲಾರದ ನಾನು ಒಂದಲ್ಲ ಒಂದಿವ್ಸ ಚೆಲುವಿನ ಚಿತ್ತಾರದ ಗಣೇಶ್‌ನ ಹಾಗೆ ಹುಚ್ಚನಂತೆ, ತಲೆ ಕೆದರಿಕೊಂಡು ನಿನ್ನೆದುರು ಬಂದರೆ ಚೆನ್ನಾಗಿರುತ್ತಾ ಹೇಳು?
-ನಾಗೇಶ್ ಜೆ.ನಾಯಕ