Advertisement

ನಿಮಗೂ ನಾನು ಅಡ್ಜಸ್ಟ್ ಮಾಡಿಕೊಂಡಿರಬಹುದು ಅಂತ ಅನುಮಾನ ಇದೆಯಾ?

08:38 AM Feb 11, 2019 | Sharanya Alva |

ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಆಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು, ನಿಮಗೂ ನನ್ನ ಮೇಲೆ ಅನುಮಾನವೇ? ಯಾಕೆ ಒಂದೂ ಮಾತನಾಡಿಲ್ಲ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಮೂಲಕ ಸದನದಲ್ಲಿ ನಗೆಯ ಅಲೆಯುಕ್ಕಿಸಿದ ಪ್ರಸಂಗ ನಡೆಯಿತು. ಅಲ್ಲದೇ ಸಿದ್ದರಾಮಯ್ಯ ಅವರು ಕೂಡಾ ಚರ್ಚೆಯಲ್ಲಿ ಪಾಲ್ಗೊಂಡು ಅಭಿಪ್ರಾಯವ್ಯಕ್ತಪಡಿಸಿದರು.

Advertisement

ಆಡಿಯೋ ಕುರಿತ ಚರ್ಚೆಯ ಸಂದರ್ಭದಲ್ಲಿ ಹಿಂಭಾಗದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್, ಎಲ್ಲರೂ ಮಾತನಾಡಿದ್ದಾರೆ, ಆದರೆ ನಿಮಗೂ ನನ್ನ ಮೇಲೆ ಅನುಮಾನ ಇದೆಯಾ? ಇಂತಹ ಪರಿಸ್ಥಿತಿಯಲ್ಲಿ ನೀವು ಸಹಾನುಭೂತಿ, ಧೈರ್ಯ ಹೇಳದೆ ಹೋದರೆ ಹೇಗೆ?ಅಥವಾ ಇವ್ನು ಏನಾದರೂ ಅಡ್ಜಸ್ಟ್ ಮಾಡಿಕೊಂಡಿರಬುದು ಅಂತಾನಾ ಎಂಬುದಾಗಿ ಹೇಳಿದರು.

ಬಳಿಕ ಎದ್ದು ನಿಂತು ಮಾತನಾಡಿದ ಸಿದ್ದರಾಮಯ್ಯ, ನನಗೆ ನಿಮ್ಮ ಮೇಲೆ ಎಳ್ಳಷ್ಟು ಅನುಮಾನ ಬರಲು ಸಾಧ್ಯವೇ ಇಲ್ಲ. ನಾನು ಬಹಳ ವರ್ಷಗಳಿಂದ ನಿಮ್ಮ ವೈಯಕ್ತಿಕ, ಸಾರ್ವಜನಿಕ ಬದುಕು ನೋಡುತ್ತ ಬಂದಿದ್ದೇನೆ. ಹೇಗೆ ಬದುಕಿದ್ದೀರಿ ಅಂತ ಬಹಳ ಹತ್ತಿರದಿಂದ ನೋಡಿದ್ದೇನೆ. ಈ ವಿಚಾರದಲ್ಲಿ ಜನರು ಏನು ಹೇಳುತ್ತಾರೆ ಎಂಬುದು ಮುಖ್ಯ. ನಿಮ್ಮ ಸ್ಥಾನದ ಗೌರವ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನು ಮನವಿ ಮಾಡುವುದು ಏನೆಂದರೆ ನೀವು ಯಾವುದೇ ರೀತಿಯಿಂದಲೂ ವೈಯಕ್ತಿಕವಾಗಿ ಈ ಘಟನೆಯನ್ನು ನೋಡದೇ ಸದನದ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next