Advertisement

ಪ್ರಾರ್ಥನೆಗೆ ಮಸೀದಿ ಬೇಕೆ?

06:00 AM Sep 27, 2018 | Team Udayavani |

ನವದೆಹಲಿ: ಮಸೀದಿಯಲ್ಲಿಯೇ ಪ್ರಾರ್ಥನೆ ಮಾಡುವುದು ಇಸ್ಲಾಂನಲ್ಲಿ ಅಗತ್ಯವೇ ಎಂಬುದರ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಂಬಂಧ ಸುಪ್ರೀಂಕೋರ್ಟ್‌ ಗುರುವಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಇದು ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣಕ್ಕೆ ಒಳಪಟ್ಟಿದ್ದು, ಈ ಅಂಶದ ಅಂತಿಮ ನಿರ್ಧಾರವು ರಾಮಜನ್ಮಭೂಮಿ ಪ್ರಕರಣದ ತೀರ್ಪಿನ ಮೇಲೂ ಪರಿಣಾಮ ಬೀರಬಹುದಾಗಿದೆ. ಸದ್ಯ ಸಿಜೆಐ ದೀಪಕ್‌ ಮಿಶ್ರಾ, ನ್ಯಾ. ಅಶೋಕ್‌ ಭೂಷಣ್‌ ಮತ್ತು ಎಸ್‌ ಅಬ್ದುಲ್‌ ನಜೀರ್‌ ಒಳಗೊಂಡ ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. 1994 ರಲ್ಲಿ ಪ್ರಕರಣವೊಂದರಲ್ಲಿ ನೀಡಿದ ತೀರ್ಪಿನ ಪ್ರಕಾರ, ಇಸ್ಲಾಂ ಧರ್ಮವನ್ನು ಅನುಸರಿಸಲು ಮಸೀದಿ ಪ್ರಮುಖ ಭಾಗವಲ್ಲ. ಪ್ರಾರ್ಥನೆಯನ್ನು ಎಲ್ಲಾದರೂ ಮಾಡಬಹುದು ಎಂದಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next